ರಾಮನಗರ: ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಸುಧಾರಿಸಿ ರೈತರಿಗೆ ಲಭದಾಯಕ ಬೆಳೆಗಳಾಗಿ ಮಾಡಲು ತಿಂಗಳಿಗೆ ಒಂದು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ಶಂಕರ್ ಅವರು ತಿಳಿಸಿದರು. ರಾಮನಗರದ ಬಿಡದಿಯಲ್ಲಿ ರೈತರ ರೇಷ್ಮೆ ಹಾಗೂ ತೆಂಗಿನ ತೋಟಗಳಿಗೆ ಭೇಟಿ ಕೊಟ್ಟು ಸಂವಾದ ನಡೆಸಿದರು. ತೆಂಗು ಹಾಗೂ ರೇಷ್ಮೆ ಬೆಳೆಗಳಲ್ಲಿ ಉಂಟಾಗುವ ರೋಗಗಳು ಹಾಗೂ ನಿಯಂತ್ರಣಾ ಕ್ರಮಗಳ ಬಗ್ಗೆ ತಿಳಿಯಲು ವಿಜ್ಞಾನಿಗಳು ಹಾಗೂ ಅಧಿಕಾರಿಗಳೊಂದಿಗೆ ಭೈರಮಂಗಲದ ಚಿನ್ನಸ್ವಾಮಿ ಅವರ ತೆಂಗಿನ ತೋಟಕ್ಕೆ ಹಾಗೂ ಮಧು ಅವರು ಬೆಳೆದಿರುವ ರೇಷ್ಮೆ ಬೆಳೆಯನ್ನು ಪರಿಶೀಲಿಸಿದರು.
ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ ರಾಜೇಂದ್ರ ಪ್ರಸಾದ್ ಅವರು ತೆಂಗಿನಲ್ಲಿ 4 ವಿವಿಧ ಬಿಳಿ ನೊಣದ ಪ್ರಬೇಧಗಳಿಂದ ಬಾಧೆ ಉಂಟಾಗಿ ಇಳುವರಿಗೆ ತೊಂದರೆಯಾಗುತ್ತಿದೆ. ಈ ರೋಗ ನಿವಾರಿಸಲು ರಾಸಾಯನಿಕ ಕೀಟನಾಶಕ ಸಿಂಪಡಿಸಬಾರದು. ಈ ರೋಗ ನಿವಾರಿಸಲು ಶಿಲೀಂದ್ರನಾಶಕ ಐಸೈಡಿಯಾ ಸಿಂಪಡಿಸಬೇಕು ಹಾಗೂ ಪರತಂತ್ರ ಜೀವಿಗಳನ್ನು ಉಪಯೋಗಿಸಬೇಕು ಎಂದರು. ಸಚಿವರಾದ ಶಂಕರ್ ಸ್ಥಳದಲ್ಲಿಯೇ ಐಸೈಡಿಯಾ ಸಿಂಪಡಣೆಯ ಬಗ್ಗೆ ಪ್ರಯೋಗಿಕವಾಗಿ ಮಾಹಿತಿ ಪಡೆದರು. ರೈತರು ಇವುಗಳ ಸಿಂಪರಣೆಗೆ ಬೇಕಿರುವ ಯಂತ್ರೋಪಕರಣಗಳನ್ನು ಯಂತ್ರಧಾರೆ ಯೋಜನೆಯಡಿ ಬಾಡಿಗೆಗೆ ಒದಗಿಸಿಕೊಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಧಿಕಾರಿಗಳಿಗೆ ತೆಂಗು ಬೆಳೆಗಾರರ ಸಂಖ್ಯೆ, ತೆಂಗು ಬೆಳೆಯ ವಿಸ್ತೀರ್ಣ ಹಾಗೂ ಬೇಕಿರುವ ಸಲಕರಣೆಗಳ ವಿವರ ನೀಡಿದರೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇನ್ನು ಪ್ರತಿ ತಿಂಗಳು ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲು ಚಿಂತಿಸಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ಬೆಳೆಯಲ್ಲಿ ಲಾಭದಾಯಕ ಹಾಗೂ ಸಂಕಷ್ಟದಲ್ಲಿರುವ ರೈತರು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಸರ್ಕಾರದಿಂದ ಬೇಕಿರುವ ಸಹಾಯಗಳ ಬಗ್ಗೆ ಚರ್ಚಿಸಬೇಕು ಎಂದ ಅವರು ತೋಟಗಾರಿಕೆ ಬೆಳೆ ಹಾಗೂ ರೈತರ ತೊಂದರೆಗಳ ಬಗ್ಗೆ ತಿಳಿದುಕೊಳ್ಳಲು ಜಿಲ್ಲೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾಗಡಿ ಶಾಸಕರಾದ ಎ.ಮಂಜುನಾಥ್ ಉಪಸ್ಥಿತಿ ಇದ್ದರು.
ಇದನ್ನು ಓದಿ: ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ
ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿ
ಇನ್ನು ಸಚಿವ ಆರ್.ಶಂಕರ್ ಗೆ ತೆಂಗು ಹಾಗೂ ರೇಷ್ಮೆ ಬೆಳೆಗಾರರು ನಾವು ಹಿಂದೆಯೆಲ್ಲ ಪ್ರಕೃತಿ ವಿಕೋಪದಿಂದ ಬೆಳೆಗಳನ್ನು ಕಳೆದುಕೊಂಡಿದ್ದೇವೆ. ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇವೆ. ಆದರೆ ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹಾಗಾಗಿ ನಮಗೆ ಪರಿಹಾರದ ಹಣ ಕೈಸೇರುವಂತೆ ಕ್ರಮ ವಹಿಸಿ ಎಂದು ಒತ್ತಾಯಿಸಿದರು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ