ಕೆಮ್ಮುತ್ತಲೇ ರೈತರ ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ಮೊನ್ನೆಯಷ್ಟೆ ಕೊರೋನಾ ಸೋಂಕಿನಿಂದ ಗುಣಮುಖ ಆಗಿ ಡಿಸ್​ಚಾರ್ಜ್ ಆಗಿದ್ದ ಕೃಷಿ ಇಲಾಖೆ ಸಚಿವ ಬಿ.ಸಿ. ಪಾಟೀಲ್ ಕೆಮ್ಮತ್ತಲೇ ಗುಂಪು ಗುಂಪು ಜನರ ಜೊತೆ ನಿಂತು ಕೃಷಿ ಉತ್ಸವ ಆ್ಯಪ್​ಗೆ ಚಾಲನೆ ನೀಡಿದ್ದು, ಸಾಮಾಜಿಕ ಅಂತರ ಮರೆತು ಯಡವಟ್ಟು ಮಾಡಿದ್ದಾರೆ.

news18-kannada
Updated:August 15, 2020, 1:32 PM IST
ಕೆಮ್ಮುತ್ತಲೇ ರೈತರ ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್
ಬಿಸಿ ಪಾಟೀಲ್
  • Share this:
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಇಲಾಖೆ ಅಧಿಕಾರಿಗಳು ಆಯೋಜಿಸಿದ್ದ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಪ್ ಬಿಡುಗಡೆ ಮಾಡಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿಯ ರೈತರ ಜಮೀನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವರಿಗೆ ಅದ್ಯಾಕೋ ಕೆಮ್ಮು ಬಿಟ್ಟಂತಿರಲಿಲ್ಲ. ಆದಾಗ್ಯೂ ಕೃಷಿ ಇಲಾಖೆ ಅಧಿಕಾರಿಗಳು, ಹಾಗೂ ನೂರಕ್ಕು ಹೆಚ್ಚು ರೈತರ ಜೊತೆ ನಿಂತು ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಿದರು. ಈ ವೇಳೆ ಅವರಿಗೆ ಆಗಾಗ ಕೆಮ್ಮು ಬಂದಿದ್ದು, ಎಲ್ಲರ ಎದೆಯಲ್ಲೂ ಢವ ಢವ ಭಯ ಹುಟ್ಟಿಸಿತು.

ಕೊರೋನಾ ಹರಡುವಿಕೆ ತಡೆಯಲು ಜಾಗೃತಿ ಮೂಡಿಸಬೇಕಾದ ಸಚಿವರೇ ಇಲ್ಲಿ ಸಾಮಾಜಿಕ ಅಂತರ ಮರೆತು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಸ್ವತಃ ಸಚಿವ ಬಿಸಿ ಪಾಟೀಲ್ ಅವರಿಗೆ ಕೊರೋನಾ ಬಂದು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಒಂದು ದಿನದ ಹಿಂದಷ್ಟೇ ಡಿಸ್​ಚಾರ್ಜ್ ಆಗಿ ಬಂದಿದ್ದರೂ ಅವರಿಗೆ ಬುದ್ದಿ ಬಂದಂತಿಲ್ಲ. ಆದ್ದರಿಂದಲೇ ಅಷ್ಟು ಜನರ ಗುಂಪಿನಲ್ಲಿ ಕೆಮ್ಮುತ್ತಲೇ ಕೃಷಿ ಸಮಿಕ್ಷೆ ಆಪ್ ಬಿಡುಗಡೆ ಮಾಡಿದ್ದಾರೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಒಂದು ಪೂರ್ವ ನಿಯೋಜಿತ ಕೃತ್ಯ. ಅದು ಸರ್ಕಾರಕ್ಕೆ ಕೆಟ್ಟ ಹೆಸರು ತರಲು, ಶಾಂತಿಯನ್ನು ಕದಡಲು ಮಾಡಿದ‌ ಸಂಚಾಗಿದ್ದು, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಗಲಭೆಯಾಗಿದೆ. ಈ ಘಟನೆಗೆ ಸಂಬಂದಿಸಿದ ಕಿಡಿಗೇಡಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರನ್ನ ಬಿಡುವುದಿಲ್ಲ, ಅವರನ್ನ ಮಟ್ಟಹಾಕುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಕಾವಲ್​ ಭೈರಸಂದ್ರ ಗಲಭೆಗೆ ಬಿಜೆಪಿಯವರ ಒಳತಂತ್ರವೇ ಕಾರಣ; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ

ಅಲ್ಲದೆ, ಸಂಘ ಪರಿವಾರದವರ ಮೇಲಿನ ಕೇಸ್​ಗಳನ್ನು ಕೈಬಿಡುವ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿರುವ ವೀಡಿಯೋ ವೈರಲ್ ಆಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲಿ ಅನ್ಯಾಯವಾಗಿ ಕೇಸ್​ಗಳನ್ನು ಹಾಕಿದ್ದಾರೋ ಅದನ್ನ ವಾಪಸ್ ಪಡೆಯಬಹುದು ಅಷ್ಟೇ ಎಂದಿದ್ದಾರೆ. ರಾಜ್ಯದಲ್ಲಿ SDPI ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಾಟೀಲ್ ಹೇಳಿದ್ದಾರೆ.ಬೆಂಗಳೂರು ಗಲಭೆಯಲ್ಲಿ ಸತ್ತವರು ಅಮಾಯಕರು ಎಂಬ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಬಿ.ಸಿ. ಪಾಟೀಲ್, ಬೆಂಕಿ ಹಚ್ಚಿದ  ಜಾಗದಲ್ಲಿ ಅಮಾಯಕರು ಯಾಕೆ ಇದ್ದರು? ಅಮಾಯಕರಾದವರು ಮನೆಯಲ್ಲಿ ಬಾಗಿಲು ಹಾಕಿಕೊಂಡು ಇರುತ್ತಾರೆ. ಬೆಂಕಿ ಹಚ್ಚಿ ಪೊಲೀಸರ ಗುಂಡಿಗೆ ಬಲಿಯಾದ ಮೇಲೆ ಅವನು ಅಮಾಯಕ ಆಗುತ್ತಾನೆ. ಅಲ್ಲಿಯವರೆಗೂ ಅವನು ಅಮಾಯಕ ಆಗಿರುವುದಿಲ್ಲವಾ? ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಬೆಂಕಿ ಹಚ್ಚಿದ್ದು ಯಾರು? ತಾನೇ ತಾನಾಗಿ ಬೆಂಕಿ ಹತ್ತಿಕೊಂಡಿತ್ತಾ? ಅಂತಹ ಕಿಡಿಗೇಡಿಗಳನ್ನು ಸಮರ್ಥಿಸಿಕೊಳ್ಳುವುದು ಬೆಂಕಿ ಹಚ್ಚುವವರಿಗೆ ಪ್ರೋತ್ಸಾಹ ಕೊಟ್ಟಂತೆ ಅಲ್ವಾ?  ಎಂದು ಪ್ರಶ್ನೆ ಮಾಡಿದ್ದಾರೆ.ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಅಪ್ರಾಪ್ತೆಯ ರೇಪ್ ಎಸಗಿ ಕಳ್ಳತನ ಮಾಡಿದ್ದ ಖದೀಮನ ಬಂಧನ

ಯಾವುದೇ ಜಾತಿ ಮತ ಧರ್ಮದವರೇ ಆಗಿರಲಿ ಕಿಡಿಗೇಡಿ ಕೃತ್ಯ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಪೊಲೀಸರ ಕರ್ತವ್ಯದ ವೈಫಲ್ಯ ಎಂಬ ಆರೋಪ ಬರೀ ಅಪಪ್ರಚಾರ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.

ವರದಿ: ವಿನಾಯಕ ತೊಡರನಾಳ್
Published by: Vijayasarthy SN
First published: August 15, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading