HOME » NEWS » District » ACCUSED ARRESTED WHO MURDER FOR GOLD IN YADAGIRI RHHSN NMPG

ಚಿನ್ನದ ಆಸೆಗೆ ಕೊಲೆ ಮಾಡಿದ ಆರೋಪಿ ಜೈಲು ಪಾಲು; ಆರೋಪಿತನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಸಿಪಿಐ ದೌಲತ್ ಕುರಿ, ಪಿಎಸ್ ಐ ಬಾಪುಗೌಡ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡ ಆರೋಪಿಗಳ ಜಾಡು ಹಿಡಿದು ಬಂಧಿಸಿದೆ. ಪ್ರಮುಖ ಆರೋಪಿ ಕಿಶೋರ್, ಅಜಿತ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

news18-kannada
Updated:January 15, 2021, 6:32 AM IST
ಚಿನ್ನದ ಆಸೆಗೆ ಕೊಲೆ ಮಾಡಿದ ಆರೋಪಿ ಜೈಲು ಪಾಲು; ಆರೋಪಿತನಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಬಂಧಿತನಿಂದ ವಶಕ್ಕೆ ಪಡೆದ ಚಿನ್ನಾಭರಣಗಳು.
  • Share this:
ಯಾದಗಿರಿ: ಉದ್ಯಮಿ ಜಗದೀಶ್ ಪುತ್ರನನ್ನು ಕೊಲೆ ಮಾಡಿ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಕೊಲೆ ಪಾತಕಿ ಕಿಶೋರ್ ನನ್ನು ಅಂತು ಹುಣಸಗಿ ಪೊಲೀಸರು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣ ಸಮೀಪ ನಿನ್ನೆ ಮಧ್ಯಾಹ್ನ ಉದ್ಯಮಿ ಜಗದೀಶ್ ಅವರ ಪುತ್ರ ನರೇಂದ್ರನನ್ನು ಅವರದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣ ಸಹಿತ ಪರಾರಿಯಾಗಿದ್ದನು. ಈ ಘಟನೆಯಿಂದ ಹುಣಸಗಿ ಪಟ್ಟಣದ ಜನ ಬೆಚ್ಚಿ ಬಿದ್ದಿದ್ದರು.

ಉದ್ಯಮಿ ಜಗದೀಶ್ ಕಿಶೋರ್ ನನ್ನು ತನ್ನ ಮಗನಂತೆ ನೋಡಿಕೊಂಡಿದ್ದರು. ಚಿನ್ನಾಭರಣ ವ್ಯಾಪಾರ ವಹಿವಾಟು ಸಹಿತ  ಕಿಶೋರ್ ನಿಗೆ ಜವಾಬ್ದಾರಿ ನೀಡಿದ್ದರು. ಕಿಶೋರ್ ನ ಮೇಲೆ ಅತಿ ನಂಬಿಕೆ ಕೂಡ ಜಗದೀಶ್ ಹೊಂದಿದ್ದರು. ಆದರೆ,ಕಿಶೋರ್ ನಂಬಿಕೆ ದ್ರೋಹ ಎಸಗಿದ್ದಾನೆ. ಕಷ್ಟ ಕಾಲದಲ್ಲಿ ಉದ್ಯೋಗ ನೀಡಿದ ಹಾಗೂ ಅನ್ನ ಹಾಕಿ ಕಷ್ಟಕ್ಕೆ ಸ್ಪಂದಿಸಿದ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಕೊಲೆ ಮಾಡಿದ್ದಾನೆ. ನಿನ್ನೆ ಕಿಶೋರ್ ಜಗದೀಶ್ ಅವರ ಮನೆಗೆ ತೆರಳಿ ಮನೆಯಲ್ಲಿರುವ ಜಗದೀಶ್ ಅವರ ಪುತ್ರ ನರೇಂದ್ರನಿಗೆ ಚಾಕು ಇರಿದು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಗಳ ಸರ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಗ್ರಾಮದ ಹೊರಭಾಗದಲ್ಲಿ ಅಡಗಿ ಕುಳಿತಿದ್ದನು. ಬಳಿಕ, ದುಷ್ಕರ್ಮಿಗಳು ನರೇಂದ್ರನನ್ನು ಕೊಲೆ ಮಾಡಿ ನನ್ನನ್ನು ಕಿಡ್ನಾಪ್ ಮಾಡಿದ್ದಾರೆ. ನನ್ನನ್ನು ರಕ್ಷಣೆ ಮಾಡಿ ಎಂದು ಜಗದೀಶ್ ಅವರಿಗೆ ಆತನೇ ಪೋನ್ ಮಾಡಿ ಹೇಳಿದ್ದಾನೆ. ತಕ್ಷಣವೇ ಆತನ ಮಾತು ನಂಬಿ ಮನೆಗೆ ತೆರಳಿದಾಗ ಪುತ್ರ ರಕ್ತದ ಮಗುವಿನಲ್ಲಿ ಬಿದ್ದಿದ್ದ. ಆತನನ್ನು ನೋಡಿ ಜಗದೀಶ್ ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಕಿಶೋರ್ ನನ್ನು  ಯಾರೋ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ. ಮೊದಲು ಆತನನ್ನು ರಕ್ಷಣೆ ಮಾಡಿ ಎಂದು ಹುಣಸಗಿ ಪೊಲೀಸರಿಗೆ ಜಗದೀಶ್ ಮಾಹಿತಿ ನೀಡಿದ್ದಾರೆ.  ಆದರೆ, ಆತನೆ ಕೊಲೆ ಮಾಡಿರುವುದು ಗೊತ್ತಿರಲಿಲ್ಲ.

ಇದನ್ನು ಓದಿ: ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ಹಸಿರು ಮಾರ್ಗದ ಮೆಟ್ರೋ ರೈಲಿಗೆ ಸಿಎಂ ಬಿಎಸ್​ವೈ ಚಾಲನೆ

ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಸಿಪಿಐ ದೌಲತ್ ಕುರಿ, ಪಿಎಸ್ ಐ ಬಾಪುಗೌಡ ಪಾಟೀಲ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡ ಆರೋಪಿಗಳ ಜಾಡು ಹಿಡಿದು ಬಂಧಿಸಿದೆ. ಪ್ರಮುಖ ಆರೋಪಿ ಕಿಶೋರ್, ಅಜಿತ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಉದ್ಯಮಿ ಜಗದೀಶನ  ಪುತ್ರ ನರೇಂದ್ರನನ್ನು ಕೊಲೆ ಮಾಡಿ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿ ಕಿಶೋರ್ ಹಾಗೂ ಆರೋಪಿ ಪರಾರಿಯಾಗಲು ಸಹಕಾರ ನೀಡಿದ ಇನ್ನೊರ್ವ ಆರೋಪಿ ಅಜಿತ್ ನನ್ನು ಬಂಧಿಸಲಾಗಿದೆ. ಆರೋಪಿತರಿಂದ 1.5 ಕೆಜಿ ಚಿನ್ನ ಹಾಗೂ 10 ಕೆಜಿ ಬೆಳ್ಳಿಯ ಆಭರಣಗಳು ಸೇರಿ ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Published by: HR Ramesh
First published: January 15, 2021, 6:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories