ದೇಶಾದ್ಯಂತ ಕೊರೋನಾ ಎರಡನೇ ಅಲೆ ಅಬ್ಬರಕ್ಕೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಜನ ಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಲಾಕ್ಡೌನ್ನಿಂದಾಗಿ ಕೇವಲ ಮನುಷ್ಯರಿಗೆ ಮಾತ್ರ ಸಮಸ್ಯೆಯಾಗಿಲ್ಲ, ಬದಲಾಗಿ ಮುಖ ಪ್ರಾಣಿಗಳಿಗೂ ಸಹ ಪರಿಣಾಮ ಬೀರಿದೆ. ಲಾಕ್ಡೌನ್ ನಿಂದ ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯಕ್ಕೆ ಜನರ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಮೃಗಾಲಯಕ್ಕೆ ಬರುತ್ತಿದ್ದ ಆದಾಯ ನಿಂತು ಹೋಗಿದ್ದು, ಅನೇಕ ಸಮಸ್ಯೆಗಳು ಸೃಷ್ಠಿಯಾಗಿವೆ. ಆದರೇ ಇತ್ತೀಚಿಗೆ ನಟ ದರ್ಶನ್ ತೂಗುದೀಪ ಅವರು ಅಭಿಮಾನಿಗಳಿಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ದಾನಿಗಳು ಮೃಗಾಲಯಕ್ಕೆ ಹಣದ ನೆರವು ನೀಡುತ್ತಿದ್ದಾರೆ. ಇದು ಅರಣ್ಯ ಇಲಾಖೆಯನ್ನು ಸ್ವಲ್ಪ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ.
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡತೆ ಕಿರು ಮೃಗಾಲಯ ನಿರ್ಮಾಣ ಮಾಡಲಾಗಿದೆ. ಈ ಮೃಗಾಲಯಕ್ಕೆ ರಾಣಿ ಚನ್ನಮ್ಮ ಕಿರು ಮೃಗಾಲಯ ಎಂದು ನಾಮಕರಣ ಸಹ ಮಾಡಲಾಗಿದೆ. ಅನೇಕ ವರ್ಷಗಳ ಹಿಂದೆ ಮೃಗಾಲಯ ಇದ್ದರು ಅಷ್ಟೊಂದು ಪ್ರಖ್ಯಾತಿ ಪಡೆದಿರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರು ಮೃಗಾಲಯದ ಅಭಿವೃದ್ಧಿಗೆ ಮುಂದಾಗಿದ್ದರು. ಈ ವೇಳೆಯಲ್ಲಿ ಮೃಗಾಲಯಕ್ಕೆ ಸಿಂಹ, ಹುಲಿ ಹಾಗೂ ಚಿರತೆ ತಂದು ಬಿಡಲಾಗಿತ್ತು.
ಇತ್ತೀಚಿಗೆ ದಿನಗಳಲ್ಲಿ ಕಾಡು ಪ್ರಾಣಿಗಳನ್ನು ನೋಡಲು ವೀಕ್ಷಕರ ಸಂಖ್ಯೆಯು ಹೆಚ್ಚಾಗಿದ್ದು, ಮೃಗಾಲಯಕ್ಕೆ ಒಳ್ಳೆಯ ಆದಾಯ ಬರುತ್ತಿತ್ತು. ಆದರೇ ಲಾಕ್ಡೌನ್ನಿಂದ ಆದಾಯ ಸಂಪೂರ್ಣವಾಗಿ ನಿಂತು ಹೋಗಿದೆ. ಈ ಮೃಗಾಲಯದಲ್ಲಿ 380ಕ್ಕೂ ಹೆಚ್ಚು ಪ್ರಾಣಿ, ಪಕ್ಷಗಳು ಇವೆ. ಪ್ರಮುಖವಾಗಿ ಮೂರು ಸಿಂಹ, ಎರಡು ಹುಲಿ, ಮೂರು ಚಿರತೆ, ಮೊಸಳೆ ಸೇರಿ ಅನೇಕ ಪ್ರಾಣಿ, ಪಕ್ಷಿಗಳು ಇವೆ. ಪ್ರಾಣಿಗಳಿಗೆ ಆಹಾರ, ಸಿಬ್ಬಂದಿ ವೇತನ ಸೇರಿ ಪ್ರತಿ ತಿಂಗಳಿಗೆ 5.90 ಲಕ್ಷ ರೂಪಾಯಿ ವೆಚ್ಚ ತಗುಲುತ್ತದೆ. ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಯಾವುದೇ ಆದಾಯ ಬರುತ್ತಿಲ್ಲ.
ಇದನ್ನೂ ಓದಿ: Radhe Shyam: ಪ್ರಭಾಸ್ ಸಿನಿಮಾಗೆ 400 ಕೋಟಿ ಆಫರ್ ಕೊಟ್ಟಿದೆಯಂತೆ ಅಮೆಜಾನ್ ಪ್ರೈಮ್..!
ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವಂತೆ ಹಾಗೂ ಆರ್ಥಿಕ ನೆರವು ನೀಡುವಂತೆ ಇತ್ತೀಚಿಗೆ ನಟ ದರ್ಶನ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕೇ ದಿನದಲ್ಲಿ 1.45 ಲಕ್ಷ ರೂಪಾಯಿ ನೆರವು ಹರಿದು ಬಂದಿದೆ. ಇದು ಸಂಗ್ರಹಾಲಯಕ್ಕೆ ಸಾಕಷ್ಟು ಅನಕೂಲವಾಗಿದೆ. ಇನ್ನೂ ಅನೇಕ ದಾನಿಗಳು ಆ್ಯಪ್ ಮೂಲಕ ನೇರವಾಗಿ ಹಣ ಹಾಕುತ್ತಿದ್ದಾರೆ. ಜತೆಗೆ ಎರಡು ಹುಲಿ ಹಾಗೂ ಒಂದು ಸಿಂಹವನ್ನು ದಾನಿಗಳು ಈಗಾಗಲೇ ದತ್ತು ಪಡೆದಿದ್ದು, ಒಂದು ವರ್ಷಕ್ಕೆ 1 ಲಕ್ಷ ರೂಪಾಯಿ ನೀಡುತ್ತಿದ್ದಾರೆ. ಪ್ರಾಣಿಗಳು ಉಪಯೋಗ ಆಗುವ ಉತ್ತಮ ಸಂದೇಶ ರವಾನೆ ಮಾಡಿದ ನಟ ದರ್ಶನಗೆ ಸಂಗ್ರಹಾಲಯದ ಸಿಬ್ಬಂಧಿ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: Yuvarathnaa: ರಿಲೀಸ್ ಆಯ್ತು ಯುವರತ್ನ ಸಿನಿಮಾದ ಫೀಲ್ ದ ಪವರ್ ವಿಡಿಯೋ ಹಾಡು..!
ಬೆಳಗಾವಿ ಮಾತ್ರವಲ್ಲದೆ ರಾಜ್ಯದಲ್ಲಿರುವ ಎಲ್ಲ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದರ್ಶನ್ ಅವರ ಅಭಿಮಾನಿಗಳು ದತ್ತು ಪಡೆಯುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಮೃಗಾಲಯಗಳಲ್ಲಿರುವ ಕಾಡು ಪ್ರಾಣಿಗಳನ್ನು ದರ್ಶನ್ ಅವರ ಅಭಿಮಾನಿಗಳು ದತ್ತು ಪಡೆಯುತ್ತಿದ್ದು, ನಾಲ್ಕು ದಿನಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಂದ ಪ್ರಾಣಿಗಳ ದತ್ತು ಸ್ವೀಕಾರಿಸಿದ್ದಾರೆ. ಒಟ್ಟಾರೆ ನಾಲ್ಕು ದಿನದಲ್ಲಿ ರಾಜ್ಯದ ಮೃಗಾಲಯಗಳಿಗೆ ಹರಿದು ಬಂದಿರುವ ಮೊತ್ತ ಬರೋಬ್ಬರಿ 70 ಲಕ್ಷ 33 ಸಾವಿರ ರೂಪಾಯಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ