ಆರೋಪಿ ತಂದ ಆಪತ್ತು; ಪೊಲೀಸ್ ಠಾಣೆ ಸೀಲ್ ಡೌನ್, ಪಿಎಸ್ಐ ಸೇರಿ 11 ಸಿಬ್ಬಂದಿ ಕ್ವಾರಂಟೈನ್

ಬೆಳಗಾವಿ ಬಿಮ್ಸ್ ಆಸ್ಪತ್ರೆಯ 29 ವರ್ಷದ ನರ್ಸ್ ಗೆ ಇಂದು ಕೊರೋನಾ ಪಾಸಿಟಿವ್ ಇರೋದು ಖಚಿತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರ್ಸ್ ಕೊರೋನಾ ಸೋಂಕಿತರ ವಾರ್ಡ್​ನಲ್ಲಿ ಕೆಲಸ ಮಾಡಿದ್ದರು. ಸದಾಶಿವನಗರದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ವಾಸವಿದ್ದರು. ಇದೀಗ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ.

news18-kannada
Updated:July 3, 2020, 10:29 PM IST
ಆರೋಪಿ ತಂದ ಆಪತ್ತು; ಪೊಲೀಸ್ ಠಾಣೆ ಸೀಲ್ ಡೌನ್, ಪಿಎಸ್ಐ ಸೇರಿ 11 ಸಿಬ್ಬಂದಿ ಕ್ವಾರಂಟೈನ್
ಸಾಂದರ್ಭಿಕ ಚಿತ್ರ.
  • Share this:
ಬೆಳಗಾವಿ; ಕೊರೋನಾ ವೈರಸ್ ಮಹಾಮಾರಿಯ ಅಬ್ಬರ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಬೆಳಗಾವಿ ನಗರ ಹೊರತಾಗಿಲ್ಲ. ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ಇರೋದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ, ಪಿಎಸ್ಐ ಸೇರಿ 11 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

ಜೂನ್ ತಿಂಗಳ 27ರಂದು ವಿಜಯನಗರದ ಬಳಿಯ ಸಮೃದ್ಧಿ ಜ್ಯೂವೆಲರಿ ಅಂಗಡಿಗೆ ಚಿನ್ನಾಭರಣ ಖರೀದಿಗೆ ವ್ಯಕ್ತಿಯೊಬ್ಬ ಬಂದಿದ್ದನು. ಚಿನ್ನಾಭರಣ ತೋರಿಸಲು ಅಂಗಡಿ ಮಾಲೀಕನಿಗೆ ಹೇಳಿದ್ದಾನೆ. ಅದರಂತೆ ನಾಲ್ಕೈದು ಆಭರಣವನ್ನು ನೋಡಿದ ನಂತರ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಹೆದರಿಸಿ, ಆಭರಣ ಕಳ್ಳತನ ಮಾಡಿದ್ದಾನೆ.

ಈ ಬಗ್ಗೆ ಅಂಗಡಿ ಮಾಲೀಕರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಸಚಿನ್ ಬಾಂದೇವಾಡೆಕರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆತನಿಗೆ ಕೊರೋನಾ ಟೆಸ್ಟ್ ಗೆ ಒಳಪಡಿಸಿ, ಜೈಲಿಗೆ ಕಳುಹಿಸಿದ್ದರು. ಆರೋಪಿಯ ವರದಿ ಇಂದು ಬಂದಿದ್ದು, ಕೊರೋನಾ ಪಾಸಿಟಿವ್ ಇರೋದು ಖಚಿತವಾಗಿದ್ದು, ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಆತಂಕ ಹುಟ್ಟಿಸಿದೆ. ಠಾಣೆಯ ಓರ್ವ  ಪಿಎಸ್ಐ ಸೇರಿ 11 ಪೊಲೀಸ್ ಸಿಬ್ಬಂದಿಯನ್ನು ಇಂದು ಕ್ವಾರಂಟೈನ್ ಒಳಪಡಿಸಲಾಗಿದೆ. ಜತೆಗೆ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಸ್ಯಾನಿಟೈಜೆಷನ್ ಮಾಡಲಾಗಿದೆ. ಪೊಲೀಸ್ ಪೇದೆ ಕುಟುಂಬಸ್ಥರಿಗೂ ಇದು ಆತಂಕ ತಂದಿದೆ.

ಬಿಮ್ಸ್ ನರ್ಸ್ ಗೆ ಸೋಂಕು..!

ಬೆಳಗಾವಿ ಬಿಮ್ಸ್ ಆಸ್ಪತ್ರೆಯ 29 ವರ್ಷದ ನರ್ಸ್ ಗೆ ಇಂದು ಕೊರೋನಾ ಪಾಸಿಟಿವ್ ಇರೋದು ಖಚಿತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರ್ಸ್ ಕೊರೋನಾ ಸೋಂಕಿತರ ವಾರ್ಡ್​ನಲ್ಲಿ ಕೆಲಸ ಮಾಡಿದ್ದರು. ಸದಾಶಿವನಗರದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ವಾಸವಿದ್ದರು. ಇದೀಗ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್ ವಾಸವಿದ್ದ ಮನೆಯ ಸುತ್ತಮುತ್ತ ಕಂಟೈನಮೆಂಟ್ ಝೋನ್ ಮಾಡಲಾಗಿದೆ.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಚಿಕಿತ್ಸೆ: 73 ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಬಿಮ್ಸ್ ಕೊರೋನಾ ವಾರ್ಡ್​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೊದಲು ಖಾಸಗಿ ಹೋಟೆಲ್​ನಲ್ಲಿ ಇರಲು ಸರ್ಕಾರ ವ್ಯವಸ್ಥೆ ಮಾಡಿತ್ತು. ಬಳಿಕ ಮನೆಯಿಂದಲೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದೀಗ ಅವರಿಗೆ ಸೋಂಕು ತಗುಲಿರುವುದರಿಂದ ಅವರ ಕುಟುಂಬಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Published by: HR Ramesh
First published: July 3, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading