ಸಿಸೇರಿಯನ್ ಬಳಿಕ ರಕ್ತವಾಂತಿ ಮಾಡಿಕೊಂಡು ಬಾಣಂತಿ ಸಾವು.. ಆಸ್ಪತ್ರೆಯಲ್ಲಿ ರಾತ್ರೋರಾತ್ರಿ ಆಗಿದ್ದೇನು?

ಯಾರಿಗೂ ತಿಳಿಸದೇ ಪೊಲೀಸರನ್ನು ಕರೆಸಿ ರಾತ್ರೋರಾತ್ರಿ ಸರ್ಕಾರಿ ಆಸ್ಪತ್ರೆಗೆ ಶವವನ್ನು ಸಾಗಿಸುವ ಉದ್ದೇಶವೇನು ಎಂದು ಮೃತ ಮಹಿಳೆಯ ಪತಿ ಚೇತನ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಮಮತಾ

ಮೃತ ಮಮತಾ

  • Share this:
ತುಮಕೂರು : ಆಕೆ ತನ್ನ ಪುಟ್ಟ ಸಂಸಾರದ ಜೊತೆ ಭವಿಷ್ಯದ ಕನಸು ಹೊತ್ತಿದ್ದಳು. ಪುಟ್ಟ ಕಂದನ ಆಗಮನದ ನಿಯಲ್ಲಿದ್ದ ಆ ಕುಟುಂಬಕ್ಕೆ ಬರಸಿಡಿಲಿನಂದ ಆಘಾತ  ಎದುರಾಗಿತ್ತು. ಕಳೆದ ಮೂರುದಿನಗಳ ಹಿಂದೆ ಎಲ್ಲರ ಜೊತೆ ನಗುನಗುತ್ತಲೆ ಮಾತನಾಡಿಕೊಂಡು ತಿಪಟೂರು ನಗರದ ಜೇನುಕಲ್ಲು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಕಿಬ್ಬನಹಳ್ಳಿ ಹೋಬಳಿಯ ಕುಂದೂರು ಗ್ರಾಮದ 34 ವರ್ಷ ವಯಸ್ಸಿನ ಮಮತ ಮೃತ ದುರ್ದೈವಿ.

ಕಳೆದ ರಾತ್ರಿ ಪ್ರಸೂತಿ ಚಿಕಿತ್ಸೆಗಾಗಿ ಮಮತ ಜೇನುಕಲ್ ನರ್ಸಿಂಗ್ ಹೋಮ್ ಗೆ  ದಾಖಲಾಗಿದ್ದರು, ಆಸ್ಪತ್ರೆಗೆ ದಾಖಲಾಗುವ ವೇಳೆ ಆರೋಗ್ಯವಾಗಿ ಲವಲವಿಕೆ ಯಿಂದ ಇದ್ದ ಮಹಿಳೆ, ಸಿಜೇರಿಯನ್  ಬಳಿಕ ಸಾವನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೆ ಕಾರಣ ಎಂದು ಮಮತ ಪೋಷಕರು ಆರೋಪಿಸಿದ್ದಾರೆ. ಇನ್ನು ಮಹಿಳೆಯನ್ನು  ದಾಖಲಿಸಿಕೊಂಡ ವೈದ್ಯರು ಆರಂಭದಲ್ಲಿ ನಾರ್ಮಲ್ ಡೆಲಿವರಿ ಮಾಡುವುದಾಗಿ ಹೇಳಿದ್ದರಂತೆ. ಸ್ಪಲ್ಪ ಹೊತ್ತಿನ ನಂತರ ಸೀಜೆರಿಯನ್ ಅಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ.

ಸಿಜೇರಿಯನ್ ಚಿಕಿತ್ಸೆ ಮುಗಿದ ಒಂದು ಗಂಟೆಯಲ್ಲಿ ಮಹಿಳೆ ರಕ್ತವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷವೇ ಗರ್ಭಿಣಿ ಸಾವಿಗೆ ಕಾರಣ ಎಂದು ಮೃತ ಮಹಿಳೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮಗುವಿನೊಂದಿಗೆ ಸುಂದರ ಸಂಸಾರದ ಕನಸು ಕಂಡಿದ್ದ ಮಹಿಳೆ ಇಹಲೋಕ ತ್ಯಜಿಸಿದ್ದು, ಜೇನುಕಲ್ ಆಸ್ಪತ್ರೆಯ ವೈದ್ಯರ ಎಡವಟ್ಟು ಎದ್ದು ಕಾಣುತ್ತಿದೆ, ಕೂಡಲೇ ಸಾವಿಗೆ ಕಾರಣರಾದ ವೈದ್ಯರನ್ನ ಬಂಧಿಸಬೇಕೆಂದು ಒತ್ತಾಯಿಸಿ ಜೇನುಕಲ್ ನರ್ಸೀಂಗ್ ಹೋಂ ಮುಂಭಾಗ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಮಮತಾಳ ಪತಿ ಚೇತನ್ ಪಟೇಲ್ ಶನಿವಾರ ಸಂಜೆ ಹೆರಿಗೆ ಮಾಡಿಸಿದ ವೈದ್ಯರು ನನ್ನ ಕೈಗೆ ಮಗುವನ್ನು ಕೊಟ್ಟು ಕೆಳಗೆ ಹೋಗಿ ಎಂದು ಕಳುಹಿಸಿದರು. ಈ ಸಂದರ್ಭದಲ್ಲಿ ನನ್ನ ಪತ್ನಿಯ ಬಾಯಿಂದ ರಕ್ತಬರುತ್ತಿತ್ತು. ನನ್ನ ಪತ್ನಿ ಡಾಕ್ಟರ್‌ರನ್ನು ಕರೆಯಿರಿ ಎಂದು ತಿಳಿಸದ ನಂತರ ನನ್ನ ಪತ್ನಿ ಹಲ್ಲುಕಚ್ಚಿಕೊಂಡಿದ್ದನ್ನು ತೆರೆಸಲು ವೈದ್ಯರಿಗೆ ಆಗಲೇ ಇಲ್ಲ, ಹೆರಿಗೆ ಮಾಡಿಸುವ ಮುನ್ನ ಅನಸ್ತೇಷಿಯಾ ಕೊಟ್ಟಿರುತ್ತಾರೆ, ಇದರಿಂದ ಕೆಲವು ಗಂಟೆಗಳ ವರೆಗೂ ಮಂಪರಿನಲ್ಲಿ ಇರುತ್ತಾರೆ. ಆದರೆ ಹೆರಿಗೆಯಾದ ನಂತರ ನನ್ನ ಪತ್ನಿ ಹೇಗೆ ಮಾತನಾಡಿದಳು, ಶಸ್ತ್ರಕಿತ್ಸೆಯ ವೇಳೆ ರೋಗಿಗೆ ಆಸ್ಪತ್ರೆಗಳ ಸಮವಸ್ತ್ರ ಗೌನ್ ನೀಡದೇ ಹೇಗೆ ಹೆರಿಗೆ ಮಾಡಿಸಿದರು. ಮತ್ತು ಯಾರಿಗೂ ತಿಳಿಯದೇ ಪೊಲೀಸರನ್ನು ಕರೆಸಿ ರಾತ್ರೋರಾತ್ರಿ ಸರಕಾರಿ ಆಸ್ಪತ್ರೆಗೆ ಶವವನ್ನು ಸಾಗಿಸುವ ಉದ್ದೇಶವೇನು ಎಂಬುದು ತಿಳಿಯುತ್ತಿಲ್ಲವೆಂದು ಮೃತ ಮಹಿಳೆಯ ಪತಿ ಚೇತನ್ ಪಾಟೀಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: 2 ಡೋಸ್ ಲಸಿಕೆ ಬಳಿಕವೂ ಕೊರೊನಾ ಬಂದಿದ್ದಕ್ಕೆ ಅಪಾರ್ಟ್​​​ಮೆಂಟ್​​ ನಿವಾಸಿಗಳ ಬೇಸರ.. ಡೆಲ್ಟಾ+ ಶಂಕೆ!

ಏನೇ ಆಗಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ ಸಾವು ಕುಟುಂಬದವರಿಗೆ ಅತೀವ ನೋವುಂಟು ಮಾಡಿದೆ. ಈ ಆಸ್ಪತ್ರೆಯಿಂದ ನಮಗಾದ ಸ್ಥಿತಿ ಬೇರೆಯವರಿಗೆ ಆಗದರಿಲಿ ಎಂಬುದು ಮಹಿಳೆಯ ಕುಟುಂಬಸ್ಥರ ಕಣ್ಣೀರಿಡುತ್ತಿದ್ದಾರೆ.
Published by:Kavya V
First published: