ರೈತರಂತೆ ಕೆಲಸ ಮಾಡಲು ಹೋಗಿ ಎಡವಟ್ಟು; ಹೊಡೆ ಕಟ್ಟುತ್ತಿರುವ ಭತ್ತದ ಬೆಳೆಗೆ ಗೊಬ್ಬರ ಎರಚಿ ನಗೆಪಾಟಲಿಗೀಡಾದ ಕೃಷಿ ಸಚಿವ ಬಿ.ಸಿ.ಪಾಟೀಲ್

ಸಚಿವರಿಬ್ಬರು ತಾವು ಮಣ್ಣಿನ ಮಕ್ಕಳು, ತಮಗೂ ಕೃಷಿ ಕೆಲಸಗಳು ಬರುತ್ತದೆ. ನಾವು ಆ ಕೆಲ್ಸ ಮಾಡುತ್ತೇವೆ ಅಂತ ತೋರಿಸಿಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೊಡೆ ಕಡೆಯುತ್ತಿರುವ ಭತ್ತದ ಗದ್ದೆಗೆ ಗೊಬ್ಬರ ಹಾಕಿ ಫೋಟೋಗೆ ಫೋಸು ನೀಡಿ ಕೃಷಿ ಬಗ್ಗೆ ಇಬ್ಬರೂ ಸಚಿವರಿಬ್ಬರಿಗೂ ಸಾಮಾನ್ಯ ಜ್ಞಾನ ಇಲ್ಲವೆಂಬದನ್ನು ತಾವೇ ನಿರೂಪಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ.

ಕೃಷಿ ಸಚಿವರನ್ನು ಟ್ರೋಲ್ ಮಾಡಿರುವುದು.

ಕೃಷಿ ಸಚಿವರನ್ನು ಟ್ರೋಲ್ ಮಾಡಿರುವುದು.

  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮಡುವಿನ ಕೋಡಿ ಗ್ರಾಮದಲ್ಲಿ ನೆನ್ನೆ ರಾಜ್ಯದ ಇಬ್ಬರು ಸಚಿವರು ರೈತರಂತೆ ಜಮೀನಿಗಿಳಿದು ಕೃಷಿ ಕೆಲಸದಲ್ಲಿ ಭಾಗಿಯಾಗಿದ್ದರು. ಆ ಸಚಿವರಿಬ್ಬರು ನೆನ್ನೆ ರೈತರಂತೆ ಜಮೀನಲ್ಲಿ ಟ್ರ್ಯಾಕ್ಟ ರ್ ಚಾಲನೆ ಮಾಡಿದ್ದರು. ಅಲ್ಲದೇ ಜಮೀನಿಗಿಳಿದು ರಾಗಿ ಪೈರು ನಾಟಿ ಮಾಡಿ, ಭತ್ತದ ಗದ್ದೆಗೆ ಗೊಬ್ಬರ ಹಾಕಿದ್ದರು. ಸಚಿವರು ಭತ್ತದ ಬೆಳೆಗೆ ಗೊಬ್ಬರ ಹಾಕುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ವೈರಲ್ ಆಗಿ  ಟ್ರೋಲ್ ಆಗುತ್ತಿದೆ.

ಹೌದು! ನೆನ್ನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ‌ಮಡುವಿನಕೋಡಿ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್  ಆದೇಶದ ಮೇರೆಗೆ  ರೈತರೊಂದಿಗೊಂದು ದಿನ ಹೆಸರಿನ ವಿನೂತನ ಕಾರ್ಯಕ್ರಮ ಆಯೋಜಿಸಿಲಾಗಿತ್ತು. ಈ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ತೋಟಗಾರಿಕೆ ಸಚಿವ ಉದ್ಘಾ ಟಿಸಿದರು. ಬಳಿಕ ಇಬ್ಬರು ಸಚಿವದ್ವಯರು ರೈತರಂತೆ ತಲೆಗೆ ಹಸಿರು ಪೇಟ ಸುತ್ತಿಕೊಂಡು ರೈತರ ಜಮೀನಿನಲ್ಲಿ  ಟ್ರ್ಯಾಕ್ಟರ್ ಚಲಾಯಿಸಿ, ರಾಗಿ ಪೈರು‌ ನಾಟಿ ಮಾಡಿ ಮಾಡಿದ್ದರು.

ನಾವು ಕೂಡ ಮಣ್ಣಿನ ಮಕ್ಕಳು. ತಮಗೂ ಕೃಷಿ ಕೆಲಸದ ಅನುಭವವವಿದೆ ಎಂಬುದನ್ನು ತೋರಿಸಿಕೊಳ್ಳುವ ಭರದಲ್ಲಿ ಇಬ್ಬರು ಸಚಿವರು ಭತ್ತದ ಗದ್ದೆಯಲ್ಲಿ ಭತ್ತ ಕಚ್ಚುತ್ತಿರುವ ಬೆಳೆಗೆ ಗೊಬ್ಬರ ಹಾಕಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಭತ್ತದ ಬೆಳೆ ಹೊಡೆ ಕಡೆದು ಭತ್ತ ಕಟ್ಟುವ ಸಮಯದಲ್ಲಿ ಬೆಳೆಗೆ ಯಾವುದೇ ಗೊಬ್ಬರ ಹಾಕುವಂತಿಲ್ಲ‌. ಈ ಬಗ್ಗೆ ಜ್ಞಾನವಿರದ ಇಬ್ಬರು ಸಚಿವರು ಮಾತ್ರ ತಾವು ರೈತರ ಮಕ್ಕಳು. ತಮಗೂ ಕೃಷಿ ಬಗ್ಗೆ ಜ್ಞಾನವಿದೆ. ನಾವು ಕೃಷಿ ಕೆಲಸ ಮಾಡುತ್ತೇವೆ ಎಂಬುದನ್ನು ನಿರೂಪಿಸಿಲು ಹೋಗಿ ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆ‌.

ಕೃಷಿ ಸಚಿವರನ್ನು ಟ್ರೋಲ್ ಮಾಡಿರುವುದು.


ಇದನ್ನು ಓದಿ: ನೀನು ಡ್ರೈವರ್, ಮದುವೆ ಆಗೋಲ್ಲ ಅಂದಿದ್ದಕ್ಕೆ ದೀಪಾವಳಿ ದಿನವೇ ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ!

ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಕೃಷಿ ಮತ್ತು ತೋಟಗಾರಿಕೆ  ಸಚಿವರು ಮಾಡಿರುವ ಎಡವಟ್ಟಿನ ಫೋಟೋವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಾಕಿ ವ್ಯಂಗ್ಯ ಮಾಡಿದ್ದಾರೆ. ಹೊಡೆ ಕಡೆಯುತ್ತಿರುವ ಭತ್ತಕ್ಕೆ ಗೊಬ್ಬರ ಹಾಕ್ತಿರೋ ಇಬ್ಬರು ಸಚಿವರಿಗೆ  ಉತ್ತಮ ರೈತ ಪ್ರಶಸ್ತಿ ಕೊಡುವಂತೆ ವ್ಯಂಗ್ಯವಾಡಿದ್ದಾರೆ. ಹಾಗೆಯೇ, ತಲೆಗೆ ಹಸಿರು ಟವಲ್ ಕಟ್ಟಿವದರೆಲ್ಲಾ ರೈತರಲ್ಲ ಅಂತ ನಿರೂಪಿಸಿದ್ದಾರೆಂದು  ಸಚಿವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ಸಚಿವರಿಬ್ಬರು ತಾವು ಮಣ್ಣಿನ ಮಕ್ಕಳು, ತಮಗೂ ಕೃಷಿ ಕೆಲಸಗಳು ಬರುತ್ತದೆ. ನಾವು ಆ ಕೆಲ್ಸ ಮಾಡುತ್ತೇವೆ ಅಂತ ತೋರಿಸಿಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೊಡೆ ಕಡೆಯುತ್ತಿರುವ ಭತ್ತದ ಗದ್ದೆಗೆ ಗೊಬ್ಬರ ಹಾಕಿ ಫೋಟೋಗೆ ಫೋಸು ನೀಡಿ ಕೃಷಿ ಬಗ್ಗೆ ಇಬ್ಬರೂ ಸಚಿವರಿಬ್ಬರಿಗೂ ಸಾಮಾನ್ಯ ಜ್ಞಾನ ಇಲ್ಲವೆಂಬದನ್ನು ತಾವೇ ನಿರೂಪಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ.
Published by:HR Ramesh
First published: