• Home
  • »
  • News
  • »
  • district
  • »
  • Black Fungus: ಹೊಸಾ ಬಗೆಯ ಸೋಂಕು ಸ್ಕಿನ್ ಫಂಗಸ್ ಪತ್ತೆ, ಚಿತ್ರದುರ್ಗದಲ್ಲಿ ರಾಜ್ಯದ ಮೊದಲ ರೋಗಿ !

Black Fungus: ಹೊಸಾ ಬಗೆಯ ಸೋಂಕು ಸ್ಕಿನ್ ಫಂಗಸ್ ಪತ್ತೆ, ಚಿತ್ರದುರ್ಗದಲ್ಲಿ ರಾಜ್ಯದ ಮೊದಲ ರೋಗಿ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಲಾಕ್ ಫಂಗಸ್ ವೈಟ್ ಫಂಗಸ್ ಅನ್ನೋ ರೋಗದ ಹೆಸರು ಕೇಳಿಯೇ ಭಯಬೀತರಾಗಿದ್ದ ಜನರು, ಇದೀಗ ಸ್ಕಿನ್ ಫಂಗಸ್ ಅನ್ನೋ ಹೊಸ ರೀತಿ ಖಾಯಿಲೆ ಪತ್ತೆ ಆಗಿರದನ್ನ ಕೇಳಿ ಆತಂಕಗೊಂಡಿದ್ದಾರೆ.

  • Share this:

ಚಿತ್ರದುರ್ಗ : ಕೊವೀಡ್ ನಡುವೆಯೇ ಬ್ಲಾಕ್ ಫಂಗಸ್  ದೇಶದ ಜನ್ರನ್ನ ಬೆಚ್ಚಿ ಬೀಳಿಸುತ್ತಿದೆ. ಈ ನಡುವೆಯೇ ಕೋಟೆನಾಡು ಚಿತ್ರದುರ್ಗದಲ್ಲಿ ಮತ್ತೊಂದು ಹೊಸ ಮಾದರಿ  ಫಂಗಸ್ ಪತ್ತೆಯಾಗಿದ್ದು ರಾಜ್ಯದ ಜನರಿಗೆ ಶಾಕ್ ನೀಡಿದೆ. ಅಲ್ದೆ ಇದು ದೇಶದಲ್ಲೇ ಮೊದಲ ಬಾರಿ ಕೊವೀಡ್ ಗುಣಮುಖ ರೋಗಿಯಲ್ಲಿ ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಕೊವೀಡ್ ಎರಡನೇ ಅಲೆಗೆ ಈಡೀ ಭಾರತ ದೇಶವೆ ಬೆಚ್ಚಿ ಬಿದ್ದಿದೆ. ಅಲ್ಲದೆ ಈ ನಡುವೆ ಬ್ಲಾಕ್ ಅಂಡ್ ವೈಟ್ ಫಂಗಸ್, ಸೇರಿದಂತೆ ಹೊಸ ರೋಗಗಳು ಕೂಡಾ ರಾಜ್ಯಕ್ಕೆ ಲಗ್ಗೆ ಇಟ್ಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.


ಈ ನಡುವೆಯೇ ಕೋಟೆನಾಡು ಚಿತ್ರದುರ್ಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸ್ಕಿನ್ ಫಂಗಸ್ ಪತ್ತೆಯಾಗಿದ್ದು, ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿದೆ. ಚಿತ್ರದುರ್ಗದ ನಿವಾಸಿ 55 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿತ್ತು.ಈತ ಕೊವೀಡ್ ನಿಂದ ಗುಣಮುಖ ಆಗಿದ್ದು ಇದೀಗ, ಈ ಹೊಸ ಮಾದರಿಯ ರೋಗ ಲಕ್ಷಣಗಳು ಪತ್ತೆಯಾಗಿದೆ.ಇದ್ದಕ್ಕಿದ್ದಂತೆ ಕಿವಿಯ ಮೇಲ್ಬಾಗದಲ್ಲಿ ಚರ್ಮದ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ಸ್ಕಿನ್ ಮ್ಯೂಕರ್ ಮೈಕೋಸಿಸ್ ಹಾವಳಿಗೆ ರೋಗಿ ಹೈರಾಣಾಗಿದ್ದಾರೆ. ಸದ್ಯ  ಚಿತ್ರದುರ್ಗ ನಗರದ   ಕರ್ನಾಟಕ ENT ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ.


ಇದನ್ನೂ ಓದಿ: Black Fungus: ಕೋಳಿಯಿಂದ ಬ್ಲಾಕ್​ ಫಂಗಸ್ ಹರಡುತ್ತದಂತೆ ! ನಿಜವಾ? ಸತ್ಯ ಇಲ್ಲಿದೆ !


ಅಲ್ಲದೆ ಆಸ್ಪತ್ರೆಯ ವೈದ್ಯ ENT ತಜ್ಞ ಡಾ. ಪ್ರಹ್ಲಾದ್ ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಶ್ಚರ್ಯ ಅಂದ್ರೆ ಭಾರತದಲ್ಲೇ ಮೊದಲ ಬಾರಿಗೆ ಸ್ಕಿನ್ ಬ್ಲಾಕ್ ಫಂಗಸ್ ಪತ್ತೆ ಮಾಡಿದ್ದಾರೆ. ಇನ್ನೂ ಲ್ಯಾಬ್ ನಲ್ಲಿ ಸ್ಕಿನ್ ಫಂಗಸ್ ದೃಢ ಪಟ್ಟಿದ್ದು, ಇದೀಗ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಲು ವೈಧ್ಯರು ಮುಂದಾಗಿದ್ದಾರೆ. ಇನ್ನೂ ಮೊದಲ ಹಂತದಲ್ಲಿ‌ ಸ್ಕಿನ್ ಬ್ಲಾಕ್ ಫಂಗಸ್ ಗೆ ತುತ್ತಾಗಿರುವ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದು, ಚಿತ್ರದುರ್ಗ ಜಿಲ್ಲಾಡಳಿತ ವ್ಯಕ್ತಿಯ ಎಲ್ಲಾ ಖರ್ಚು ವೆಚ್ಚಗಳನ್ನ ಭರಿಸುತ್ತಿದೆ‌. ಅಲ್ದೆ ಇದೇ ಹೊಸ ಮಾದರಿಯ ಫಂಗಸ್ ಇದೀಗ ಪತ್ತೆಯಾಗಿದ್ದು, ವೈಧ್ಯರನ್ನು ತಲ್ಲಣಗೊಳಿಸಿದೆ. ಇನ್ನೂ ಮೊದಲ ಹಂತದಲ್ಲಿ ಸ್ಕಿನ್ ಫಂಗಸ್ ದೃಢ ಪಟ್ಟಿದ್ದು, ಎರಡನೇ ಹಂತದ ಚಿಕಿತ್ಸೆಗೆ ವೈಧ್ಯರು ಸಜ್ಜಾಗಿದ್ದು, ಚರ್ಮ ಕಸಿ ಮಾಡಲಾಗುತ್ತದೆ ಎಂದು ಕೂಡಾ ವೈಧ್ಯರು ತಿಳಿಸಿದ್ದಾರೆ.


ಬ್ಲಾಕ್ ಫಂಗಸ್ ವೈಟ್ ಫಂಗಸ್ ಅನ್ನೋ ರೋಗದ ಹೆಸರು ಕೇಳಿಯೇ ಭಯಬೀತರಾಗಿದ್ದ ಜನರು, ಇದೀಗ ಸ್ಕಿನ್ ಫಂಗಸ್ ಅನ್ನೋ ಹೊಸ ರೀತಿ ಖಾಯಿಲೆ ಪತ್ತೆ ಆಗಿರದನ್ನ ಕೇಳಿ ಆತಂಕ ಪಡುವಂತಾಗಿದೆ. ಇಲ್ಲಿಯವರೆಗೆ ಮೂಗು, ಕಣ್ಣು, ಶ್ವಾಸಕೋಶದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿತ್ತು. ಆದ್ರೆ ಇದೀಗ   ಮಾಸ್ಕ್  ಗಾಯದ ರೂಪದಲ್ಲಿ,ಸ್ಕಿನ್ ಬ್ಲಾಕ್ ಫಂಗಸ್ ಪತ್ತೆಯಾಗಿದ್ದು, ದೇಶದ ಜನ್ರನ್ನ ಬೆಚ್ಚಿ ಬೀಳಿಸಿದೆ.ಈ ಫಂಗಸ್ ನ ವೈಧ್ಯರು ಕೂಡಾ ಸವಾಲಾಗಿ ಸ್ವೀಕರಿಸಿದ್ದು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸುವ ಭರವಸೆ ನೀಡಿದ್ದಾರೆ.

Published by:Soumya KN
First published: