ಕೋಲಾರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ದಿಢೀರನೆ ಭೇಟಿ ನೀಡಿದ ಸಚಿವ ಸಿಸಿ ಪಾಟೀಲ್

ಒಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಲ್ಲಿ ಗಣಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಕೆಲ ಲೋಪದೋಷಗಳನ್ನು ಹುಡುಕಿ ದಂಡ ವಿಧಿಸಲು ಗಣಿ ಇಲಾಖೆಯ ಸಚಿವರೇ ಬರಬೇಕಾಗಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ದ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿದೆ.

ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಸಿಸಿ ಪಾಟೀಲ್.

ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಚಿವ ಸಿಸಿ ಪಾಟೀಲ್.

  • Share this:
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ, ಗಣಿ ಇಲಾಖೆ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಶಾಸಕ ಕೆವೈ ನಂಜೇಗೌಡ ಒಡೆತನದ ನಂಜುಂಡೇಶ್ವರ ಕ್ರಷರ್ ಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದ  ಸಚಿವರಿಗೆ ಸಂಸದ ಎಸ್ ಮುನಿಸ್ವಾಮಿ, ಗಣಿ ಇಲಾಖೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಗಣಿ ಇಲಾಖೆಗೆ ಕಟ್ಟಬೇಕಿದ್ದ ರಾಜಧನವನ್ನ ವಂಚನೆ ಮಾಡಿರುವ ಆರೋಪವನ್ನ‌ ಟೇಕಲ್‌ ಗ್ರಾಮದಲ್ಲಿರೊ ಕ್ರಷರ್ ಗಳು ಎದುರಿಸುತ್ತಿದ್ದು. ಈಗಾಗಲೇ ಹಲವರು ದಂಡ ಕಟ್ಟಿ ಕ್ರಷರ್ ಗಳನ್ನ ಪುನರ್‌ ಆರಂಭಿಸಿದ್ದಾರೆ,  ಇನ್ನು ಟೇಕಲ್ ಹೋಬಳಿಯ ಹರದಾಕೊತ್ತೂರು ಗ್ರಾಮದ ಶಾಸಕ ನಂಜೇಗೌಡ ಒಡೆತನದ ನಂಜುಂಡೇಶ್ವರ ಕ್ರಷರ್ ಗೆ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಅಕ್ರಮ ಕಲ್ಲು ಗಣಿಗಾರಿಕೆ ದಢೀರ್ ಭೇಟಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವರು:

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಂತರ, ಕೋಲಾರ ತಾಲೂಕಿನ ಬೆಟ್ಟಹೊಸಪುರ ಹಾಗೂ ಕೆ ಬಿ ಹೊಸಹಳ್ಳಿ ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಸಚಿವರು ದಿಢೀರನೇ ಭೇಟಿ ನೀಡಿದರು, ಬೆಟ್ಟಹೊಸಪುರ ಗ್ರಾಮದ ಆರ್ ಕೆ ಕ್ರಷರ್ ಗೆ ಅಧಿಕಾರಿಗಳ ಸಮೇತ ಭೇಟಿ ನೀಡಿದ ಸಚಿವರು, ಯಾವುದೇ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ನೂರು ಅಡಿಗು ಹೆಚ್ಚು ಆಳದಲ್ಲಿ,  ಗಣಿಗಾರಿಕೆ ನಡೆಸ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು, ಕೂಡಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ಶಾಲಾ- ಕಾಲೇಜುಗಳ ಪುನರಾರಂಭಕ್ಕೆ ಧಾರವಾಡದಲ್ಲಿ ಭರ್ಜರಿ ತಯಾರಿ; ಮಕ್ಕಳ ಸ್ವಾಗತಕ್ಕೆ ಶಿಕ್ಷಕ ವೃಂದ ಸಜ್ಜು

ಇನ್ನು ಸಂಜೆ 7 ಗಂಟೆ ವೇಳೆಗೆ ಕೆಬಿ ಹೊಸಹಳ್ಳಿ ಗ್ರಾಮದಲ್ಲಿನ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಕಠಿಣ ಕ್ರಮ ಜರುಗಿಸಿ ಎಂದು ಗಣಿ ಅಧಿಕಾರಿಗಳ ವಿರುದ್ದ ಸಿಡಿಮಿಡಿಕೊಂಡರು‌. ಇದೇ ವೇಳೆ ಸ್ತಳದಲ್ಲಿದ್ದ ಜಿಲ್ಲಾಧಿಕಾರಿ ಸತ್ಯಭಾಮ ರಿಗೆ ಸೂಚಿಸಿದ ಸಚಿವರು, ಕೂಡಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಒಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಲ್ಲಿ ಗಣಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಕೆಲ ಲೋಪದೋಷಗಳನ್ನು ಹುಡುಕಿ ದಂಡ ವಿಧಿಸಲು ಗಣಿ ಇಲಾಖೆಯ ಸಚಿವರೇ ಬರಬೇಕಾಗಿದೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ದ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿದೆ.
Published by:MAshok Kumar
First published: