Sand Mining In Kali River: ಕಾಳಿ ನದಿಯಲ್ಲಿ ಮರಳು ತೆಗೆಯಲು ಅವಕಾಶ ಸಿಗುವ ನಿರೀಕ್ಷೆ; ಹೊಸ ಆಶಾಭಾವನೆಯಲ್ಲಿ ಉದ್ಯಮಿಗಳು, ಕಾರ್ಮಿಕರು!

ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವು ನಾಯಕರುಗಳು ಮರಳು ಗಾರಿಕೆ ಪುನರ್ ಪ್ರಾರಂಭಕ್ಕೆ ಪ್ರಯತ್ನ ನಡೆಸಿದ್ದರು. ಇದೀಗ ಅಂತಿಮ ಹಂತವಾಗಿ ಮರಳುಗಾರಿಕೆಗೆ ಅವಕಾಶ ಸಿಗಲಿದೆ ಎನ್ನಲಾಗಿದ್ದು ಮರಳು ಲೀಸ್ ಪಡೆದವರು, ಮರಳುಗಾರಿಕೆ ತೊಡಗಿದ್ದ ಕಾರ್ಮಿಕರ ಮುಖದಲ್ಲಿ ಇದು ಮಂದಹಾಸ ಮೂಡಿಸಿದೆ.

ಕಾಳಿ ನದಿ

ಕಾಳಿ ನದಿ

  • Share this:
ಕಾರವಾರ: ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಳಿ ನದಿಯಲ್ಲಿ ಮರಳು  ತೆಗೆಯುವ (Sand Mining In Kali River) ಚಟುವಟಿಕೆಗೆ ಮತ್ತೆ ಅನುಮತಿ ಸಿಗಲಿದ್ದು, ಅಕ್ಟೋಬರ್‌ನಿಂದ ಮರಳುಗಾರಿಕೆಗೆ ಅನುಮತಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪರಿಸರ ಸೂಕ್ಷ್ಮ ವಲಯ ಎನ್ನುವ ಕಾರಣಕ್ಕೆ 2018ರಿಂದ ಕಾಳಿ ನದಿಯಲ್ಲಿ ಮರಳು ತೆಗೆಯುವುದನ್ನ ಸ್ಥಗಿತಗೊಳಿಸಲಾಗಿತ್ತು. ಕಾಳಿ ನದಿಯಲ್ಲಿ ಮರಳು ತೆಗೆಯುವುದರಿಂದ ಜಲಚರಗಳಿಗೆ ಸಮಸ್ಯೆ ಆಗಲಿದ್ದು, ಮೀನುಗಾರಿಕೆ ಇನ್ನಿತರ ಚಟುವಟಿಕೆಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆ ಬಂದ್ ಮಾಡಲಾಗಿತ್ತು. ಮರಳುಗಾರಿಕೆ ಬಂದ್ ಮಾಡಿದ ನಂತರ ಮರಳುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವಾರು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಇನ್ನು 2019ರಲ್ಲಿ ಕಾಳಿ ನದಿ ಪ್ರವಾಹದಿಂದ ನದಿ ಪಾತ್ರದ ಹಲವು ಗ್ರಾಮಗಳು ಜಲಾವೃತವಾಗಿ ಸಮಸ್ಯೆಯಾಗಿತ್ತು. ಇನ್ನು ನೆರೆಯಿಂದ ಹಲವೆಡೆ ಮರಳು ದಿಬ್ಬಗಳು ಸೃಷ್ಟಿಯಾಗಿದ್ದು ಇದರಿಂದ ನದಿ ತೀರ ಅಗಲವಾಗುವುದರಿಂದ  ಕಾಳಿ ನದಿಯಲ್ಲಿ ಮತ್ತೆ ಮರಳುಗಾರಿಕೆಗೆ ಅವಕಾಶ ಕೊಡಬೇಕು, ಮರಳು ದಿಬ್ಬಗಳಲ್ಲಿ ಶೇಖರಣೆಗೊಂಡ ಮರಳನ್ನ ತೆಗೆಯಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ಬಗ್ಗೆ ಸತತ ಪ್ರಯತ್ನ ನಡೆಸಿ ಅನುಮತಿಗಾಗಿ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮರಳುಗಾರಿಕೆಗೆ ಅವಕಾಶ ಕೊಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪತ್ರ ಬಂದಿಲ್ಲ ಎನ್ನುವ ಕಾರಣ ನೀಡಿ  ವಾಪಾಸ್ ಪತ್ರ ಕಳುಹಿಸುವಂತೆ ಸೂಚನೆ ನೀಡಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾಳಿ ನದಿಯಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸುವಂತೆ ರಾಜ್ಯ ಸಿ.ಆರ್.ಜೆಡ್ ಗೆ ಪತ್ರ ಮಾಡಿದ ಹಿನ್ನಲೆಯಲ್ಲಿ ಸದ್ಯ ಅವಕಾಶ ಕೊಡಲಾಗಿದೆ ಎನ್ನಲಾಗಿದೆ.

ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಗಾಲ ಇರುವ ಹಿನ್ನಲೆಯಲ್ಲಿ ಮರಳು ತೆಗೆಯಲು ಅವಕಾಶ ಕೊಟ್ಟರೇ ಜಲಚರಗಳಿಗೆ ಸಮಸ್ಯೆ ಆಗಲಿದೆ ಎಂದು ಮರಳುಗಾರಿಕೆಯನ್ನ ಬಂದ್ ಮಾಡಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ನೇತೃತ್ವದ ಏಳು ಸದಸ್ಯದ ಸಿ.ಆರ್.ಜೆಡ್ ಸಮಿತಿಯ ಮುಂದೆ ವಿಷಯವನ್ನ ಇಟ್ಟು ಅಂತಿಮ ಅನುಮತಿ ಪಡೆದು ಅಕ್ಟೋಬರ್ ತಿಂಗಳಿನಿಂದ ಮರಳು ತೆಗೆಯಲು ಅನುಮತಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಾಸಕಿ ರೂಪಾಲಿ ನಾಯ್ಕ ಸೇರಿ ಹಲವರ ಪ್ರಯತ್ನ

ಕಾಳಿ ನದಿಯಲ್ಲಿ ನಾಲ್ಕು ಸ್ಯಾಂಡ್ ಬಾರ್‌ಗಳಲ್ಲಿ ಮರಳು ತೆಗೆಯಲು ಅನುಮತಿ ಕೊಡಲಿದ್ದು ಸುಮಾರು 40ಕ್ಕೂ ಅಧಿಕ ಲೀಸ್ ಪಡೆದವರು ಮರಳು ತೆಗೆಯಲಿದ್ದಾರೆ. ಕಾಳಿ ನದಿಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದ ವೇಳೆಯಿಂದಲೂ ಅನುಮತಿ ಕೊಡುವಂತೆ ಲೀಸ್ ಪಡೆದವರು ನಿರಂತರ ಪ್ರಯತ್ನ ನಡೆಸಿದ್ದರು. ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವು ನಾಯಕರುಗಳು ಮರಳು ಗಾರಿಕೆ ಪುನರ್ ಪ್ರಾರಂಭಕ್ಕೆ ಪ್ರಯತ್ನ ನಡೆಸಿದ್ದರು. ಇದೀಗ ಅಂತಿಮ ಹಂತವಾಗಿ ಮರಳುಗಾರಿಕೆಗೆ ಅವಕಾಶ ಸಿಗಲಿದೆ ಎನ್ನಲಾಗಿದ್ದು ಮರಳು ಲೀಸ್ ಪಡೆದವರು, ಮರಳುಗಾರಿಕೆ ತೊಡಗಿದ್ದ ಕಾರ್ಮಿಕರ ಮುಖದಲ್ಲಿ ಇದು ಮಂದಹಾಸ ಮೂಡಿಸಿದೆ.

ಇದನ್ನು ಓದಿ: Reliance: 771 ಮಿ. ಡಾಲರ್​ಗೆ ನಾರ್ವೆಯ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀದಿಸಿದ 'ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್'

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: