ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಇನ್ಸ್​​ಪೆಕ್ಟರ್ ಗೆ ಸನ್ಮಾನ!

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಅನೇಕ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ಸೋಂಕು ದೃಢವಾಗಿದ್ದು, ಅನೇಕರು ಗುಣಮುಖರಾಗಿ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ.

news18-kannada
Updated:August 14, 2020, 6:08 PM IST
ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಇನ್ಸ್​​ಪೆಕ್ಟರ್ ಗೆ ಸನ್ಮಾನ!
ಇನ್ಸ್​ಪೆಕ್ಟರ್​ಗೆ ಹೂ ಮಾಲೆ ಹಾಕಿ ಸನ್ಮಾನಿಸಿರುವ ಸಿಬ್ಬಂದಿಗಳು
  • Share this:
ಬೆಳಗಾವಿ(ಆಗಸ್ಟ್. 14): ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದ ಪೊಲೀಸ್ ಸಿಬ್ಬಂದಿಗಳು ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನೂ ಸೋಂಕಿನಿಂದ ಗುಣಮುಖರಾಗಿ ಕರ್ವತ್ಯಕ್ಕೆ ಹಾಜರಾದ ಖಡೇಬಜಾರ್ ಇನ್ಸ್​​ಪೆಕ್ಟರ್ ಧೀರಜ್ ಪಾಟೀಲ್ ಗೆ ಇಂದು ಸಿಬ್ಬಂದಿಯಿಂದ ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು.

ಬೆಳಗಾವಿ ಜಿಲ್ಲೆಯ ಪೊಲೀಸರಿಗೆ ದೊಡ್ಡ ಸವಾಲ್ ಆಗಿದ್ದು ನಿಪ್ಪಾಣಿ ಬಳಿಯ ಕುಗನೊಳ್ಳಿ ಚೆಕ್ ಪೋಸ್ಟ್. ಈ ಚೆಕ್ ಪೋಸ್ಟ್ ಮೂಲಕವೇ ಕರ್ನಾಟಕ, ತಮಿಳುನಾಡು ಹಾಗೂ ಕೇರಳಕ್ಕೆ ಉತ್ತರ ಭಾರತದಿಂದ ಸಾವಿರಾರು ಜನ ಆಗಮಿಸಿದ್ದರು. ಹೈರಿಸ್ಕ್ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿಯಿಂದ ಆಗಮಿಸಿದ್ದ ಅನೇಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇಲ್ಲಿ ಕೆಲಸ ನಿರ್ವಹಿಸಿದ ಅನೇಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡು ಇದೀಗ ಗುಣಮುರಾಗಿದ್ದಾರೆ.

ಬೆಳಗಾವಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ 45ಕ್ಕೂಹೆಚ್ಚು ಜನ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಪ್ರಮುಖವಾಗಿ ಖಡೇಬಜಾರ್, ಸಂಚಾರಿ ದಕ್ಷಿಣ, ಬೆಳಗಾವಿ ಗ್ರಾಮೀಣ ಇನ್ಸ್ ಪೆಕ್ಟರ್ ಗಳಿಗೆ ಸೋಂಕು ತಗುಲಿದೆ. ಅನೇಕರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಇಡೀ ದಿನ ಕೆಲಸ ಮಾಡಿದ್ದ ಟ್ರಾಫಿಕ್ ಸಿಬ್ಬಂದಿಯಲ್ಲಿಯೂ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿತ್ತು.

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಅನೇಕ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ಸೋಂಕು ದೃಢವಾಗಿದ್ದು, ಅನೇಕರು ಗುಣಮುಖರಾಗಿ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದಾರೆ. ಇನ್ನೂ ಅನೇಕರು ಇನ್ನೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಕೇವಲ ಪೊಲೀಸ್ ಸಿಬ್ಬಂಧಿಗೆ ಅಷ್ಟೇ ಅಲ್ಲ ಅವರ ಕುಟುಂಬಸ್ಥರಿಗೆ ಸೋಂಕಿನಿಂದ ಬಳಲುವಂತೆ ಆಗಿದೆ.

ಜಿಲ್ಲೆಯ ಪೊಲೀಸ್ ಸಿಬ್ಭಂದಿಯ ಸುರಕ್ಷತೆ ದೃಷ್ಠಿಯಿಂದ ಈಗಾಗಲೇ ಬೆಳಗಾವಿ ಜಿಲ್ಲೆಯ ಎಸ್ಪಿ ಲಕ್ಷ್ಮಣ್ ನಿಂಬುರ್ಗಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಮೊದಲು 60ರಿಂದ 55 ವರ್ಷದ ಸಿಬ್ಬಂದಿಗೆ ಪರೀಕ್ಷೆ, ನಂತರ 50 ರಿಂದ 55 ವಯಸ್ಸಿನ ಸಿಬ್ಬಂದಿ ಹೀಗೆ ವಯಸ್ಸಿನ ಆಧಾರ ಮೇಲೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಜತೆಗೆ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇರುವ ಸಿಬ್ಬಂದಿಗೆ ಆರೋಗ್ಯ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸಹ ಸೂಚನೆ ನೀಡಲಾಗಿದೆ.

ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅನೇಕ ಸಿಬ್ಬಂದಿಗೆ ಹೋಟೆಲ್ ಕ್ವಾರಂಟೈನ್ ನಲ್ಲಿ ಸಹ ಇರಲು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಅನೇಕ ಕಂಟೈನ್​​ ಮೆಂಟ್ ಝೋನ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಮುನ್ನೆಚ್ಚರಿಕೆ ವಹಿಸಿದ್ರು ಸೋಂಕು ಬಾಧಿಸಿದೆ.
Published by: G Hareeshkumar
First published: August 14, 2020, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading