HOME » NEWS » District » ALAMATTI AND NARAYANAPUR FARMERS WILL GET WATER UPTO 21 MARCH 2021 SAYS DCM GOVIND KARAJOL MVSV HK

ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ: ಡಿಸಿಎಂ ಗೋವಿಂದ ಕಾರಜೋಳ

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಈಗ 120 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 38 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆಗೆಳು, ಕೆರೆಗೆ ನೀರು ತುಂಬಿಸುವ ಯೋಜನೆ ಮತ್ತು ಕೈಗಾರಿಕೆಗಳಿಗಾಗಿ ಮೀಸಲಿಡಲಾಗಿದೆ.

news18-kannada
Updated:November 13, 2020, 10:44 PM IST
ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ: ಡಿಸಿಎಂ ಗೋವಿಂದ ಕಾರಜೋಳ
ಡಿಸಿಎಂ ಗೋವಿಂದ ಕಾರಜೋಳ
  • Share this:
ವಿಜಯಪುರ(ನವೆಂಬರ್​. 13): ಈ ಬಾರಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹ ಇರುವುದರಿಂದ 2021ರ ಮಾ. 21ರ ವರೆಗೆ ಎರಡೂ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಆಲಮಟ್ಟಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನೀರಾವರಿ ಸಲಹಾ ಸಮಿತಿ ಅಂದರೆ ಸಿಇಸಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಮಾ. 21ರ ವರೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸಲಾಗುವುದು. ವಾರಾಬಂದಿ ಪದ್ಧತಿಯಂತೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆಲಮಟ್ಟಿ ಜಲಾಷಯಕ್ಕೆ ಒಂದು ಪದ್ಧತಿಯಾದರೆ, ನಾರಾಯಣಪುರ ಜಲಾಶಯಕ್ಕೆ ಪ್ರತ್ಯೇಕ ವಾರಾಬಂದಿ ನಿಗದಿ ಮಾಡಲಾಗಿದೆ. ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 14 ದಿನ ನೀರು ಹರಿಸಿ ಮುಂದಿನ 8 ದಿನಗಳ ಕಾಲ ನೀರು ಸ್ಥಗಿತಗೊಳಿಸಲಾಗುವುದು ಎಂದರು.

ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 8 ದಿನ ಹರಿಸಿ ಮುಂದಿನ 7 ದಿನ ನೀರು ಸ್ಥಗಿತಗೊಳಿಸಲಾಗುವುದು. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಈಗ 120 ಟಿಎಂಸಿ ನೀರಿನ ಸಂಗ್ರಹವಿದೆ.  ಇದರಲ್ಲಿ 38 ಟಿಎಂಸಿ ನೀರನ್ನು ಕುಡಿಯುವ ನೀರಿನ ಯೋಜನೆಗೆಳು, ಕೆರೆಗೆ ನೀರು ತುಂಬಿಸುವ ಯೋಜನೆ ಮತ್ತು ಕೈಗಾರಿಕೆಗಳಿಗಾಗಿ ಮೀಸಲಿಡಲಾಗಿದೆ. ಇದೇ ನೀರಿನಲ್ಲಿ ಬೇಸಿಗೆಯಲ್ಲಿ ಆವಿಯಾಗಿ ಹೋಗುವ ನೀರಿನ ಪ್ರಮಾಣವೂ ಸೇರಿದೆ ಎಂದು ತಿಳಿಸಿದರು.

ಉಳಿದ 77 ಟಿಎಂಸಿ ನೀರನ್ನು ಕಾಲುವೆಗಳ ಮೂಲಕ ರೈತರಿಗೆ ಬೆಳೆಗಳಿಗೆ ಹರಿಸಲು ನಿರ್ಧಾರವಾಗಿದೆ. ನವೆಂಬರ್​ 18 ರಿಂದ  2021ರ ಮಾರ್ಚ್​ 20ರ ವರೆಗೆ 71 ದಿನಗಳ ಕಾಲ ನೀರನ್ನು ಹರಿಸಲಾಗುವುದು. 120 ದಿನಗಳಲ್ಲಿ 71 ದಿನಗಳ ಕಾಲ ನೀರು ಹರಿಸಲಾಗುವುದು.  40 ದಿನ ನೀರು ಹರಿಸುವುದಿಲ್ಲ. ಆನ್ ಮತ್ತು ಆಫ್ ಸಿಸ್ಟಮ್ ನಂತೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.

ಇದನ್ನೂ ಓದಿ : Male Mahadeshwara: ಕೊರೋನಾ ಸಂಕಷ್ಟದ ನಡುವೆಯೂ ಕೋಟ್ಯಾಧೀಶನಾದ ಮಲೆ ಮಹದೇಶ್ವರ

ವಾರಾಬಂದಿ ಷರತ್ತಿಗೆ ಒಳಪಟ್ಟು ನೀರು ಹರಿಸಬೇಕು. ಡಿಸೆಂಬರ್​ 1 ರಿಂದ ಈ ಹಿಂಗಾರು ಹಂಗಾಮಿಗೆ ನೀರು ಹರಿಸುವಿಕೆ ಆರಂಭವಾಗಲಿದೆ. ನೀರು ಬಳಕೆದಾರರ ಸಂಘ ಪುನಶ್ಚೇತನಗೊಳಿಸಬೇಕು. ಈ ಮೂಲಕ ಈ ಸಂಘಗಳಿಗೆ ಕಾಲುವೆ ಹಾಗೂ ವಾರಾಬಂಧಿ ನಿರ್ವಹಣೆ ಜವಾಬ್ದಾರಿ ವಹಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಕುಟುಂಬಕ್ಕೆ ‌ನೀಡಲಾಗುತ್ತಿದ್ದ ಶೇ. 5 ಒಳಮೀಸಲಾತಿ ಮುಂದುವರೆಸಲು ಸಿಎಂ‌ ಜತೆ ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಇದೇ ಸಂದರ್ಭದಲ್ಲಿ ತಿಳಿಸಿದರು.
Published by: G Hareeshkumar
First published: November 13, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories