ಶಿವಮೊಗ್ಗದಲ್ಲಿಯೇ ತಯಾರಾಗ್ತಿದೆ ಆಗ್ರಾ ಪೇಟಾ ; ಸಿಹಿ ತಿನಿಸಾಗಿ ಮಾರ್ಪಟ್ಟ ಬೂದಗುಂಬಳ ಕಾಯಿ

ತೀರ್ಥಹಳ್ಳಿ ತಾಲೂಕಿನ ಕುಂಟುವಳ್ಳಿ ವಿಶ್ವನಾಥ್, ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿದಿದ್ದಾರೆ. ಹೊಸ ಅವಿಷ್ಕಾರದ ಮೂಲಕ ಪೇಟಾ ವನ್ನು ತೀರ್ಥಹಳ್ಳಿಯಲ್ಲೇ ತಯಾರಿಸಿದ್ದಾರೆ.

ಆಗ್ರಾ ಪೇಟಾ ಸ್ವೀಟ್

ಆಗ್ರಾ ಪೇಟಾ ಸ್ವೀಟ್

  • Share this:
ಶಿವಮೊಗ್ಗ(ಜೂ. 04): ಉತ್ತರ ಭಾರತದಲ್ಲಿ ಈ ಸ್ವೀಟ್ ಅಂದರೇ ಬಹುತೇಕ ಜನರಿಗೆ ಪಂಚಪ್ರಾಣ. ಈ ಸ್ವೀಟ್​ಗೆ ಬಳಸುವುದು ಬೂದಗುಂಬಳ ಕಾಯಿ. ಆಗ್ರಾ ಸೇರಿದಂತೆ ಹಲವು ಭಾಗಗಳಿಗೆ ಈ ಸ್ವೀಟ್ ಗೆ ಬೂದ  ಗುಂಬಳಕಾಯಿ ಸರಬರಾಜು ಮಾಡುತ್ತಿದ್ದವರು ಮಲೆನಾಡಿದ ರೈತರು. ತೀರ್ಥಹಳ್ಳಿ ಒಂದೇ ತಾಲೂಕಿನಲ್ಲಿ 2 ಸಾವಿರ ಟನ್ ಕುಂಬಳಕಾಯಿ ರಫ್ತು ಮಾಡಲಾಗುತ್ತಿತ್ತು. ಆದರೆ, ಕೊರೋನಾ ಅಟ್ಟಹಾಸದಲ್ಲಿ ರಪ್ತು ಮಾಡಲಾಗದೇ ರೈತರು ಕಂಗಾಲಾದರು. ನಮ್ಮ ಈ ವರ್ಷದ ಅನ್ನುದ ಕಥೆ ಮುಗಿತು ಎನ್ನುವಷ್ಟರಲ್ಲೇ ತೀರ್ಥಹಳ್ಳಿಯ ಉತ್ಸಾಹಿ ಉದ್ಯಮಿ ಕುಗ್ರಾಮದಲ್ಲೇ ಈ ಸ್ವೀಟ್ ಸಿದ್ಧ ಮಾಡಿ. ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 

ಆಗ್ರಾ ಪೇಟಾ ಇಂದೊಂದು ಸಿಹಿ ತಿನಿಸು. ಬೂದ ಗುಂಬಳಕಾಯಿಯಲ್ಲಿ ಮಾಡುವ ಈ ಸ್ವೀಟ್ ಉತ್ತರ ಭಾರತೀಯರ ಅತ್ಯಂತ ಅಚ್ಚುಮೆಚ್ಚಿನ ಸ್ವೀಟ್. ವಿಶೇಷವಾಗಿ ಆಗ್ರಾದಲ್ಲಿ ಇದನ್ನು ಹೆಚ್ಚು ತಯಾರಿಸಲಾಗುತ್ತೇ. ಈ ಸ್ವೀಟ್ ಬಗ್ಗೆ ಏಕೆ ಹೇಳುತ್ತಿದ್ದೇವೆ ಅಂತಾ ನಿಮಗೆ ಅನ್ನಿಸಬಹುದು. ಈ ಸ್ವೀಟ್ ಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೂ ಸಂಬಂಧವಿದೆ. ಈ ಸ್ವೀಟ್ ತಯಾರು ಮಾಡಲು ಬಳಸುವ ಬೂದಕುಂಬಳ ಕಾಯಿಯನ್ನು ಹೆಚ್ಚಾಗಿ ಆಗ್ರಾಕ್ಕೆ ಕಳುಹಿಸುತ್ತಿದ್ದವರು ತೀರ್ಥಹಳ್ಳಿಯ ರೈತರು. ಈ ಬಾರಿ ಕೊರೋನಾ ಅಟ್ಟಹಾಸದ ಸಮಯದಲ್ಲಿ ರೈತರು ಬೆಳೆದ ಕುಂಬಳಕಾಯಿ ರಫ್ತು ಮಾಡಲು ಸಾಧ್ಯವಾಗಲೇ ಇಲ್ಲ.

ಸುಮಾರು ನೂರಾರು ಹೆಕ್ಟೇರ್ ನಲ್ಲಿ ರೈತರು ಬರೊಬ್ಬರಿ 2 ಸಾವಿರ ಟನ್ ಬೂದಕುಂಬಳ ಕಾಯಿ ಬೆಳೆದಿದ್ದಾರೆ. ಅದರೆ, ದೆಹಲಿ ಆಗ್ರಾ ಕ್ಕೆ ಕಳುಹಿಸಲು ಆಗದೇ ರೈತರು ನಮ್ಮ ಈ ವರ್ಷದ ಅನ್ನದ ಕಥೆ ಮುಗಿತು ಅಂದುಕೊಂಡರು. ಆದರೆ, ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ, ತೋಟಗಾರಿಕೆ ಇಲಾಖೆ ಶಿವಮೊಗ್ಗ ಜಿಲ್ಲೆಯ ಉಪನಿರ್ದೇಶಕ ಯೋಗೀಶ್,  ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಇಂದು ರೈತರ ಬಾಳಿನಲ್ಲಿ ಹರ್ಷ ಕಂಡು ಬಂದಿದೆ. ಕಾರಣ  ಕೊರೋನಾ ಸಂಕಷ್ಟದ ಕಾಲದಲ್ಲಿ ಇವರ ಕುಂಬಳಕಾಯಿ ಸ್ಥಳೀಯವಾಗಿ ಮಾರಾಟವಾಗುತ್ತಿದೆ.

ಇಬ್ಬನಿ ಫುಡ್ ಇಂಡಸ್ಟ್ರೀಸ್


ತೀರ್ಥಹಳ್ಳಿ ತಾಲೂಕಿನ ಕುಂಟುವಳ್ಳಿ ವಿಶ್ವನಾಥ್, ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿದಿದ್ದಾರೆ. ಹೊಸ ಅವಿಷ್ಕಾರದ ಮೂಲಕ ಪೇಟಾ ವನ್ನು ತೀರ್ಥಹಳ್ಳಿಯಲ್ಲೇ ತಯಾರಿಸಿದ್ದಾರೆ. ಇಬ್ಬನಿ ಫುಡ್ ಇಂಡಸ್ಟ್ರೀಸ್ ಮೂಲಕ ಕುಂಬಳ ಕಾಯಿಯಲ್ಲಿ ಪ್ರಸಿದ್ದ ಆಗ್ರಾ ಪೇಟಾ ಸಿದ್ಧಪಡಿಸಿದ್ದಾರೆ. ರುಚಿ ರುಚಿಯಾದ ಅಧಿಕ ಸ್ವಾಧ ಹೊಂದಿರುವ ಆಗ್ರಾ ಪೇಟಾವನ್ನು ಮಾರುಕಟ್ಟೆ  ಸ್ಥಳೀಯವಾಗಿಯೇ ತಂದಿದ್ದಾರೆ. ಪೇಟಾದಿಂದ ಲಾಭದ ಬಗ್ಗೆ ಯೋಚನೆ ಮಾಡದೆ ರೈತರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಪೇಟಾ ಸಿದ್ಧ ಮಾಡಲು ತಾವೇ ಯಂತ್ರವನ್ನು ಸಹ ಈಗ ಆವಿಷ್ಕಾರ ಮಾಡಿದ್ದಾರೆ. 

ವಿಶ್ವನಾಥ್ ಸುಮಾರು 800 ಟನ್ ಕುಂಬಳಕಾಯಿ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ರೈತರಿಗೆ ಇದ್ದ ಅತಂಕ ದೂರವಾಗಿದೆ. ಜೊತೆಗೆ ಇವರು ಈ ಸ್ವೀಟ್ ಗೆ ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಹೀಗಾಗಿ ಸ್ವೀಟ್ ಇನ್ನು ರುಚಿಕರವಾಗಿದೆ. ಈ ಸ್ವೀಟ್ ಸಿದ್ಧ ಮಾಡುವುದಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಕಾರಣ ಈ ಸ್ವೀಟ್ ಮಾಡಲು 72 ಗಂಟೆಗಳ ಪ್ರೋಸಸ್ ಬೇಕು. ಕುಂಬಳಕಾಯಿ ಕಟ್ ಮಾಡಬೇಕು, ಸುಣ್ಣದ ನೀರಿನಲ್ಲಿ ನೆನೆಯಿಸಬೇಕು, ನಂತರ ಸಕ್ಕರೆ ಪಾಕದಲ್ಲಿ ಹಾಕಬೇಕು. ಆ ನಂತರ ಅದನ್ನು ಒಣಗಿಸಬೇಕು. ಇಷ್ಟೇಲ್ಲ ಮಾಡುವುದಕ್ಕೆ ಹೆಚ್ಚಿನ ಕೆಲಸಗಾರರು ಬೇಕಾಗಿತ್ತು. ಮೊದ ಮೊದಲು ಆಗ್ರಾ ಪೇಟಾ ಮಾಡವಲ್ಲಿ ಎಡವಿದ್ದ, ವಿಶ್ವನಾಥ್ ಕೊನೆಗೂ ಆಗ್ರಾ ಪೇಟಾ ಸಿದ್ಧ ಪಡಿಸಿದ್ದಾರೆ.

ಇದನ್ನೂ ಓದಿ : ವಿಧಾನ ಪರಿಷತ್​ ಸ್ಥಾನಕ್ಕಾಗಿ ಉಪ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಪೈಪೋಟಿ ; ಎಂಎಲ್ಸಿ ಜೊತೆ ಸಚಿವ ಸ್ಥಾನಕ್ಕೂ ಲಾಬಿ

ತೀರ್ಥಹಳ್ಳಿ ತಾಲೂಕಿನ ಆರಗ ಹೆಸರನ್ನು ಇದಕ್ಕೆ ಇಟ್ಟಿದ್ದಾರೆ. ಆರಗ ಪೇಟಾ ಎಂದು ಕರೆದಿದ್ದಾರೆ. ರೈತರು ಇದರಿಂದಾಗಿ ಖುಷಿಯಾಗಿದ್ದಾರೆ. ರಪ್ತು ಮಾಡಲು ಆಗುತ್ತಿದ್ದ ಸಮಯ ಮತ್ತು ಹಣ ಎರಡು ಸಹ ರೈತರಿಗೆ ಉಳಿತಾಯವಾಗಿದೆ. ಉದ್ಯಮಿ ವಿಶ್ವನಾಥ್ ಈ ಕೆಲಸಕ್ಕೆ ಈಗ ಜಿಲ್ಲೆಯಲ್ಲಿ ಪ್ರಶಂಸೆಗಳು ಕೇಳಿ ಬರುತ್ತಿವೆ.
First published: