Yuvaratna: ನಟ ಪುನೀತ್ ನೋಡೋಕೆ ಬಂದ್ರು, ಕೋವಿಡ್ ಮರೆತು ಮೊಬೈಲ್ ನಲ್ಲಿ ಶೂಟ್ ಮಾಡಲು ನಿಂತ್ರು...!

ಕೋವಿಡ್ ಹಾಟ್ ಸ್ಪಾಟ್ ಎನಿಸಿಕೊಂಡ ಕಲಬುರ್ಗಿ ಯಲ್ಲಿಯೂ ಇದೆ ಕಥೆಯಾಗಿದೆ. ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಪುನೀತ್​ರನ್ನು ನೋಡಲು ಮುಗಿಬಿದ್ದಿರುವ ಅಭಿಮಾನಿಗಳು.

ಪುನೀತ್​ರನ್ನು ನೋಡಲು ಮುಗಿಬಿದ್ದಿರುವ ಅಭಿಮಾನಿಗಳು.

  • Share this:
ಹುಬ್ಬಳ್ಳಿ; ನಟ ಪುನೀತ್ ರಾಜ್​ ಕುಮಾರ್ ರನ್ನ ನೋಡೋಕೆ ಬಂದ್ರು, ಕೋವಿಡ್ 2 ನೇ ಅಲೆ ಹೆಚ್ಚಾಗುತ್ತಿದೆ ಅನ್ನೋದನ್ನೂ ಲೆಕ್ಕಿಸದೆ ಮೈ ಮರೆತು ನಿಂತ್ರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದ, ನೂಕು ನುಗ್ಗಲಿನಲ್ಲಿ ನಿಂತ್ರೂ. ಅಲ್ಲದೆ, ಅಭಿಮಾನಿಗಳು ಮೊಬೈಲ್ ಗಳಲ್ಲಿ ವೀಡಿಯೋ ದೃಶ್ಯೀಕರಣದಲ್ಲೂ ತೊಡಗಿದರು. ಇದು ಹುಬ್ಬಳ್ಳಿಯಲ್ಲಿ ಕಂಡುಬಂದ ದೃಶ್ಯ. ಯುವರತ್ನ ಚಿತ್ರ ಪ್ರಚಾರದ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಗೆ ಆಗಮಿಸಿದ ಪುನೀತ್ ರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಪುನೀತ್ ಬರಿತ್ತಾರೆಂದು ತಿಳಿದು ಮದ್ಯಾಹ್ನ ಮುರು ಗಂಟೆಯಿಂದಲೇ ಜನ ಗೋಕುಲ್ ರಸ್ತೆಯಲ್ಲಿ ಜಮಾಯಿಸಿದ್ದರಿಂದ ರಸ್ತೆ ಜಾಮ್ ಆಗುವಂತಾಯಿತು. ಬರುತ್ತಿದ್ದಂತೆಯೇ ಪುಷ್ಪ ವೃಷ್ಟಿ ಮಾಡಿ, ಪುನಿತ್ ಗೆ ಬೃಹತ್ ಗಾತ್ರದ ಸೇಬು ಹಣ್ಣಿನ ಹಾರ ಹಾಕಲಾಯಿತು. ಕೊರೋನಾ ವ್ಯಾಪಕಗೊಂಡಿದ್ರೂ ಜನ ಮಾತ್ರ ಡೋಂಟ್ ಕೇರ್ ಎಂದರು.

ರಾಜ್ಯದ ವಿವಿಧೆಡೆ ಕೊರೋನಾ 2 ನೇ ಅಲೆ ವ್ಯಾಪಕಗೊಳ್ಳುತ್ತಿರುವಾಗಲೇ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ ಪುನಿತ್ ನೋಡಲು ಜನ ನೂಕು ನುಗ್ಗಲು ನಡೆಸಿದರು. ಬಂದವರ ಪೈಕಿ ಬಹುತೇಕರು ಮೊಬೈಲ್ ಹಿಡಿದು ವೀಡಿಯೋ ತೆಗೆಯುವಲ್ಲಿ ತೊಡಗಿಕೊಂಡರು. ಪುನೀತ್ ಪರವಾಗಿ ಘೋಷಣೆ ಕೂಗಿ ಜಯ ಘೋಷ ಹಾಕಿದರು.

ಈ ವೇಳೆ ಮಾತನಾಡಿದ ಅಪ್ಪು, ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಅಪ್ಪನ ಕಾಲದಿಂದಲೂ ಜನ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡ್ತಿದಾರೆ. ಯುವರತ್ನ ಚಿತ್ರದ ಹೆಚ್ಚಿನ ಅವಧಿಯ ಚಿತ್ರೀಕರಣ ಉತ್ತರ ಕರ್ನಾಟಕದಲ್ಲಾಗಿದೆ. ಹುಬ್ಬಳಿ, ಧಾರವಾಡ ದ ಹತ್ತಾರು ಕಲಾವಿದರು ನಟಿಸಿದ್ದಾರೆ. ಈ ಭಾಗದ ಜನರ ಆಶೀರ್ವಾದ ಯುವರತ್ನ ಚತ್ರದ ಮೇಲೆ ಆಗಬೇಕೆಂದರು.

ಜನರ ಉತ್ಸಾಹ ನೋಡಿದ ಪುನೀತ್, ಜನಸ್ತೋಮದೊಂದಿಗೆ ಸೆಲ್ಫೀ ತೆಗೆದುಕೊಂಡರು. ಯಾಕ್ ಹುಡುಗ ಮೈಯಾಗ್ ಹೆಂಗೈತಿ.. ಹಾಗೂ ಯುವರತ್ನ ಚಿತ್ರದ ದೇಶಕ್ಕೆ ಯೋಧ.. ಹಾಡಿನ ಕೆಲ ಸಾಲು ಹಾಡಿ ರಂಜಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪುನಿತ್, "ಯುವರತ್ನ ಸಿನೆಮಾಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ತುಂಬಾ ಅಭಿಮಾನ ತೋರುತ್ತಿದ್ದಾರೆ. ಚಿತ್ರದ ಕುರಿತು ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರದಲ್ಲಿ ಏನೆಲ್ಲ ಸಂದೇಶ ಇದೆ ಅನ್ನೋದು ಚಿತ್ರ ನೋಡಿ ತಿಳಿದುಕೊಳ್ಳಬೇಕು. ಅಭಿಮಾನಿಗಳ ಈ ಅಭಿಮಾನಕ್ಕೆ ನಾನು ಎಂದಿಗೂ ಚಿರಋಣಿ" ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರ ಅಭಿವೃದ್ಧಿಯನ್ನು ಬದಿಗಿಟ್ಟು ಜನರಿಗೆ ಧರ್ಮದ ಅಫೀಮನ್ನು ತುಂಬುತ್ತಿದೆ; ರಾಕೇಶ್ ಟಿಕಾಯತ್ ಆರೋಪ

ಕಲಬುರ್ಗಿಯಲ್ಲಿಯೂ ಇದೇ ಕಥೆ;

ಕೋವಿಡ್ ಹಾಟ್ ಸ್ಪಾಟ್ ಎನಿಸಿಕೊಂಡ ಕಲಬುರ್ಗಿ ಯಲ್ಲಿಯೂ ಇದೆ ಕಥೆಯಾಗಿದೆ. ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೊರೋನಾ ಕಾರ್ಮೋಡದ ನಡುವೆಯೇ ಭೇಟಿನಗರದಲ್ಲಿ ರೋಡ್ ಶೋ ನಡೆಸಿದ ಪುನೀತ್ ಮೇಲೆ ಗುಲಾಬಿ ಹೂ ಎರಚಿ ಸ್ವಾಗತ ಕೋರಿದರು. ಪುನೀತ್ ರಾಜಕುಮಾರ್ ನೋಡಲು ಜನ ಮಗಿಬಿದ್ದರು. ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೆ  ಅಭಿಮಾನಿಗಳು ಮುಗಿಬಿದ್ದರು.

ನಗರದ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ತಾನಕ್ಕೆ ಭೇಟಿ ಕೊಟ್ಟ ಪುನೀತ್, ಆಶೀರ್ವಾದ ಪಡೆದರು. ಸೇಡಂ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ, ಜಿ.ಪಂ. ಮಾಜಿ ಸದಸ್ಯ ನಿತಿನ್ ಗುತ್ತೇದಾರ ಪುನಿತ್ ರಾಜಕುಮಾರ್ ಗೆ ಸಾಥ್ ನೀಡಿದರು. ಯುವರತ್ನ ಚಿತ್ರ ಯಶಸ್ವಿಗೊಳಿಸುವಂತೆ ಪುನಿತ್ ಕರೆ ನೀಡಿದರು. ಈ ವೇಳೆ ಪುನಿತ್ ಪರ ಘೋಷಣೆ ಕೂಗುತ್ತಾ, ಮೈಮರೆತ ಅಭಿಮಾನಿಗಳು. ಕಲಬುರ್ಗಿ ಕೋವಿಡ್ ಹಾಟ್ ಸ್ಪಾಟ್ ಎನಿಸಿಕೊಂಡಿದ್ದರೂ ಅಭಿಮಾನಿಗಳು ಡೋಂಟ್ ಕೇರ್ ಎಂದರೆ, ಪೊಲೀಸರು ಅಸಹಾಯಕರಾಗಿ ನಿಂತಿದ್ದರು.
Published by:MAshok Kumar
First published: