HOME » NEWS » District » ACCUSED WHO MADE BOMBING THREATENING FOR MONEY IS GET ARRESTED IN RAYACHUR SBR MAK

ರಾಯಚೂರು: ಹಣಕ್ಕಾಗಿ ಬಾಂಬ್ ಹಾಕಿ ಸಾಯಿಸುವ ಬೆದರಿಕೆ, ಆರೋಪಿ ಬಂಧನ!

ಮೊಬೈಲ್ ನಲ್ಲಿ ಮ್ಯಾಜಿಕ್ ಆಪ್ ಬಳಸಿ ಅವರಿಗೆ ಫೋನು ಮಾಡಿ ನನಗೆ 10 ಲಕ್ಷ ರೂಪಾಯಿ ನೀಡಬೇಕು, ಇಲ್ಲದಿದ್ದರೆ ನಿಮ್ಮ ಮನೆಗೆ ಬಾಂಬ್ ಇಟ್ಟು ಉಡಾಯಿಸಿ ಬಿಡುತ್ತೇನೆ ಎಂದು ಆರೋಪಿ ಬೆದರಿಸಿದ್ದಾನೆ.

news18-kannada
Updated:March 2, 2021, 6:57 PM IST
ರಾಯಚೂರು: ಹಣಕ್ಕಾಗಿ ಬಾಂಬ್ ಹಾಕಿ ಸಾಯಿಸುವ ಬೆದರಿಕೆ, ಆರೋಪಿ ಬಂಧನ!
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು: ಹಣ ಏನೆಲ್ಲ ಮಾಡಿಸುತ್ತೊ  ನೋಡಿ, ಹಣಕ್ಕೆ ಪರಿಚಿತರಿಗೆ ಅಪರಿಚಿತನಂತೆ ಮೊಬೈಲ್ ನಲ್ಲಿ ಬೆದರಿಕೆ ಹಾಕಿ ಹಣ ಕೀಳಲು ನೋಡಿದ. ಕೊನೆಗೆ ತನ್ನ ಪ್ಲಾನ್ ಪ್ಲಾಪ್ ಆಗಿದ್ದರಿಂದ ಪೊಲೀಸರ ಕೈಗೆ ಸಿಕ್ಕಿಕೊಂಡ. ಈ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ. ಸಿರವಾರ ಪಟ್ಟಣದ ದೇವದುರ್ಗಾ ರಸ್ತೆಯಲ್ಲಿರುವ ಅಮರೇಶಪ್ಪ ಅಚ್ಚಾ ಎಂಬುವವರು ಕಿರಾಣಿ ಅಂಗಡಿ ಇದೆ. ಈ ಅಂಗಡಿಯು ದೊಡ್ಡ ಮನೆತನ. ಒಂದಿಷ್ಟು ಅನುಕೂಲಸ್ಥರು. ಈ ಕುಟುಂಬದವರಿಗೆ ಬೆದರಿಕೆ ಹಾಕಿದರೆ ಹಣ ನೀಡುತ್ತಾರೆ ಎಂಬ ಆಸೆ ಹುಟ್ಟಿಕೊಂಡಿದೆ. ಯುವಕ ಆಗಾಗ ಅಂಗಡಿಗೆ ಹೋಗುತ್ತಿದ್ದ. ಅಲ್ಲಿ ಅಂಗಡಿಯಲ್ಲಿ ಕಿರಾಣಿ ಖರೀದಿಸುತ್ತಿದ್ದ. ತನಗೆ ವ್ಯಾಪಾರದಲ್ಲಿ ಮೋಸ ಮಾಡುತ್ತಿದ್ದಾರೆ. ಈ ಮೋಸದಿಂದ ಹಣ ಗಳಿಸುತ್ತಿರುವದರಿಂದ ಹಣ ಬಿಚ್ಚಿಸಬೇಕೆಂಬ ಆಸೆ ಉಂಟಾಗಿದೆ. ಈಗ ಏನಾದರೂ ಅವರಿಂದ 10 ಲಕ್ಷ ರೂಪಾಯಿ ಬಿಚ್ಚಿಸಬೇಕೆಂದು ಆಸೆಯಿಂದ ಮೊಬೈಲ್ ನಲ್ಲಿ ತಂತ್ರಜ್ಞಾನ ಬಳಸಿಕೊಂಡ. ಮೊಬೈಲ್ ನಲ್ಲಿಯ ಧ್ವನಿ ಬದಲಾಯಿಸಿ ಹಣ ಕೇಳಿದ್ದಾನೆ.

ಮೊಬೈಲ್ ನಲ್ಲಿ ಮ್ಯಾಜಿಕ್ ಆಪ್ ಬಳಸಿ ಅವರಿಗೆ ಫೋನು ಮಾಡಿ ನನಗೆ 10 ಲಕ್ಷ ರೂಪಾಯಿ ನೀಡಬೇಕು, ಇಲ್ಲದಿದ್ದರೆ ನಿಮ್ಮ ಮನೆಗೆ ಬಾಂಬ್ ಇಟ್ಟು ಉಡಾಯಿಸಿ ಬಿಡುತ್ತೇನೆ ಎಂದು ಆರೋಪಿ ಬೆದರಿಸಿದ್ದಾನೆ. ಈ ಘಟನೆ ಫೆಬ್ರುವರಿ 22 ರಂದು ನಡೆದಿದೆ. ಕರೆ ಮಾಡಿದಾಗ ಅಚ್ಚಾ ಕುಟುಂಬದವರು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಆರೋಪಿ ಆಗಾಗ ಫೋನು ಮಾಡಿದ್ದಾನೆ, ಮೆಸೆಜ್ ಮಾಡಿದ್ದಾನೆ, ಅಂದುಕೊಂಡಂತೆ ಮಂಗಳವಾರದ ಸಂಜೆಯ ವೇಳೆ ಮನೆಯ ಮುಂದೆ ಪಟಾಕಿ ಸಿಡಿಸಿದ್ದಾನೆ.

ಈ ಶಬ್ದವನ್ನು ಕೇಳಿದವರು ಸ್ವಲ್ಪ ಗಾಭರಿಯಾಗಿದ್ದಾರೆ,  ಯಾರೋ ಏನೋ ಮಾಡುತ್ತಿದ್ದಾರೆ ಎಂಬ ಭಯ ಹುಟ್ಟಿಕೊಂಡಿದೆ. ಮೆಸೆಜ್ ಮಾಡಿದ ಫೋನಿಗೆ ಮೆಸೆಜ್ ಕಳುಹಿಸಿದರೆ ಅದಕ್ಕೆ ರಿಪ್ಲೈ ಮಾಡುತ್ತಿದ್ದರು. ಫೋನು ಮಾಡಿದರೆ ತೆಲಂಗಾಣದ ರಾಜ್ಯದವರು ಎಂಬಂತೆ ತೆಲುಗಿನಲ್ಲಿ ಮಾತನಾಡಿದ್ದಾರೆ. ಇದರಿಂದ ಈ ಕುಟುಂಬಕ್ಕೆ ಆತಂಕ ಉಂಟಾಗಿದೆ. ಆಗ ದಿಕ್ಕು ಕಾಣದಂತೆ ಅನಿವಾರ್ಯವಾಗಿ ಸಿರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ಕ್ರೈಂ ರೀತಿಯಲ್ಲಿ ಮೋಸ ಮಾಡಿ ಹಣ ಮಾಡಲು ಹೊರಟಿದ್ದಾನೆ. ಯಾರೊ ಅಪರಿಚಿತ ನಮಗೆ ಹಣಕ್ಕಾಗಿ ಬ್ಲಾಕ್ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: Devendra Fadnavis: ಮೃತ ಮಹಿಳೆಯ ಮಾನಹಾನಿ ಪ್ರಕರಣ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ವಿರುದ್ಧ ಕೇಸ್

ಈ ಸಂದರ್ಭದಲ್ಲಿ ತಮ್ಮ ಮನೆಯ ಹತ್ತಿರ ತಿರುಗಾಡುವ ವ್ಯಕ್ತಿಗಳ ಚಲನವಲನವು ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನು ನೀಡಿದ್ದರು. ಈ ದೂರಿನ ನಂತರವು ಹಣಕ್ಕಾಗಿ ಪೀಡಿಸಿದ್ದು ಗುರುವಾರ ಮದ್ಯ ರಾತ್ರಿಯ ವೇಳೆ ಒಂದು ಸ್ಥಳಕ್ಕೆ ಬರಲು ತಿಳಿಸಿದ್ದಾರೆ. ಆದರೆ ಅಲ್ಲಿಂದ ತಪ್ಪಿಸಿಕೊಂಡಿದ್ದ, ಆದರೆ ಗಬ್ಬೂರು ಬಳಿಯಲ್ಲಿದ್ದ ಸ್ಥಳೀಯ ಯುವಕನ ಸಹಾಯದಿಂದ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ.

Youtube Video

ಪೊಲೀಸರಿಗೆ ಸಿಕ್ಕ ಯುವಕ ಸಿರವಾರ ಪಕ್ಕದ ದೇವದುರ್ಗಾ ತಾಲೂಕಿನ ನಾಗಡದಿನ್ನಿಯವನಾಗಿದ್ದು, ತನಗೆ ಅಂಗಡಿಯವರು ಮೋಸ ಮಾಡಿದ್ದಾರೆ. ಅದಕ್ಕಾಗಿ ಅವರಿಂದ ಹಣ ಪೀಕಲು ಮೊಬೈಲ್ ನಲ್ಲಿಯ ತಂತ್ರಜ್ಞಾನ ಬಳಸಿಕೊಂಡು ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಿರವಾರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇಂದಿನ ತಂತ್ರಜ್ಞಾನ ಗಳು ಯುವಕರಿಗೆ ಏನೆಲ್ಲ ಮಾಡಲು ಪ್ರಚೋದನೆ ಮಾಡುತ್ತವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಹಣಕ್ಕಾಗಿ ಬೇಡಿಕೆ ಸಲ್ಲಿಸುವವರ ಮೇಲೆ ನಿಗಾ ವಹಿಸಬೇಕಾಗಿದೆ.
Published by: MAshok Kumar
First published: March 2, 2021, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories