HOME » NEWS » District » AFTER UGADI KARNATAKA CM WILL CHANGE SAYS BASANAGOWDA YATNAL MVSV MAK

ಯುಗಾದಿಗೆ ಉತ್ತರ ಕರ್ನಾಟಕದವರೇ ಸಿಎಂ ಸ್ಥಾನದಲ್ಲಿರ್ತಾರೆ; ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಮಂತ್ರಿಗಳನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ. ಯುಗಾದಿ ವೇಳೆಗೆ ಉತ್ತರ ಕರ್ನಾಟಕದವರೇ ಆ ಸ್ಥಾನದಲ್ಲಿ ಇರ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಲ್​ ಭವಿಷ್ಯ ನುಡಿದಿದ್ದಾರೆ.

news18-kannada
Updated:January 30, 2021, 3:28 PM IST
ಯುಗಾದಿಗೆ ಉತ್ತರ ಕರ್ನಾಟಕದವರೇ ಸಿಎಂ ಸ್ಥಾನದಲ್ಲಿರ್ತಾರೆ; ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್.
  • Share this:
ವಿಜಯಪುರ (ಜನವರಿ.30); ಯುಗಾದಿ ಹಬ್ಬದ ವೇಳೆಗೆ ಮಂತ್ರಿ ಸ್ಥಾನವನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ ಎಂದು ಹೇಳುವ ಮೂಲಕ ಶಾಸಕ ಹಿರಿಯ ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ಸಿಎಂ ಯಡಿಯೂರಪ್ಪ ಸ್ಥಾನ ಬದಲಾಗಲಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ಈ ಹಿಂದೆ ಮೂರು ತಿಂಗಳಲ್ಲಿ ಬದಲಾವಣೆಯಾಗಲಿದೆ ಎಂದು ಬೇರೆ ವಿಚಾರವಾಗಿ ಹೇಳಿದ್ದೆ.  ಈಗ ನೋಡ್ತಾ ಇರಿ, ಯುಗಾದಿಗೆ ಎಲ್ಲವೂ ಬದಲಾಗಲಿದೆ. ಮಂತ್ರಿಗಳನ್ನು ಕೊಡುವವರ ಜಾಗದಲ್ಲಿ ನಮ್ಮವರೆ ಬರ್ತಾರೆ.  ಉತ್ತರ ಕರ್ನಾಟಕದವರೇ ಆ ಸ್ಥಾನದಲ್ಲಿ ಇರ್ತಾರೆ" ಎಂದು ಸಿಎಂ ಬದಲಾವಣೆಯ ಕುರಿತು ಯತ್ನಾಳ ಪರೋಕ್ಷವಾಗಿ ಮತ್ತೋಮ್ಮೆ ಹೊಸ ಬಾಂಬ್ ಸಿಡಿಸಿದ್ದಾರೆ.

ಇದೇ ವೇಳೆ ನಿನ್ನೆ ಸಿಂದಗಿಯಲ್ಲಿ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜೊತೆ ತಾವು ಮಾತುಕತೆ ನಡೆಸಿದ ಕುರಿತ ಪ್ರತಿಕ್ರಿಯೆ ನೀಡಿದ ಯತ್ನಾಳ್, "ಎಚ್. ಡಿ. ಕುಮಾರಸ್ವಾಮಿ ತಮ್ಮ ನಡುವೆ ಹಳೆಯ ಸಂಬಂಧವಿದೆ.  ನಾವು ಗೆಳೆಯರಾಗಿ ಮಾತನಾಡಿದ್ದೇವೆ. ಕಳೆದ ವರ್ಷ ಸಿದ್ಧರಾಮಯ್ಯ ವಿಜಯಪುರಕ್ಕೆ ಬಂದಾಗ ಅವರೊಂದಿಗೂ ಮಾತನಾಡಿದ್ದೆ.  ಅದರಲ್ಲಿ ತಪ್ಪೇನಿದೆ?

ನಿವೋಬ್ಬ ಒಳ್ಳೆಯ ನಾಯಕರು. ನಿಮ್ಮನ್ನು ಬಿಟ್ಟು ಕೊಟ್ಟಿದ್ದು ಬಹಳ ದೊಡ್ಡ ತಪ್ಪಾಗಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷಗಳು ಸತ್ತಿವೆ. ನಿಜವಾದ ವಿರೋಧ ಪಕ್ಷದ ನಾಯಕರೆಂದರೆ ಬಸನಗೌಡ ಪಾಟೀಲ ಯತ್ನಾಳ ಎಂದು ಕುಮಾರಸ್ವಾಮಿ ನಿನ್ನೆ ಹೇಳಿದ್ದಾರೆ ಎಂದು ತಿಳಿಸಿದ ಯತ್ನಾಳ, ತಮ್ಮನ್ನು ಕುಮಾರಸ್ವಾಮಿ ಜೆಡಿಎಸ್ ಗೆ ಆಹ್ವಾನ ನೀಡಿದರಾ? ಎಂಬ ಪ್ರಶ್ನೆಗೆ, ನಾನೆಲ್ಲೂ ಹೋಗೊಲ್ಲ.  ಬಿಜೆಪಿಯಲ್ಲೇ ಇರುತ್ತೇನೆ.  ನಾನು ಬ್ಲ್ಯಾಕ್ ಮೇಲ್ ಮಾಡಲು ಬ್ಲ್ಯಾಕ್ ಮೇಲ್ ರಾಜಕಾರಣಿಯಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಆಗ್ರಾದಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 10 ಮಂದಿ ಸಾವು, 25ಕ್ಕೂ ಹೆಚ್ಚು ಜನರಿಗೆ ಗಾಯ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದ ಅವರು,"ಈ ವಿಚಾರದಲ್ಲಿ ಕೂಡಲ ಸಂಗಮ ಮತ್ತು ಹರಿಹರ ಪೀಠದ ಇಬ್ಬರೂ ಸ್ವಾಮೀಜಿ ಕೂಡಿದ್ದು ಒಳ್ಳೆಯ ಬೆಳವಣಿಗೆ. ಇಬ್ಬರೂ ಸಮಾಜದ ಹಿತದೃಷ್ಠಿಯಿಂದ ಕೆಲಸ ಮಾಡಲಿ. ಯಾರೋ ಅನುದಾನ ಕೊಡ್ತಾರೆ ಅಂತ ಕೆಲಸ ಮಾಡುವುದು ಬೇಡ.  ಸರಕಾರದ ಅನುದಾನ ಆಸೆಯಿಂದ ಕೆಲಸ ಮಾಡುವುದು ಬೇಡ.

ಸರಕಾರದ ಅನುದಾನ ಪಡೆದರೆ ಮಠಗಳು ಸ್ವಾಯತ್ತ ಕಳೆದುಕೊಂಡಂತಾಗುತ್ತದೆ.  ಸರಕಾರ, ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಮಾತು ಕೇಳಿಕೊಂಡು ಹೇಳಿಕೆ ಕೊಡುವುದನ್ನು ಬಿಡಬೇಕು.  ಸಿದ್ಧಗಂಗಾ ಮಠದ ಮಾದರಿಯಲ್ಲಿ ಉಳಿದ ಮಠಗಳು ಸಮಾಜಮುಖಿ ಕೆಲಸ ಮಾಡಲಿ" ಎಂದು ಅವರು ಕಿವಿಮಾತು ಹೇಳಿದರು.
Published by: MAshok Kumar
First published: January 30, 2021, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories