HOME » NEWS » District » ALAMATTI HYDRO POWER PLANT STARTED AMID COVID 19 WHICH PRODUCES 290 MW PER DAY HK

ಕೊರೋನಾ ಭೀತಿ ನಡುವೆಯೇ ಆಲಮಟ್ಟಿಯಲ್ಲಿ ಜಲ ವಿದ್ಯುತ್ ಉತ್ಫಾದನೆ ಆರಂಭ ; ನಿತ್ಯ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

ಒಟ್ಟು ಆರು ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಐದು ಘಟಕಗಳು ತಲಾ 55 ಮೆಗಾ ವ್ಯಾಟ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಮತ್ತೊಂದು ಘಟಕ ಕೇವಲ 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

news18-kannada
Updated:July 21, 2020, 3:50 PM IST
ಕೊರೋನಾ ಭೀತಿ ನಡುವೆಯೇ ಆಲಮಟ್ಟಿಯಲ್ಲಿ ಜಲ ವಿದ್ಯುತ್ ಉತ್ಫಾದನೆ ಆರಂಭ ; ನಿತ್ಯ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ
ಆಲಮಟ್ಟಿ ವಿದ್ಯುದಾಗಾರ
  • Share this:
ವಿಜಯಪುರ(ಜು. 21): ಬಸವ ನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಒಂದೆಡೆ ಕೊರೋನಾ ಶಾಕ್ ನೀಡುತ್ತಿದ್ದರೆ ಮತ್ತೊಂದೆಡೆ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಈಗ ವಿದ್ಯುತ್ ಉತ್ಪಾದನೆ ಜೋರಾಗಿದೆ. ಇಲ್ಲಿರುವ ಒಟ್ಟು ಆರು ಜಲವಿದ್ಯುತ್ ಘಟಕಗಳಲ್ಲಿ ಪ್ರತಿನಿತ್ಯ ಸುಮಾರು 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಆಲಮಟ್ಟಿ ಜಲಾಶಯಕ್ಕೆ ನಿರ್ಮಿಸಲಾಗಿರುವ ಜಲಾಶಯದಲ್ಲಿ ಜಲವಿದ್ಯುತ್ ಉತ್ಪಾದನೆಯೂ ಪ್ರಮುಖವಾಗಿದ್ದು, ಇಲ್ಲಿ ಒಟ್ಟು ಆರು ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಐದು ಘಟಕಗಳು ತಲಾ 55 ಮೆಗಾ ವ್ಯಾಟ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಮತ್ತೊಂದು ಘಟಕ ಕೇವಲ 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ಇಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಏಕೆಂದರೆ, ಬಹುತೇಕ ಮಹಾರಾಷ್ಟ್ದ ಪಶ್ಚಿಮ ಘಟ್ಟಗಳಲ್ಲಿ ಮತ್ತು ಬೆಳಗಾವಿಯ ಕೆಲ ಪ್ರದೇಶಗಳಲ್ಲಿ ಸುರಿಯುವ ಮಳೆಯಿಂದಾಗಿ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ. ಈ ನೀರಿನಿಂದಲೇ ಇಲ್ಲಿ ವಿದ್ಯುತ್ ಉತ್ಪಾನೆಯಾಗುವುದು ವಿಶೇಷತೆಗಳಲ್ಲೊಂದು.

519.60 ಮೀಟರ್ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಈಗ 517.28 ಮೀ. ನೀರು ಸಂಗ್ರಹವಿದೆ. ಒಟ್ಟು 123.081 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಈಗ 87.992 ಟಿಎಂಸಿ ನೀರು ಸಂಗ್ರಹವಾಗಿದೆ.

ಈಗ ಜಲಾಶಯಕ್ಕೆ 52,033 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 46,130 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ನೀರನ್ನು ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದಾಗಿ ಪ್ರತಿನಿತ್ಯ ಸರಾಸರಿ 90 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಇದನ್ನೂ ಓದಿ : ಕ್ಯಾಟರಿಂಗ್ ಕೆಲಸದ ಹುಡುಗನ ಡ್ರೋನ್ ಕನಸು ; ಅತ್ಯಂತ ಕಡಿಮೆ ವೆಚ್ಚದಲ್ಲಿ ಡ್ರೋನ್ ಹಾರಿಸಿದ ಪೋರ

ಜುಲೈ 6 ರಿಂದಲೇ ಇಲ್ಲಿ ವಿದ್ಯುತ್ ಉತ್ಪಾದನೆ ಘಟಕಗಳು ಕಾರ್ಯಾರಂಭ ಮಾಡಿದ್ದು, ಈವರೆಗೆ 1440 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಈ ವಿದ್ಯುತ್ ನ್ನು ಪವರ್ ಗ್ರಿಡ್ ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಅಲ್ಲಿಂದ ಈ ವಿದ್ಯುತ್ ಬೇರೆ ಬೇರೆ ಕಡೆ ಹಂಚಿಕೆಯಾಗುತ್ತಿದೆ ಎಂದು ಆಲಮಟ್ಟಿ ವಿದ್ಯುತ್ ಉತ್ಪಾದನೆ ಘಟಕದ ಸೂಪರಿಂಟೆಂಡೆಂಟ್ ಇಂಜಿನಿಯರ್ ರವಿಚಂದ್ರ ವೈ. ಶಿರಾಲಿ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.ಈ ಮಧ್ಯೆ ಕೆಪಿಸಿಎಲ್ ಗೆ ಸೇರಿದ ಈ ವಿದ್ಯುತ್ ಘಟಕದಲ್ಲಿ 60 ಜನ ಸಿಬ್ಬಂದಿ ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ನೀರಿನ ಒಳಹರಿವು ಮುಂಬರುವ ದಿನಗಳಲ್ಲಿ ಹೆಚ್ಚಾದರೂ ಕೂಡ ಇಲ್ಲಿ ವಿದ್ಯುತ್ ಉತ್ಪಾದನೆ ಮಾತ್ರ ಪ್ರತಿದಿನ 90 ಮಿಲಿಯನ್ ಯುನಿಟ್ ಗೆ ಮಾತ್ರ ಸೀಮಿತವಾಗಿರಲಿದೆ. ಏಕೆಂದರೆ ಇಲ್ಲಿ ಪ್ರತಿದಿನ 90 ಮಿಲಿಯನ್ ಯುನಿಟ್ ಮಾತ್ರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದೆ. ಪ್ರತಿದಿನ ಈ ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ 45,000 ಕ್ಯೂಸೆಕ್ಸ್ ನೀರು ಹರಿದರೆ ಸಾಕು ವಿದ್ಯುತ್ 90 ಮಿಲಿಯನ್ ವಿದ್ಯುತ್ ಉತ್ಪಾದನೆಯಾಗಲಿದೆ.

ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೋನಾ ಸಖತ್ ಸದ್ದು ಮಾಡುತ್ತ ಜನರಿಗೆ ಶಾಕ್ ನೀಡುತ್ತಿದ್ದರೆ, ಇಲ್ಲಿ ಆಲಮಟ್ಟಿಯಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಜನರಿಗೆ ಬೆಳಕು ನೀಡುತ್ತಿದೆ.
Published by: G Hareeshkumar
First published: July 21, 2020, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories