HOME » NEWS » District » AFTER MAHARASHTRA LOCUST BUNCH FIND IN NORTH CANARA FARMERS GOT SCARY RMD

ಮಹಾರಾಷ್ಟ್ರದ ರೈತರ ನಿದ್ದೆಗೆಡಿಸಿದ ಮಿಡತೆಗಳು ಕರಾವಳಿಯ ತೋಟಗಳಲ್ಲಿ ಪತ್ತೆ; ಬೆಚ್ಚಿಬಿದ್ದ ಕೃಷಿಕ

ಕರಾವಳಿ ಭಾಗದ ಕೃಷಿಕರು ಇಷ್ಟೊಂದು ಪ್ರಮಾಣದ ಮಿಡತೆಗಳನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದಾರೆ. ಕೃಷಿ ತೋಟಗಳಲ್ಲಿ ಮಿಡತೆಗಳು ಸಾಮಾನ್ಯವಾಗಿದ್ದು, ಇದೀಗ ಕಂಡು ಬಂದ ಮಿಡತೆಗಳು ಈ ಭಾಗದ ತೋಟಗಳಲ್ಲಕ ಕಂಡು ಬರುವ ಮಿಡತೆಗಳಿಗಿಂತ ಆಕಾರದಲ್ಲಿ ದೊಡ್ಡದಾಗಿದ್ದು,ಬಣ್ಣದಲ್ಲೂ ವೆತ್ಯಾಸವಿದೆ.

news18-kannada
Updated:May 31, 2020, 9:59 AM IST
ಮಹಾರಾಷ್ಟ್ರದ ರೈತರ ನಿದ್ದೆಗೆಡಿಸಿದ ಮಿಡತೆಗಳು ಕರಾವಳಿಯ ತೋಟಗಳಲ್ಲಿ ಪತ್ತೆ; ಬೆಚ್ಚಿಬಿದ್ದ ಕೃಷಿಕ
ಮಿಡತೆ
  • Share this:
ಪುತ್ತೂರು (ಮೇ 31): ರಾಜಸ್ಥಾನ, ಮಹಾರಾಷ್ಟ್ರದಲ್ಲಿ ರೈತರ ನಿದ್ದೆಗೆಡಿಸಿರುವ ಮಿಡತೆಗಳ ಹಾವಳಿ ಈಗ ರಾಜ್ಯದ ಕರಾವಳಿಗೂ ಆವರಿಸುವ ಲಕ್ಷಣ ಗೋಚರವಾಗಿದೆ. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳ ರಾಶಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.

ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದಲ್ಲಿ ಅನೀಶ್ ಎಂಬವರ ತೋಟದಲ್ಲಿ ಮಿಡತೆಗಳ ಗುಂಪು ಕಂಡುಬಂದಿದೆ. ರಬ್ಬರ್ ಗಿಡಗಳ ಕೆಳಗೆ ಹಬ್ಬಿರುವ ಬಳ್ಳಿಗಳಲ್ಲಿ ಕುಳಿತು ಎಲೆಗಳನ್ನು ತಿನ್ನುತ್ತಿದ್ದ ಮಿಡತೆಗಳು ಮಹಾರಾಷ್ಟ್ರದಲ್ಲಿ ಪತ್ತೆಯಾದ ಮಿಡತೆಗಳ ರೀತಿ ಕಂಡಿವೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿಯ ವಿಶ್ವನಾಥ ಎಂಬವರ ತೋಟದಲ್ಲಿಯೂ ಮಿಡತೆಗಳ ರಾಶಿ ಕಾಣಿಸಿದ್ದು ರೈತರು ಬೆಚ್ಚಿದ್ದಾರೆ.

ಗುಂಪು ಗುಂಪಾಗಿ ಬಂದು ಒಂದೆಡೆ ದಾಳಿ ಇಡುವ ಈ ಮಿಡತೆಗಳನ್ನು ಕಂಡು ಸ್ಥಳೀಯ ರೈತರು ಆತಂಕಿತರಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ರಾಜಸ್ಥಾನಕ್ಕೆ ದಾಳಿ ಇಟ್ಟಿರುವ ಮಿಡತೆಗಳು ಕರ್ನಾಟಕಕ್ಕೆ ಬರುವ ಬಗ್ಗೆ ತಜ್ಞರು ಎಚ್ಚರಿಸಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಪತ್ತೆಯಾಗುವ ಮೊದಲೇ ಕರಾವಳಿ ಭಾಗದಲ್ಲಿ ಇವುಗಳು ಕಾಣಿಸಿಕೊಂಡಿದ್ದು ಕೃಷಿಕರನ್ನು ಭಯಗ್ರಸ್ತರನ್ನಾಗಿ ಮಾಡಿದೆ.

ಕರಾವಳಿ ಭಾಗದ ಕೃಷಿಕರು ಇಷ್ಟೊಂದು ಪ್ರಮಾಣದ ಮಿಡತೆಗಳನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದಾರೆ. ಕೃಷಿ ತೋಟಗಳಲ್ಲಿ ಮಿಡತೆಗಳು ಸಾಮಾನ್ಯವಾಗಿದ್ದು, ಇದೀಗ ಕಂಡು ಬಂದ ಮಿಡತೆಗಳು ಈ ಭಾಗದ ತೋಟಗಳಲ್ಲಕ ಕಂಡು ಬರುವ ಮಿಡತೆಗಳಿಗಿಂತ ಆಕಾರದಲ್ಲಿ ದೊಡ್ಡದಾಗಿದ್ದು,ಬಣ್ಣದಲ್ಲೂ ವೆತ್ಯಾಸವಿದೆ. ಕರಾವಳಿ ಭಾಗದಲ್ಲಿ ಕಂಡು ಬರುವ ಹೆಚ್ಚಿನ  ಮಿಡತೆಗಳ ಆಕಾರ ಸಣ್ಣದಾಗಿದ್ದು, ಬಣ್ಣದಲ್ಲೂ ವೆತ್ಯಾಸವಿದೆ.

ಇದೀಗ ಕೆಲವೇ ಭಾಗದ ತೋಟಗಳಲ್ಲಿ ಕಂಡು ಬಂದಿರುವ ಈ ಮಿಡತೆಗಳು ಕರಾವಳಿ ಭಾಗದಾದ್ಯಂತ ಪಸರಿಸಿದ್ದೇ ಆದಲ್ಲಿ ಈ ಭಾಗದ ಕೃಷಿಕರು ಭಾರೀ ಸಂಕಷ್ಟಕ್ಕೀಡಾಗುವ ಆತಂಕವಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಹೆಚ್ಚಿನ ಕೃಷಿಕರು ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್ ಜೊತೆಗೆ ಭತ್ತ, ತರಕಾರಿ ಮೊದಲಾದ ಬೆಳೆಗಳನ್ನು ಬೆಳೆಸುತ್ತಿದ್ದಾರೆ‌.  ಮಿಡತೆಗಳು ಭಾರೀ ಪ್ರಮಾಣದಲ್ಲಿ ಈ ತೋಟಗಳಿಗೆ ದಾಳಿ ಮಾಡಿದ್ದೇ ಆದಲ್ಲಿ ಕೃಷಿಕರು ಭಾರೀ ನಷ್ಟ ಅನುಭವಿಸಬೇಕಾದ ಸ್ಥಿತಿಯೂ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೂ ಕಾಲಿಡಲಿದೆ ಮಿಡತೆ ದಂಡು?; ಬೀದರ್​ನಲ್ಲಿ ಹೆಚ್ಚಿದ ಆತಂಕ

ಅಡಿಕೆ ಮರಗಳಲ್ಲಿ ಇದೀಗ ಹೂ ಬಿಟ್ಟು ಕೆಲವು ಮರಗಳಲ್ಲಿ ಅಡಿಕೆ ಮಿಡಿಗಳು ಬೆಳೆಯಲು ಆರಂಭಗೊಂಡಿದೆ. ಇದೀಗ ದಾಳಿ ಮಾಡಿರುವ ಮಿಡತೆಗಳ ಸ್ವಭಾವ ಏನು ಎನ್ನುವ ಬಗ್ಗೆ ಕೃಷಿಕರಲ್ಲಿ ಗೊಂದಲವಿದೆ‌. ಒಂದು ವೇಳೆ ಈ ಮಿಡತೆಗಳು ಅಡಿಕೆ ಹೂ ಹಾಗೂ ಮಿಡಿಗಳನ್ನು ತಿಂದದ್ದೇ ಆದಲ್ಲಿ ಅಡಿಕೆ ಬೆಳೆಗಾರ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.ಅಡಿಕೆ ತೋಟಗಳಲ್ಲಿ ಈಗಾಗಲೇ ಆಫ್ರಿಕನ್ ಬಸವನ ಹುಳುಗಳ ಕಾಟ ಹೆಚ್ಚಾಗಿದ್ದು, ಇದರ ಜೊತೆಗೆ ಮಿಡತೆಗಳ ಆತಂಕವೂ ಕೃಷಿಕರಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕರಾದ ಗುತ್ತಿಗಾರಿನ ಮಹೇಶ್ ಪುಚ್ಚಪ್ಪಾಡಿ. ಈ ಮಿಡತೆಗಳ ಗುಂಪು ಕಡಬ ಹಾಗೂ ಬೆಳ್ತಂಗಡಿಯ ಕೆಲವೇ ತೋಟಗಳಲ್ಲಿ ಸದ್ಯಕ್ಕೆ ಪತ್ತೆಯಾಗಿದ್ದು, ಇವುಗಳ ಮುಂದಿನ ಸವಾರಿ ಎಲ್ಲಿಗೆ ಎನ್ನುವ ಆತಂಕ ಕರಾವಳಿ ಭಾಗದ ಕೃಷಿಕರದ್ದಾಗಿದೆ.
Youtube Video
First published: May 31, 2020, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories