Koppala Accident: ಟ್ರ್ಯಾಕ್ಟರ್ ಪಲ್ಟಿ ನಾಲ್ವರ ಸಾವು, 4 ಮಂದಿ ಸ್ಥಿತಿ ಗಂಭೀರ, ನಿಶ್ಚಿತಾರ್ಥಕ್ಕೆ ಹೊರಟವರು ಮಸಣ ಸೇರಿದ್ರು

ಓವರ್​ ಲೋಡ್​ನಿಂದ ಅಪಘಾತ ಸಂಭವಿಸಿದೆ. ಕನಕಗಿರಿಗೆ ನಿಶ್ಚಿತಾರ್ಥಕ್ಕೆಂದು ತೆರಳುತ್ತಿದ್ದರು. ಟ್ರ್ಯಾಕ್ಟರ್​ನಲ್ಲಿ 25ಕ್ಕೂ ಹೆಚ್ಚು ಜನರನ್ನು ತುಂಬಿದ್ದಾರೆ.

ಟ್ರ್ಯಾಕ್ಟರ್​ ಪಲ್ಟಿ

ಟ್ರ್ಯಾಕ್ಟರ್​ ಪಲ್ಟಿ

  • Share this:
ಕೊಪ್ಪಳ:  ಕೊಪ್ಪಳ (Koppala) ಜಿಲ್ಲೆ ಕನಕಗಿರಿ (Kanakagiri) ತಾಲೂಕಿನ ನವಲಿಯ ರೈಸ್​ ಟೆಕ್ನಾಲಜಿ ಪಾರ್ಕ್​ ಬಳಿ ಭೀಕರ ಅಪಘಾತ (Accident) ಸಂಭವಿಸಿದೆ. ಸುಮಾರು 25 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ (Tractor) ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಚಿಕಿತ್ಸೆ ಫಲಿಸದೆ ಕಾರಟಗಿ ಆಸ್ಪತ್ರೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ನಿಶ್ಚಿತಾರ್ಥಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದ್ಯಾವಮ್ಮ (60), ಅಂಬಮ್ಮ (45), ಶೇಶಪ್ಪ ಬಂಡಿ (40), ಯಮನಪ್ಪ ಸಿಂಧನೂರು (35) ಎಂದು ಗುರುತಿಸಲಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಕಾರಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸ್ ತಂಡ ಭೇಟಿ ನೀಡಿದೆ.

ನಿಶ್ಚಿತಾರ್ಥಕ್ಕೆ ಹೊರಟಿದ್ದವರು ಸೇರಿದ್ದು ಮಸಣಕ್ಕೆ

ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ‌ಪಾರ್ಕ್ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕಾರಟಗಿ ಪಟ್ಟಣದ 18ನೇ ವಾರ್ಡ್ ನ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿಯ ಸಿರವಾರ ಕಡೆಗೆ ಟ್ರ್ಯಾಕ್ಟರ್ ಹೊರಟಿತ್ತು.

ಓವರ್​ ಲೋಡ್​ ಅಪಘಾತಕ್ಕೆ ಕಾರಣ

ಓವರ್​ ಲೋಡ್​ನಿಂದ ಅಪಘಾತ ಸಂಭವಿಸಿದೆ. ಕನಕಗಿರಿಗೆ ನಿಶ್ಚಿತಾರ್ಥಕ್ಕೆಂದು  ಇವರೆಲ್ಲಾ ತೆರಳುತ್ತಿದ್ದರು. ಟ್ರ್ಯಾಕ್ಟರ್​ನಲ್ಲಿ 25ಕ್ಕೂ ಹೆಚ್ಚು ಜನರನ್ನು ತುಂಬಿದ್ದಾರೆ. 10-15 ಮಂದಿ ಕುಳಿತುಕೊಳ್ಳುವ ಜಾಗದಲ್ಲಿ 25 ಮಂದಿಯನ್ನು ತುಂಬಿದ್ರೆ ಏನ್​ ಆಗುತ್ತೆ ಹೇಳಿ. ಕಾರಟಗಿ ಪಟ್ಟಣದಿಂದ ಸ್ವಲ್ಪ ದೂರ ತೆರಳುತ್ತಿದ್ದಂತೆ ಟ್ರ್ಯಾಕ್ಟರ್​ ಪಲ್ಟಿಯಾಗಿದೆ.

ಶುಭ ಸಮಾರಂಭ ತೆರಳಿದ್ದವರ ಮನೆಯಲ್ಲಿ ಸಾವಿನ ದುಃಖ ಮಡುಗಟ್ಟಿದೆ. ವಾಹನಗಳಲ್ಲಿ ಜನರ ಓವರ್​ ಲೋಡ್​ ಮಾಡಿದ್ದರಿಂದ ರಾಜ್ಯದಲ್ಲಿ ಹಲವು ಕಡೆ ಅಪಘಾತಗಳು ಸಂಭವಿಸಿದೆ. ಎಷ್ಟೆ ಹೇಳಿದ್ರು ಜನರಿಗೆ ಬುದ್ದಿ ಬರಲ್ಲ ನೋಡಿ. ಆಟೋ, ಟ್ರ್ಯಾಕ್ಟರ್​ಗಳಲ್ಲಿ ಜನರನ್ನು ತುಂಬಿ ಜೀವ ತೆಗೆಯುತ್ತಿದ್ದಾರೆ.

ಇದನ್ನೂ ಓದಿ: Crime News: ಗರ್ಭಿಣಿ ಪತ್ನಿಗೆ ಬೆಂಕಿ ಹಚ್ಚಿದ, ಮಗುವಿಗೂ ಕಚ್ಚಿದ! ಇವನೇನು ಪತಿಯೋ, ರಾಕ್ಷಸನೋ?

ರಾಮನಗರ ಆಸ್ಪತ್ರೆಯ ಬಾತ್ ರೂಮ್​ನಲ್ಲಿ ಭ್ರೂಣ ಪತ್ತೆ

ರಾಮನಗರ : ಜಿಲ್ಲೆಯ ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತು ಶಿಶು (Fetus) ಸಾವನ್ನಪ್ಪಿರುವ (Death) ಘಟನೆ ನಡೆದಿದೆ. ಆಸ್ಪತ್ರೆಯ ಬಾತ್ ರೂಮ್ ನಲ್ಲಿ ಎಸೆದು ಹೋಗಿರುವ ಕಿರಾತಕರು ಎರಡು ದಿನಗಳ ಹಿಂದೆ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಹೆಣ್ಣು ಮಗು ಇರಬಹುದು (Babygirl) ಎಂಬ ಶಂಕೆವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಮಕ್ಕಳ ಅಭಿವೃದ್ಧಿ ಅಧಿಕಾರಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. FSL ವರದಿಗಾಗಿ ಕಳುಹಿಸಲು ನಿರ್ಧಾರ ಮಾಡಿದ್ದು ,ಮರಣೋತ್ತರ ಪರೀಕ್ಷೆ ನಂತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಇನ್ನು ಆಸ್ಪತ್ರೆಯಲ್ಲಿ ಯಾವುದೇ ಗರ್ಭಪಾತದ ಕೇಸ್ ಇಲ್ಲ ಎಂದು ಮಾಹಿತಿ ಸಿಕ್ಕಿದೆ. ಹೊರಗಿನಿಂದ ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಆಸ್ಪತ್ರೆಯ ಕೆಲ ಸಿಬ್ಬಂದಿ ವರ್ಗ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತಯ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Gadag: ಹಾಡಹಗಲೇ ಪತ್ನಿ ಮೇಲೆ ಡೆಡ್ಲಿ ಅಟ್ಯಾಕ್, 23 ಬಾರಿ ಮನಸೋ ಇಚ್ಚೆ ಮಚ್ಚಿನಿಂದ ಇರಿದು ಹಲ್ಲೆ

ಕೊರೋನಾ ಸಂದರ್ಭದಲ್ಲಿ ಸಿಲಿಂಡರ್ ಕಳ್ಳತನ ನಡೆದಿತ್ತು‌ :

ವಿಶ್ವದಲ್ಲೇ ಕೊರೋನಾ ಅಬ್ಬರ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದರು.‌ ಆದರೆ ಇದೇ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಕಳ್ಳತನ ಸಹ ನಡೆಯಿತು. ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿ, ಒಂದಿಬ್ಬರನ್ನ ಬಂಧಿಸಿ ವಿಚಾರಣೆ ಸಹ ನಡೆಸಿದ್ದರು.

ರೋಗಿಗಳಿಗೆ ಚಿಕಿತ್ಸೆ ನೀಡದೇ ವೈದ್ಯರ ಕಳ್ಳಾಟ, ನ್ಯೂಸ್ 18 ವರದಿ :

ಇನ್ನು ಕಳೆದ ಎರಡ್ಮೂರು ತಿಂಗಳುಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಸಾಲುಸಾಲು ರೋಗಿಗಳು ಚಿಕಿತ್ಸೆಗೆ ಬಂದಿದ್ದರೂ ಸಹ, ಅವರನ್ನ ನೋಡಲು ಒಬ್ಬ ವೈದ್ಯರೂ ಇಲ್ಲದೇ ಕಳ್ಳಾಟ ಆಡುತ್ತಿದ್ದ ವಿಚಾರವಾಗಿ ನ್ಯೂಸ್ 18 ಕನ್ನಡ ಸವಿಸ್ತಾರವಾಗಿ ವರದಿ ಪ್ರಸಾರ ಮಾಡಿತ್ತು. ಸ್ವತಃ ಆರೋಗ್ಯ ಸಚಿವರಾದ ಸುಧಾಕರ್ ರವರ ಕಚೇರಿಯಿಂದಲೇ ವಿಜಯನರಸಿಂಹಗೆ ಕರೆ ಬಂದು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆಬಂದಿತ್ತು.
Published by:Pavana HS
First published: