ಮೀಸಲಾತಿಯಲ್ಲಿ ಅನ್ಯಾಯ ; ಅಡ್ವೊಕೇಟ್ ಜನರಲ್‌ ರಾಜೀನಾಮೆಗೆ ಮಾಜಿ ಸಚಿವ ರೇವಣ್ಣ ಒತ್ತಾಯ

ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತಂದಿದ್ದಾರೆ. ಆಡಳಿತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಹೆಚ್.ಡಿ. ರೇವಣ್ಣ

ಹೆಚ್.ಡಿ. ರೇವಣ್ಣ

  • Share this:
ಹಾಸನ(ಅಕ್ಟೋಬರ್​. 09): ಹಾಸನ‌ ಹಾಗೂ ಅರಸೀಕೆರೆ ನಗರಸಭೆಗಳ ಮೀಸಲಾತಿ ರಾತ್ರೋರಾತ್ರಿ ಬದಲಾವಣೆ ಮಾಡುವ ಮೂಲಕ ತಮ್ಮ ಸ್ಥಾನಕ್ಕೆ ಚ್ಯುತಿ ತಂದಿರುವ ಅಡ್ವೊಕೇಟ್ ಜನರಲ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಸತ್ಯಾಸತ್ಯತೆ ಮನವರಿಕೆ ಮಾಡಬೇಕಾದ ಅಡ್ವೊಕೇಟ್ ಜನರಲ್ ನ್ಯಾಯಯುತವಾಗಿ ನಡೆದುಕೊಂಡಿಲ್ಲ. ಇವರಿಂದ ಬೇಕಾಬಿಟ್ಟಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ರಾಜ್ಯದ ನಗರಸಭೆ ಹಾಗೂ ಪುರಸಭೆಗಳ ಮೀಸಲಾತಿ ಕುರಿತಂತೆ ಎರಡು ವರ್ಷದಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಅಲ್ಲದೆ ಹಾಸನ ನಗರಸಭೆ ಕುರಿತಂತೆ ಕಳೆದ ಮಾರ್ಚ್ 11ರಂದು ಹೈಕೋರ್ಟ್​​ನ ಲ್ಲಿ ಪ್ರಶ್ನಿಸಲಾಗಿದೆ. ಇವೆಲ್ಲದರ ನಡುವೆ ರಾಜ್ಯ ಸರ್ಕಾರದ ಪರ ವಕಾಲತ್ತು ವಹಿಸುವ ಅಡ್ವೊಕೇಟ್ ಜನರಲ್ ಏಕಾಏಕಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯಕ್ಕೆ ಧಕ್ಕೆ :

ಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಸಿಎಂ ಯಡಿಯೂರಪ್ಪ ಅವರು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತಂದಿದ್ದಾರೆ. ಆಡಳಿತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದ ರೇವಣ್ಣ,‌ ಮೀಸಲಾತಿಯಲ್ಲಿ ಆಗಿರುವಂತಹ ಅನ್ಯಾಯದ ವಿರುದ್ಧ ಹಾಸನ ನಗರಸಭೆ ಜೆಡಿಎಸ್ ಸದಸ್ಯರೆಲ್ಲ ನ್ಯಾಯಾಲಯದ ಮೊರೆ ಹೋಗಲಿದ್ದಾರೆ. ಅರಸೀಕೆರೆ ನಗರಸಭೆಯಲ್ಲೂ ಮೀಸಲಾತಿಯಲ್ಲಿ ಗೊಂದಲವಾಗಿದೆ ಅವರು ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು .

ಎರಡು ಪಕ್ಷದಿಂದ ಕೀಳು ರಾಜಕೀಯ :

ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಮುಗಿಸಲು ಹೊರಟಿವೆ. ಆದ್ದರಿಂದ ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚುನಾವಣಾಪೂರ್ವ ಮೀಸಲಾತಿಯನ್ನು ಪ್ರಕಟಿಸಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಗೊಂದಲಗಳು ಮರುಕಳಿಸುತ್ತಿವೆ ಎಂದು ದೂರಿದರು .

ವರ್ಗಾವಣೆ ದಂಧೆ :

ರಾಜ್ಯದಲ್ಲಿ ವರ್ಗಾವಣೆ ದಂಧೆ ವಿಪರೀತವಾಗಿದ್ದು ಓರ್ವ ಅಧಿಕಾರಿ ವರ್ಗಾವಣೆಗೆ 60 ಲಕ್ಷದಿಂದ ಒಂದು ಕೋಟಿ ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲೆಯ ಶಾಸಕರು ಸಿಎಂ ಯಡಿಯೂರಪ್ಪ ಅವರಿಗೆ ಗಮನಕ್ಕೆ ತಂದಿದ್ದು, ಅದಕ್ಕೆ ಯಾವ ರೀತಿ ಮುಂದಿನ ದಿನಗಳಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಶಾಲೆಗಳನ್ನು ತೆರೆಯುವ ಧಾವಂತ ಸರ್ಕಾರಕ್ಕಾಗಲಿ, ಶಿಕ್ಷಣ ಇಲಾಖೆಗಾಗಲಿ ಇಲ್ಲ; ಸಚಿವ ಸುರೇಶ್ ಕುಮಾರ್

ನಗರಸಭೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದರಲ್ಲಿ ನನಗೆ ಹಕ್ಕಿದೆ. ನಾನು ಈ ಜಿಲ್ಲೆಯನ್ನು ಎಂಟು ವರ್ಷಗಳ ಕಾಲ ಉಸ್ತುವಾರಿ ವಹಿಸಿಕೊಂಡಿದ್ದೆ ಇಲ್ಲಿ ಅನ್ಯಾಯ ವಾಗುತ್ತಿರುವುದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದ ಶಾಸಕ ಪ್ರಿತಮ್​​ ಗೌಡ ಅವರಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿರುಗೇಟು ನೀಡಿದರು.

ಅಲ್ಲದೆ ಗೊಮ್ಮಟೇಶ್ವರ ಮೂರ್ತಿ ಕೆತ್ತನೆಯ ಬಗ್ಗೆ ಮಾತನಾಡಿರುವ ಶಾಸಕರು ಮಸ್ತಕಾಭಿಷೇಕದ ಅವಧಿಯಲ್ಲಿ ಬಂದಂತಹ ಅನುದಾನದಲ್ಲಿ ಹಾಸನ ಬೆಂಗಳೂರು ಚತುಷ್ಪತ ರಸ್ತೆ ನಿರ್ಮಾಣವಾಗಿದ್ದು ಮರೆಯಬಾರದು ಎಂದರು.
Published by:G Hareeshkumar
First published: