ಹಾವೇರಿ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸುರಕ್ಷಾ ವಿಧಾನಗಳೊಂದಿಗೆ ಸಕಲ ಸಿದ್ದತೆ 

ಒಟ್ಟು 1420 ಕೊಠಡಿಗಳನ್ನು ಪರೀಕ್ಷಾ ಕೇಂದ್ರಗಳಾಗಿ ಸಿದ್ಧ ಮಾಡಿಕೊಳ್ಳಲಾಗಿದೆ. 1006 ಕೊಠಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಕೊಠಡಿಗಳಿಗೆ, 91 ಕೇಂದ್ರಗಳ ಕಾರಿಡಾರ್​ಗಳಿಗೆ  ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಅಧೀಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾವೇರಿ(ಜೂ.24): ಹಾವೇರಿ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸುರಕ್ಷಾ ವಿಧಾನಗಳೊಂದಿಗೆ ಸರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಮಕ್ಕಳು ನಿರಾಂತಕವಾಗಿ ನಾಳೆ ನಡೆಯುವ ಪರೀಕ್ಷೆಗೆ ಹಾಜರಾಗಬೇಕಿದೆ.

ಇಂದು ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಯೋಗಿಕ ಸುರಕ್ಷತಾ ಕ್ರಮಗಳನ್ನು ಮಾಡಲಾಯಿತು. ನಾಳೆ ಹೇಗೆಲ್ಲಾ ಪರೀಕ್ಷೆ ನಡೆಸಲಾಗುತ್ತದೆ ಎಂಬುವುದನ್ನು ಶಾಲಾ ಶಿಕ್ಷಕರು ನಿಯಮಗಳ ಪ್ರಕಾರ ಮಾಡಿ ತೋರಿಸಿದರು. ಒಂದು ಕೊಠಡಿಯಲ್ಲಿ 16 ವಿಧ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಒಂದೂವರೆ ಮೀಟರ್ ನಷ್ಟು ಅಂತರ ಕಾಯ್ದುಕೊಳ್ಳಬೇಕಿದೆ. ಆ ಮೂಲಕ ನಿರಾತಂಕವಾಗಿ ಮಕ್ಕಳು ಎಕ್ಸಾಮ್ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 75 ಮುಖ್ಯ ಪರೀಕ್ಷಾ ಕೇಂದ್ರಗಳು, 15 ಬ್ಲಾಕ್ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 22,511 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದಾರೆ. 407 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡು ವಲಸೆ ಹೋಗಿದ್ದಾರೆ. 695 ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ಹಾವೇರಿಯಲ್ಲಿ ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದಾರೆ.

Gold Price: ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿಯಲ್ಲಿ ಕೊಂಚ ಇಳಿಕೆ

ಒಟ್ಟು 1420 ಕೊಠಡಿಗಳನ್ನು ಪರೀಕ್ಷಾ ಕೇಂದ್ರಗಳಾಗಿ ಸಿದ್ಧ ಮಾಡಿಕೊಳ್ಳಲಾಗಿದೆ. 1006 ಕೊಠಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಕೊಠಡಿಗಳಿಗೆ, 91 ಕೇಂದ್ರಗಳ ಕಾರಿಡಾರ್​ಗಳಿಗೆ  ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 75 ಮುಖ್ಯ ಅಧೀಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಎಲ್ಲಾ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಸಂಪರ್ಕ ಸಾಧಿಸಿ ಸಾರಿಗೆ ವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳಲಾಗಿದೆ. 22,511 ವಿದ್ಯಾರ್ಥಿಗಳ 5453 ವಿದ್ಯಾರ್ಥಿಗಳು ಕಾಲ್ನಡಿಗೆಯಿಂದ, 2110 ವಿದ್ಯಾರ್ಥಿಗಳು ಬೈಸಿಕಲ್ ಮೂಲಕ, 10,933 ವಿದ್ಯಾರ್ಥಿಗಳು ಕಾರು, ಬೈಕ್ ಮೂಲಕ ಸ್ವಂತ ವಾಹನ ಬಳಸಿ ಬರಲಿದ್ದಾರೆ.

720 ಮಕ್ಕಳಿಗೆ ಖಾಸಗಿ ಶಾಲೆಯವರು ತಮ್ಮ ವಾಹನ ಮೂಲಕ ಕರೆತರಲು ಖಚಿತಪಡಿಸಿದ್ದಾರೆ. 1440 ಮಕ್ಕಳು ಶಾಲಾ ವಾಹನದ ಮೂಲಕ ಬರಲಿದ್ದಾರೆ. 1846 ಮಕ್ಕಳು ಕೆ.ಎಸ್.ಆರ್.ಟಿ.ಸಿ. ರೂಟ್ ಬಸ್‍ಗಳಲ್ಲಿ ಬರಲಿದ್ದಾರೆಂದು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಇನ್ನು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್, ಹೋಂಗಾಡ್ರ್ಸ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ನಿಯಮಗಳು ಉಲ್ಲಂಘನೆಯಾಗದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಇದರ ಬಗ್ಗೆ ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹಾವೇರಿ ತಾಲೂಕು ಶಿಕ್ಷಣಾಧಿಕಾರಿಗಳು ಹೇಳಿದರು.
First published: