HOME » NEWS » District » AGAIN CORONA VIRUS RAPIDLY SPREADING IN MAHARASHTRA SAVADATTI YELLAMMA TEMPLE WILL CLOSE TEMPORARY CSB MAK

ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಹಾವಳಿ; ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ!

ಸವದತ್ತಿ ಯಲ್ಲಮ್ಮ ದೇವಸ್ಥಾನ ಕಳೆದ 11 ತಿಂಗಳು ಕಾಲ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿತ್ತು. ಇದೇ ಫೆ. 1ರಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮತ್ತೆ ನಿರ್ಬಂಧ ಹೇರಲಾಗಿದೆ.

news18-kannada
Updated:February 21, 2021, 5:26 PM IST
ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಹಾವಳಿ; ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ!
ಸವದತ್ತಿ ಯಲ್ಲಮ್ಮ ದೇವಸ್ಥಾನ.
  • Share this:
ಬೆಳಗಾವಿ (ಫೆಬ್ರವರಿ 21);  ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವಳಿ ಮತ್ತೆ ಹೆಚ್ಚಾಗಿದೆ. ಇದು ಸಹಜವಾಗಿ ಗಡಿ ಜಿಲ್ಲೆ ಬೆಳಗಾವಿಗೆ ಆತಂಕ ಎಚ್ಚಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಮೂಲಕ ಕೊರೊನಾ ಪರೀಕ್ಷೆ ವರದಿ ತರಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಮೂಲಕ ಬೆಳಗಾವಿ ಗಡಿ ಭಾಗದಲ್ಲಿ ಮತ್ತೆ ಮಹಾರಾಷ್ಟ್ರದ ಸೋಂಕಿನ ಭೀತಿ ಸೃಷ್ಠಿಯಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪರ್ಕಿಸುವ ಪ್ರಮುಖ ನಗರ ಬೆಳಗಾವಿಯಾಗಿದೆ. ಈ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದ ಅನೇಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದು ಬೆಳಗಾವಿ ಜಿಲ್ಲೆ ಸೇರಿ ಇಡೀ ರಾಜ್ಯಕ್ಕೆ ಆತಂಕ ತಂದಿತ್ತು. ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಸೋಂಕಿನ ಸಂಖ್ಯ ಹೆಚ್ಚಳವಾಗುತ್ತಿದ್ದು ಮತ್ತೆ ಭೀತಿಯನ್ನು ಸೃಷ್ಠಿಸಿದೆ.  ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದೆ.

ಮಹಾರಾಷ್ಟ್ರ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಮತ್ತೆ ನಿರ್ಬಂಧ ಹೇರಲಾಗಿದೆ. ಮುಂದಿನ ಆದೇಶದ ವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ. ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ ಆದರೇ ಭಕ್ತರಿಗೆ ಮಾತ್ರ ಅವಕಾಶ ಇಲ್ಲ.

ಇದನ್ನೂ ಓದಿ: Bird Flu: ಮನುಷ್ಯರಿಗೂ ಹರಡುತ್ತೆ ಹಕ್ಕಿ ಜ್ವರ; ರಷ್ಯಾದ 7 ಜನರಲ್ಲಿ ವಿಶ್ವದ ಮೊದಲ H5N8 ವೈರಸ್ ಪತ್ತೆ

ಸವದತ್ತಿ ಯಲ್ಲಮ್ಮ ದೇವಸ್ಥಾನ ಕಳೆದ 11 ತಿಂಗಳು ಕಾಲ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿತ್ತು. ಇದೇ ಫೆ. 1ರಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. 20 ದಿನದಲ್ಲಿ ದೇವಸ್ಥಾನಕ್ಕೆ ನಿತ್ಯ 20ಸಾವಿರಕ್ಕೂ ಹೆಚ್ಚು ಜನ ಬಂದ್ರೆ, ಇನ್ನೂ ಮಂಗಳವಾರ, ಶುಕ್ರವಾರ 1 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಿದ್ದರು. ಇತ್ತೀಚಿಗೆ ಮಹಾರಾಷ್ಟ್ರದಿಂದ ಬರೋ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿರೋ ಬೆಳಗಾವಿ ಜಿಲ್ಲಾಢಳಿತ ಮತ್ತೆ ನಿರ್ಬಂಧ ಹೇರಿದೆ.
Youtube Video

ಇದೇ ತಿಂಗಳು 27ರಂದು ಭಾರತ ಹುಣ್ಣಿಮೆ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆ ಇತ್ತು. ರಾಜ್ಯ ಸೇರಿ ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿ ವಿವಿಧ ಭಾಗದಿಂದ ಭಕ್ತರು ಬರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರೋದ್ರಿಂದ ಮಾಸ್ಕ್, ಸಾಮಾಜಿಕ ಅಂತರ ಕಾಪಾಡೊದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಢಳಿತ ಮುಂದಿನ ಆದೇಶದ ವರೆಗೆ ದೇವಸ್ಥಾನ ಬಂದ್ ಮಾಡಿದೆ. ಇದು ಭಕ್ತರಲ್ಲಿ ಬೇಸರ ತಂದಿದ್ದರು ಅನಿವಾರ್ಯದ ಸ್ಥಿತಿ ನಿರ್ಮಾಣವಾಗಿದೆ.
Published by: MAshok Kumar
First published: February 21, 2021, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories