ಕಲಬುರಗಿ (ಫೆ.23): ರಾಜ್ಯದಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತ ಕಲಬುರಗಿಯ ಬ್ಯಾಂಕ್ ಮ್ಯಾನೇಜರ್ (Bank Manager) ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ ವಿನಾಕಾರಣ ಕಿರುಕುಳ (Harassment) ನೀಡಿ ಕೆಲಸದಿಂದ ತೆಗೆದ ಆರೋಪ ಮಾಡಿದ ವ್ಯಕ್ತಿ, ಕಚೇರಿಯ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಿನಾರಾ ಕ್ಯಾಪಿಟಲ್ನ ಸಹಾಯಕ ವ್ಯವಸ್ಥಾಪಕನಾಗಿದ್ದ ಕೃಷ್ಣಕಾಂತ್ (Krishnakant) ವಿಷ ಸೇವಿಸಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಕೃಷ್ಣಕಾಂತ್ನನ್ನು ಕೆಲಸದಿಂದ ತೆಗೆಯಲಾಗಿತ್ತು. ವಿನಾಕಾರಣ ಬ್ಯಾಂಕ್ ಮ್ಯಾನೇಜರ್ ಕಿರುಕುಳ ನೀಡಿದ್ದಾರೆ. ನನ್ನನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದಿದ್ದಾರೆ ಎಂದು ಕೃಷ್ಣಕಾಂತ್ ಆಕ್ರೋಶ ಹೊರ ಹಾಕಿದ್ರು.
ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಸಾರ್ವಜನಿಕರು
ಕೃಷ್ಣಕಾಂತ್ ಕಿನಾರಾ ಕ್ಯಾಪಿಟಲ್ನ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡ್ತಿದ್ದ. ಕೆಲ ದಿನಗಳ ಹಿಂದೆ ಕೃಷ್ಣಕಾಂತ್ನನ್ನು ಕೆಲಸದಿಂದ ತೆಗೆಯಲಾಗಿತ್ತು. ವಿನಾಕಾರಣ ಬ್ಯಾಂಕ್ ಮ್ಯಾನೇಜರ್ ಕಿರುಕುಳ ನೀಡಿದ್ದಾರೆ. ನನ್ನನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದಿದ್ದಾರೆ ಎಂದು ಕೃಷ್ಣಕಾಂತ್ ಆರೋಪಿದ್ದ. ಇವತ್ತು ಏಕಾಏಕಿ ಕಚೇರಿಗೆ ಬಂದು ಆಫೀಸ್ ಮುಂದೆ ವಿಷ ಸೇವಿಸಿ ಕೃಷ್ಣಕಾಂತ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮಹಾತ್ಮ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bengaluru: ಮಗನ ಗರ್ಲ್ ಫ್ರೆಂಡ್ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?
ಕೌಟುಂಬಿಕ ಕಲಹ, ಭಾವನಿಂದ ಬಾಮೈದನ ಹತ್ಯೆ
ಕೋಲಾರ: ಕೌಟುಂಬಿಕ ಕಲಹ ಹಿನ್ನಲೆ ಭಾವ ಚಾಕುವಿನಿಂದ ಇರಿದು ಭಾಮೈದುನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಫೆ.20ರಂದು ರಾತ್ರಿ ನಡೆದಿದೆ. ಇಲ್ಲಿನ ಗೌತಮ್ ನಗರದ ನಿವಾಸಿಯಾದ ಬಿಜಿಪಿ ಯುವ ಮುಖಂಡ ಬಾಬು, ಪತ್ನಿ ಸುನಿತಾ ಅವರ ಅಣ್ಣ ಸುರೇಶ್ ಗೆ ಚಾಕು ಇರಿದು ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸುರೇಶ್ (36) ಸಾವನ್ನಪ್ಪಿದ್ದಾರೆ. ಮೃತ ಸುರೇಶ್ ತಮ್ಮ ಹರೀಶ್ (33) ಗು ಆರೋಪಿ ಬಾಬು ಚಾಕು ಇರಿದಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಹರೀಶ್ ನನ್ನ ದಾಖಲಿಸಿ ಚಿಕಿತ್ಸೆ ನೀಡಿದ್ರು.
ಪೊಲಿಸ್ ಠಾಣೆ ಎದುರು ಪ್ರತಿಭಟನೆ (Protest) ಮಾಡಿದ ಮೃತನ ತಂದೆ ಆರೋಪಿ ಬಾಬು ತನ್ನ ಪತ್ನಿಯನ್ನು ಹಣ ತರುವಂತೆ ಹೇಳಿ ಮೊನ್ನೆಯಷ್ಟೆ ಗಲಾಟೆ ಮಾಡಿ ತವರು ಮನೆಗೆ ಕಳಿಸಿದ್ದ ಎಂದು ಮಾವ ಪ್ರಕಾಶ್ ತಿಳಿಸಿದ್ದಾರೆ. ಆದರೆ ಪತ್ನಿ ಸುನಿತಾ ಹೆಸರಲ್ಲಿ ಕೆಲ ಬ್ಯಾಂಕ್, ಹಾಗು ಸ್ವ ಸಹಾಯ ಸಂಘಗಳಲ್ಲಿ ಸಾಲ ಪಡೆದಿದ್ದ ಗಂಡ ಬಾಬು, ಸಾಲ ಕಟ್ಟದೆ ಸತಾಯಿಸಿದ್ದಾನೆ. ಹಾಗಾಗಿ ನೀನು ಪಡೆದುಕೊಂಡ ಸಾಲವನ್ನ ನನ್ನ ತಂದೆ ಯಾಕೆ ಕಟ್ಟಬೇಕು ಎಂದು ಸಾಲದ ಹಣವನ್ನ (Money) ವಾಪಾಸ್ ಕಟ್ಟುವಂತೆ ಪತ್ನಿ ಸುನಿತಾ ಪತಿ ಬಾಬು ಅವರಿಗೆ ಹೇಳಿದ್ದಾರೆ.
ಇದನ್ನೂ ಓದಿ: Tamarind Fight: ಅಣ್ಣ-ತಮ್ಮನ ಮಧ್ಯೆ ಹುಳಿ ಹಿಂಡಿದ ಹುಣಸೆ..! ಭಾರೀ ಜಗಳ, ಪರಸ್ಪರ ಹಲ್ಲೆ
ಪತಿಯ ನಿಂದನೆಗೆ ಮನನೊಂದು ಪತ್ನಿ ಆತ್ಮಹತ್ಯೆ
ಬೆಂಗಳೂರು: ನೀನು ಕುರೂಪಿ, ಸುಂದರವಾಗಿಲ್ಲ ಎಂದು ಪದೇ ಪದೇ ಪತಿ ಪತ್ನಿಯನ್ನ ನಿಂದನೆ ಮಾಡಿದ ಕಾರಣ ಮನನೊಂದ ಮಹಿಳೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ಇದೇ ತಿಂಗಳ 18 ರಂದು ಬೆಳಗ್ಗೆ 12.30 ಕ್ಕೆ ಈ ಘಟನೆ ನಡೆದಿದ್ದು, ಅನಿಶಾ (33) ಆತ್ಮಹತ್ಯೆ ಯತ್ನಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಎರಡನೇ ಮದುವೆಯಾಗಿದ್ದ ಅನಿಶಾಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು, ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ರೂ ಗಂಡ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ