ಗ್ರಾಮ ಪಂಚಾಯಿತಿ ಫಲಿತಾಂಶದ ಬೆನ್ನಿಗೆ ಕೋಲಾರದಲ್ಲಿ ಕಾವು ಪಡೆಯುತ್ತಿರುವ ಬಾಡೂಟ ಪಾಲಿಟಿಕ್ಸ್​

ಜೆಡಿಎಸ್ ಸಭೆಗೆ ಆಗಮಿಸಿದ್ದ ಕಾರ್ಯಕರ್ತರು ಬಾಡೂಟ ಸವಿಯಲು ಮುಗಿಬಿದ್ದರು, ಬಾಡೂಟ ಕಾರ್ಯಕ್ರಮದಲ್ಲಿ ತಲಾ 300 ಕೆಜಿ ಮಟನ್, 300 ಕೆಜಿ ಚಿಕನ್ ಬಿರಿಯಾನಿ ಹಾಗು ಚಿಕನ್ ಕಬಾಬ್ ವ್ಯವಸ್ತೆಯನ್ನ ಮಾಡಲಾಗಿತ್ತು.

ಕೋಲಾರದ ಬಾಡೂಟದ ಚಿತ್ರಣ.

ಕೋಲಾರದ ಬಾಡೂಟದ ಚಿತ್ರಣ.

  • Share this:
ಕೋಲಾರ: ಗ್ರಾಮ‌ ಪಂಚಾಯಿತಿ ಚುನಾವಣೆ ಫಲಿತಾಂಶದ ನಂತರ ಕೋಲಾರ ತಾಲೂಕಿನಲ್ಲಿ  ಬಾಡೂಟ ರಾಜಕೀಯ ಸದ್ದು ಮಾಡುತ್ತಿದೆ. ಕಳೆದ ಭಾನುವಾರ  ಮಾಜಿ ಶಾಸಕ ವರ್ತೂರು ಪ್ರಕಾಶ್ ಕೋಲಾರ ನಗರದ ತಮ್ಮ ನಿವಾಸದಲ್ಲಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಿಗೆ, ಅಭಿನಂದನಾ ಸಮಾರಂಭ ಆಯೋಜಿಸಿ ಬಾಡೂಟ ಹಾಕಿಸಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಚಿಕನ್ ಬಿರಿಯಾನಿ ಹಾಕಿಸಿ ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿ, ಒಂದೆರಡು ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರದಲ್ಲಿ ಇರೊಲ್ಲ ಎಂದು ವ್ಯಂಗ್ಯವಾಡಿದ್ದರು. ಇನ್ನು ವರ್ತೂರು ಪ್ರಕಾಶ್ ಕಾರ್ಯಕ್ರಮ ನಡೆಸಿದ ಮೂರೇ ದಿನಕ್ಕೆ ಇದೀಗ ಜೆಡಿಎಸ್ ನಾಯಕರು  ಭರ್ಜರಿಯಾಗಿ ಕಾರ್ಯಕರ್ತರಿಗೆ  ಬಾಡೂಟ ಹಾಕಿಸುವ ಮೂಲಕ ವರ್ತೂರು ವಿರುದ್ಧ ಸಖತ್ತಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ನರಗದ ಗೋಲ್ಡನ್ ಪ್ಯಾಲೇಸ್‍ನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ, ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಪರಿಷತ್ ಶಾಸಕ ಗೋವಿಂದರಾಜು, ಬಾಬು ಮೋನಿ, ನಟರಾಜ್,  ಸಿಎಮ್‍ಆರ್ ಶ್ರೀನಾಥ್, ಹರೀಶ್,  ರಾಜೇಶ್ವರಿ ಸೇರಿದಂತೆ ಹಲವು ನಾಯಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ  ಆಯ್ಕೆಯಾದ ಸದಸ್ಯರಿಗೆ,  ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶ್ರೀನಿವಾಸಗೌಡ, ತಮ್ಮ ಕಟ್ಟಾ ವಿರೋಧಿ ವರ್ತೂರು ಪ್ರಕಾಶ್ ಹಸರೇಳದೆ ವ್ಯಂಗ್ಯವಾಡಿದ್ದು ವಿಶೇಷವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಮೂರನೇ ಸ್ತಾನಕ್ಕೆ ಹೋದವರು ಇತ್ತೀಚೆಗೆ ಸಭೆ ನಡೆಸಿದ್ದರು.ಲ ಅವರ ಬಗ್ಗೆ ಮಾತಾಡೋದೆ ಈಗ ಅಪ್ರಸ್ತುತ, ನಮ್ಮ ರಾಜಕೀಯಕ್ಕು ಅವರ ರಾಜಕೀಯಕ್ಕು ಸಂಬಂದವೇ ಇಲ್ಲವೆಂದು ವ್ಯಂಗ್ಯವಾಡಿದರು.

ಇನ್ನು ಜೆಡಿಎಸ್ ಸಭೆಗೆ ಆಗಮಿಸಿದ್ದ ಕಾರ್ಯಕರ್ತರು ಬಾಡೂಟ ಸವಿಯಲು ಮುಗಿಬಿದ್ದರು, ಬಾಡೂಟ ಕಾರ್ಯಕ್ರಮದಲ್ಲಿ ತಲಾ 300 ಕೆಜಿ ಮಟನ್, 300 ಕೆಜಿ ಚಿಕನ್ ಬಿರಿಯಾನಿ ಹಾಗು ಚಿಕನ್ ಕಬಾಬ್ ವ್ಯವಸ್ತೆಯನ್ನ ಮಾಡಲಾಗಿತ್ತು. ಬಾಡೂಟ ಸವಿಯಲು ಸಾಮಾಜಿಕ ಅಂತರವಿಲ್ಲದೆ, ಕಾರ್ಯಕರ್ತರು ತಾ ಮುಂದು ನಾ ಮುಂದು ಎಂದು ಮುಗಿಬಿದ್ದರು.

ಕಾರ್ಯಕ್ರಮದ ನಂತರ ಮಾತನಾಡಿದ ಸಿಎಮ್ ಆರ್ ಟೊಮೆಟೊ ಮಂಡಿ ಮಾಲೀಕ, ಜೆಡಿಎಸ್ ಮುಖಂಡ ಶ್ರೀನಾಥ್ ವರ್ತೂರು ಪ್ರಕಾಶ್ ವಿರುದ್ದ ಕಿಡಿಕಾರಿದರು, ಮೊನ್ನೆಯ ಸಭೆಯಲ್ಲಿ ಮಾತನಾಡುವಾಗ ವರ್ತೂರು ಪ್ರಕಾಶ್, ಕೋಲಾರದಲ್ಲಿ "ಟೊಮೆಟೊ ಕಾಸು" ಹೆಚ್ಚಾಗಿ ಓಡಾಡುತ್ತಿದೆ ನಮ್ಮ ಕಾರ್ಯಕರ್ತರು ಹಣಕ್ಕೆ ಆಸೆಬಿದ್ದು ಜೆಡಿ ಎಸ್ ಗೆ ಬೆಂಬಲ ನೀಡಬೇಡಿ ಎಂದು ಕರೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಶ್ರೀನಾಥ್, ನಾವು ಟೊಮೆಟೊ ವಹಿವಾಟು ಮಾಡಲು ಸಿದ್ದ, ರಾಜಕೀಯ ಮಾಡಲು ಸಿದ್ದ, ಪಕ್ಷದ ಸಂಘಟನೆ ನಮ್ಮ ಗುರಿ ತಾಲೂಕಿನ ಬಹುತೇಕ ಕಡೆ ಜೆಡಿಎಸ್ ಬೆಂಬಲಿತರೇ ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯವುದಾಗಿ ಸವಾಲು ಹಾಕಿದರು.

ಇದನ್ನೂ ಓದಿ: ಕುಮಾರಸ್ವಾಮಿಯನ್ನು ಕರ್ನಾಟಕದ ಬಫೂನ್​ ಎಂದಿದ್ದ ವಿಶ್ವನಾಥ್; ಹಳ್ಳಿಹಕ್ಕಿಗೆ ಸಾರಾ ಮಹೇಶ್​ ತಿರುಗೇಟು

ಇನ್ನು ಕಳೆದ ಭಾನುವಾರ ಕೋಲಾರ ನಗರದ ತಮ್ಮ ನಿವಾಸದಲ್ಲಿ  ಬೆಂಬಲಿಗರ ಸಭೆ ಆಯೋಜಿಸಿ,  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಸದಸ್ಯರಿಗೆ ಸನ್ಮಾನಿಸಿ, ನಂತರ ಎಲ್ಲರಿಗೂ ಚಿಕನ್ ಬಿರಿಯಾನಿ ಊಟವನ್ನ ಆಯೋಜಿಸಿದ್ದರು, ಅಂದಿನ ಕಾರ್ಯಕ್ರಮದಲ್ಲು ಚಿಕನ್ ಬಿರಿಯಾನಿ ಸವಿಯಲು,  ಕಾರ್ಯಕರ್ತರು ಮುಗಿಬಿದ್ದ ದೃಶ್ಯಗಳು ಕಂಡುಬಂದಿತ್ತು.

ಒಟ್ಟಿನಲ್ಲಿ ಕೋಲಾರ ತಾಲೂಕಿನಲ್ಲಿ ಬಾಡೂಟ ರಾಜಕೀಯ ಸದ್ದು ಮಾಡುತ್ತಿದ್ದು, ಗ್ರಾಮ ಪಂಚಾಯಿತಿ ಚುನಾವಣೆ ನಂತರ ಮುಂದಿನ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಿಸಲು ನಾಯಕರು ಸಿದ್ದತೆ ಆರಂಭಿಸಿದ್ದಾರೆ, ಈ ಮಧ್ಯೆ ಜೆಡಿಎಸ್ ಪಕ್ಷದ ಕೆಲ ನಾಯಕರು ತಾಲೂಕಿನಲ್ಲಿ ಗುರ್ತಿಸಿಕೊಳ್ಳಲು ಪಕ್ಷ ಸಂಘಟನೆ ಹೆಸರಲ್ಲಿ ಓಡಾಡುತ್ತಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ಆ ಮೂಲಕ ತಾವು ಆಕಾಂಕ್ಷಿ ಎಂತಲೂ ಬಿಂಬಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
Published by:MAshok Kumar
First published: