HOME » NEWS » District » AFTER CORONA VIRUS IS ABOUT DENGUE FEVER IN MANGALORE HK

ಕೊರೋನಾ ವೈರಸ್​ ನಡುವೆ ಮಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆತಂಕ

ಡೆಂಗ್ಯೂ ಭೀತಿಯ ನಡುವೆ ಮಲೇರಿಯಾ ಪ್ರಕರಣಗಳು ಅಲಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷವೂ ಡೆಂಗ್ಯೂ ಕರಾವಳಿಯನ್ನು ಬಹುವಾಗಿ ಕಾಡಿ, ಹಲವರನ್ನು ಬಲಿ ಪಡೆದಿತ್ತು. ಈ ಬಾರಿಯೂ ಡೆಂಗ್ಯೂ ಭೀತಿ ಜಾಸ್ತಿಯಾಗುವ ಸಾಧ್ಯತೆಗಳಿವೆ.

news18-kannada
Updated:June 15, 2020, 5:47 PM IST
ಕೊರೋನಾ ವೈರಸ್​ ನಡುವೆ ಮಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆತಂಕ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು(ಜೂ.15): ಕರಾವಳಿಯಲ್ಲಿ ಕೊರೋನಾ ನಡುವೆ ಡೆಂಗ್ಯೂ ಆರ್ಭಟ ಆರಂಭವಾಗಿದೆ. ಕೊರೋನಾಗಿಂತ ಹೆಚ್ಚು ಮಾರಕವಾಗಿ ಕಾಡುವ ಡೆಂಗ್ಯೂ ಜ್ವರ ಈಗಾಗಲೇ ಒಬ್ಬರನ್ನು ಬಲಿ ಪಡೆದಿದೆ. ಗ್ರಾಮೀಣ ಭಾಗದಲ್ಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಭೀತಿಯ ನಡುವೆ ಮಳೆಗಾಲದಲ್ಲಿ ಡೆಂಗ್ಯೂ ಆತಂಕ ಹೆಚ್ಚುತ್ತಿದೆ. ನಗರಕ್ಕಿಂತಲೂ ಗ್ರಾಮೀಣ ಭಾಗದಲ್ಲಿಯೇ ಡೆಂಗ್ಯೂ ಭೀತಿ ಹೆಚ್ಚಾಗಿದೆ. ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿವರೆಗೆ ಸುಮಾರು 89 ಡೆಂಗ್ಯೂ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ. ಈ ಪೈಕಿ ಶಂಕಿತ ಡೆಂಗ್ಯೂ ಜ್ವರಕ್ಕೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಮಹಿಳೆ ಬಲಿಯಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಹೆಚ್ಚಳವಾಗಲು ಕಾರಣ ಪತ್ತೆಗೆ ಆರೋಗ್ಯ ಅಧಿಕಾರಿಗಳ ತಂಡ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಈ ಸಂದರ್ಭ ಬಹುತೇಕ ಅಡಿಕೆ ತೋಟ, ರಬ್ಬರ್ ತೋಟಗಳಲ್ಲಿ ನೀರು ನಿಲುಗಡೆಯಾಗಿರುವುದು ಕಂಡು ಬಂದಿದೆ. ರಬ್ಬರ್ ತೋಟಗಳಲ್ಲಿ ಮರಗಳಿಂದ ಹಾಲು ಸಂಗ್ರಹಿಸಲು ಇರಿಸುವ ಗೆರಟೆ, ಅಡಿಕೆ ಸೋಗೆ ಮತ್ತು ಸ್ಪಿಂಕ್ಲರ್ ಗೂಟದಲ್ಲಿ ಮಳೆ ನೀರು ತುಂಬಿಕೊಂಡು ಲಾರ್ವ ಉತ್ಪತ್ತಿಯಾಗುತ್ತಿದೆ. ಇದೇ ಲಾರ್ವಾ ಸೊಳ್ಳೆಯಾಗಿ ಪರಿವರ್ತನೆಗೊಂಡು ಡೆಂಗ್ಯೂ ಹರಡಲು ಕಾರಣವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಡೆಂಗ್ಯೂ ಭೀತಿಯ ನಡುವೆ ಮಲೇರಿಯಾ ಪ್ರಕರಣಗಳು ಅಲಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷವೂ ಡೆಂಗ್ಯೂ ಕರಾವಳಿಯನ್ನು ಬಹುವಾಗಿ ಕಾಡಿ, ಹಲವರನ್ನು ಬಲಿ ಪಡೆದಿತ್ತು. ಈ ಬಾರಿಯೂ ಡೆಂಗ್ಯೂ ಭೀತಿ ಜಾಸ್ತಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಮಳೆಗಾಲದಲ್ಲಿ ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಜನರೇ ಜಾಗೃತರಾಗಬೇಕಿದೆ.

ಇದನ್ನೂ ಓದಿ :  ಲಾಕ್‌ಡೌನ್ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

ಈಗಾಗಲೇ ಆರೋಗ್ಯ ಇಲಾಖೆ ತಾಲೂಕು ಕೇಂದ್ರ ಗಳಿಗೆ ಮಾಹಿತಿ ನೀಡಿದೆ. ಗ್ರಾಮೀಣ ಭಾಗದ ಪ್ರತೀ ಮನೆಗೆ ತೆರಳಿ ಸೊಳ್ಳೆ ಉತ್ಫತಿಯಾಗದಂತೆ ತಡೆಯುವ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಆಶಾ ಕಾರ್ಯಕರ್ತರಿಗೆ ಸೂಚಿಸಿದೆ. ಈಗಾಗಲೇ ಟೈರ್ ಅಂಗಡಿ ಸೇರಿದಂತೆ ನೀರು ನಿಂತು ಸೊಳ್ಳೆ ಉತ್ಫತಿಯಾಗುವ ಜಾಗಗಳಿಗೆ ತೆರಳಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಲಾಗಿದೆ‌‌.
ಡೆಂಗ್ಯೂ ಜ್ವರ ಕೊರೋನಾ ದಿಂದಲೂ ಮಾರಕವಾಗಿ ಕಾಡಲಿದೆ. ಕೊರೋನಾದಿಂದ ದೇಹದ ಇತರ ಭಾಗಗಳಲ್ಲಿ ಸಮಸ್ಯೆಯಿದ್ದರೆ ಮಾತ್ರ ಬಹುವಾಗಿ ಕಾಡಲಿದೆ. ಆದರೆ ಡೆಂಗ್ಯೂ ದೇಹದ ಪ್ರಮುಖ ಅಂಶಗಳನ್ನೇ ನಾಶಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಹಾಗಾಗಿ ಜನರು‌ ಎಚ್ಚರಿಕೆಯಿಂದ ಇರಲು ಆರೋಗ್ಯ ಇಲಾಖೆ ಜನರಲ್ಲಿ ವಿನಂತಿ ಮಾಡಿಕೊಂಡಿದೆ.
First published: June 15, 2020, 5:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories