ಪ್ರವಾಸಿಗರ ಮೋಜು‌ಮಸ್ತಿ: ಅಬ್ಬರದ ಅಲೆಗೂ ಡೋಂಟ್ ಕೇರ್- ಇಬ್ಬರು ಸಮುದ್ರ ಪಾಲು

ಅಲೆಯ ಅಬ್ಬರದ ನಡುವೆ ಪ್ರವಾಸಿಗರು

ಅಲೆಯ ಅಬ್ಬರದ ನಡುವೆ ಪ್ರವಾಸಿಗರು

ಮಕ್ಕಳು, ಮಹಿಳೆಯರು, ದೊಡ್ಡವರೆನ್ನದೇ ಎಲ್ಲರೂ ನೀರನ್ನು ಕಂಡ ತಕ್ಷಣ ಏನು ಯೋಚಿಸದೇ ನೀರಿನಲ್ಲಿ ಇಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು ಸಾಕಷ್ಟು ಅಪಾಯಕಾರಿಯಾಗಿದೆ.

ಮುಂದೆ ಓದಿ ...
  • Share this:

ಅನ್‌ಲಾಕ್ ಜಾರಿ ಬಳಿಕ ಪ್ರವಾಸಿ ತಾಣಗಳಿಗೆ ಜನರು ಮುಗಿಬೀಳುತ್ತಿದ್ದಾರೆ. ಅದರಲ್ಲೂ ಕಡಲತೀರಗಳಿಂದಲೇ ಪ್ರಸಿದ್ಧಿಯಾಗಿರುವ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ನಿಧಾನವಾಗಿ ಪ್ರವಾಸಿಗರು ಆಗಮಿಸುತ್ತಿದ್ದು ಸಮುದ್ರದಲ್ಲಿ ಈಜಾಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಸದ್ಯ ಮಳೆಯ ಅಬ್ಬರದಿಂದಾಗಿ ಕಡಲತೀರಗಳು ರೌದ್ರಾವತಾರ ತಾಳಿದ್ದು ಅಪಾಯಕಾರಿಯಾಗಿ ಪರಿಣಮಿಸಿವೆ. ಹೀಗಿದ್ದರೂ ಪ್ರವಾಸಿಗರ ಸುರಕ್ಷತೆಗಾಗಿ ಲೈಫ್‌ಗಾರ್ಡ್‌ಗಳೇ ನಿಯೋಜನೆಗೊಂಡಿಲ್ಲವಾಗಿದ್ದು  ಆತಂಕ ಹೆಚ್ಚಿಸಿದೆ. ಜತೆಗೆ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.


ಭಾನುವಾರದಂದು ಸಮುದ್ರದಲ್ಲಿ ಮುಳುಗಿ‌ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಭಟ್ಕಳದ ಮುರುಡೇಶ್ವರ ಕಡಲತೀರದಲ್ಲಿ ಘಟನೆ ನಡೆದಿದ್ದು ಮೃತ ದುರ್ದೈವಿಗಳನ್ನು ಮಣಿ ಮತ್ತು ಮಂಜುನಾಥ ಎಂದು ಗುರುತಿಸಲಾಗಿದೆ. ಪ್ರವೀಣ ಮತ್ತು ನಾಗರಾಜ್ ಎಂಬುವರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.


ಮಂಜುನಾಥ ಎಂಬುವರ ಮೃತ ದೇಹ ಪತ್ತೆಯಾಗಿದೆ.  ಶಿವಮೊಗ್ಗದ ಶಿಕಾರಿಪುರದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರವಾಸಿ ತಾಣಗಳಿಂದಲೇ ಹೆಸರಾಗಿರುವ ಉತ್ತರಕನ್ನಡ ಜಿಲ್ಲೆಯ ಜಲಪಾತಗಳು ಹಾಗೂ ಕರಾವಳಿಯ ಕಡಲತೀರಗಳತ್ತ ಪ್ರವಾಸಿಗರು ನಿಧಾನವಾಗಿ ಬರುತ್ತಿದ್ದಾರೆ. ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರುಡೇಶ್ವರ, ಗೋಕರ್ಣ, ಹೊನ್ನಾವರದ ಕಡಲತೀರಗಳಲ್ಲಿ ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರು ಎಂಜಾಯ್ ಮಾಡತೊಡಗಿದ್ದಾರೆ.


ಮಕ್ಕಳು, ಮಹಿಳೆಯರು, ದೊಡ್ಡವರೆನ್ನದೇ ಎಲ್ಲರೂ ನೀರನ್ನು ಕಂಡ ತಕ್ಷಣ ಏನು ಯೋಚಿಸದೇ ನೀರಿನಲ್ಲಿ ಇಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು ಸಾಕಷ್ಟು ಅಪಾಯಕಾರಿಯಾಗಿದೆ. ಅಲೆಗಳ ಆರ್ಭಟ ಕೂಡ ಜೋರಾಗಿದೆ. ಅಲ್ಲದೇ ಕಡಲತೀರಗಳಲ್ಲಿ ಸದ್ಯ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಕೆಲ ವೇಳೆ ಪೊಲೀಸರು ಬಂದು ಪ್ರವಾಸಿಗರನ್ನು ಚದುರಿಸಿದರೂ ಕೂಡಾ ಅವರು ಮರೆಯಾದ ಬಳಿಕ ಮತ್ತೆ ಅಷ್ಟೆ ಪ್ರವಾಸಿಗರು ಅಪಾಯಕಾರಿಯಾಗಿರುವ ಕಡಲಿಗಿಳಿದು ಎಂಜಾಯ್ ಮಾಡುತ್ತಿದ್ದಾರೆ. ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ್ರೆ ಯಾರು ಹೊಣೆ ಎಂಬಂತಾಗಿದೆ...


ಲೇಪ್ ಗಾರ್ಡರ್ ಗಳಿಗೆ ವೇತನ ಇಲ್ಲ....ಕೆಲಸಕ್ಕೆ ಹಾಜರಿಲ್ಲ


ಇನ್ನು ಉತ್ತರಕನ್ನಡ ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ಹಾಗೂ ಮಾರ್ಗದರ್ಶನ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಪ್ರಮುಖ ಕಡಲತೀರಗಳು ಹಾಗೂ ಜಲಪಾತಗಳಿಗೆ ಲೈಫ್ ಗಾರ್ಡ್ ಗಳನ್ನ ನಿಯೋಜನೆ ಮಾಡಿತ್ತು. ಸಮುದ್ರದಲ್ಲಿ ಯಾರಾದರೂ ಈಜಲು ತೆರಳಿದ ವೇಳೆ ಮುಂದೆ ತೆರಳಿದಲ್ಲಿ ಇಲ್ಲವೇ ಕಡಲು ಪ್ರಕ್ಷುಬ್ಧ ಇರುವ ವೇಳೆ ನೀರಿಗಿಳಿಯಲು ಮುಂದಾದಲ್ಲಿ ಅವರನ್ನು ಎಚ್ಚರಿಸುತ್ತಿದ್ದರು. ಆದರೆ ಲಾಕ್ಡೌನ್ ವೇಳೆ ಪ್ರವಾಸೋದ್ಯಮ ನೆಲಕಚ್ಚಿದ್ದರಿಂದ ವೇತನ ಸಮಸ್ಯೆಯಿಂದಾಗಿ ಲೈಫ್‌ಗಾರ್ಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.


ಹೀಗಾಗಿ ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುವ ಕಡಲತೀರಗಳಲ್ಲಿ ಅದೆಷ್ಟೋ ಮಂದಿ ಕಡಲತೀರದ ಆಳ ಅಗಲ ತಿಳಿಯದೇ ಸಂಕಷ್ಟಕ್ಕೆ ಸಿಲುಕಿ ಪ್ರಾಣತೆತ್ತ ಉದಾಹರಣೆಗಳಿವೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಲೈಫ್‌ಗಾರ್ಡ್‌ಗಳ ನೇಮಕಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Coronavirus: ಮಕ್ಕಳನ್ನು ಶಾಲೆಗೆ ಕಳಿಸೋ ಮುನ್ನ Flu Vaccine ಹಾಕಿಸಿ ಕಳಿಸಿ ಎನ್ನುತ್ತಿವೆ ಶಾಲೆಗಳು, ನಿಜಕ್ಕೂ ಇದು ಅಗತ್ಯ ಇದೆಯಾ?


ಒಟ್ಟಾರೆ ಅನ್ ಲಾಕ್ ಬೆನ್ನಲ್ಲೆ ಉತ್ತರಕನ್ನಡ ಜಿಲ್ಲೆಗೆ ಪ್ರವಾಸಿಗರು ನಿಧಾನವಾಗಿ ಬರುತ್ತಿದ್ದು ಮಳೆ ಕೂಡಾ ಜೋರಾಗಿದೆ.. ಆದರೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಸುರಕ್ಷತೆ ಇಲ್ಲದೆ ಇರುವುದು ಅದೆಷ್ಟೋ ಪ್ರವಾಸಿಗರ ಪ್ರಾಣಕ್ಕೆ ಕುತ್ತುಬರುವ ಆತಂಕ ಇದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: