HOME » NEWS » District » ACCIDENT IN MYSORE RACE COMPETITION A YOUNG MAN IN DEATH BED PMTV MAK

ಮೈಸೂರಿನಲ್ಲಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅವಘಡ: ಆಟ ನೋಡಲು ಹೋಗಿ ಸಾವಿನ ಕದ ತಟ್ಟಿದ ಯುವಕ

ಸದ್ಯ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ‌ ನಡೆಸುತ್ತಿದ್ದಾನೆ. ಇನ್ನು ಈ ಘಟನೆಗೆ ಎತ್ತಿನ ಗಾಡಿ ಸ್ಪರ್ಧೆ ಆಯೋಜಕರ ನಿರ್ಲಕ್ಷ್ಯವೆ ಕಾರಣ ಎಂದು ಗಾಯಾಳು ರವಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

news18-kannada
Updated:March 29, 2021, 8:32 PM IST
ಮೈಸೂರಿನಲ್ಲಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅವಘಡ: ಆಟ ನೋಡಲು ಹೋಗಿ ಸಾವಿನ ಕದ ತಟ್ಟಿದ ಯುವಕ
ಜೀವನ್ಮರಣದ ನಡುವೆ ಹೋರಾಡುತ್ತಿರುವ ಯುವಕ.
  • Share this:
ಮೈಸೂರು: ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅನಾಹುತ ಸಂಭವಿಸಿ, ಪ್ರೇಕ್ಷಕರ ಮೇಲೆ ಎತ್ತಿನಗಾಡಿ ಹರಿದ ಪರಿಣಾಮ ಇಬ್ಬರು ಯುವಕರಿಗೆ ಗಂಭೀರ ಗಾಯವಾದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಪಟ್ಟಣದ ಹೊರವಲಯದ ಮೈದಾನದಲ್ಲಿ ನಡೆಯುತ್ತಿದ್ದ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿಯೊಂದು ಏಕಾಏಕಿ ಜನರ ಮಧ್ಯೆಯೆ ಚಲಿಸಿಕೊಂಡು ಹೋಗಿದೆ. ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರೂ ಇದೀಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಜಗತ್ತು ಆಧುನಿಕರಣವಾಗ್ತಿದಂತೆ ನಮ್ಮ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗ್ತಾ ಇದೆ. ಇರದಲ್ಲೊಂದು ಗ್ರಾಮೀಣ ಕ್ರೀಡೆಯಾದ ಜೋಡೆತ್ತಿನ ಸ್ಪರ್ಧೆ ಜನರನ್ನು ಮನಸೂರೆಗೊಳಿಸಿತು. ಆದ್ರೆ ಮೈಸೂರಿನಲ್ಲಿ ನಡೆದಿರುವ ಜೊಡೆತ್ತಿನ ಸ್ಪರ್ಧೆ ವೇಳೆ ಅವಘಡ ನಡೆದು ವ್ಯಕ್ತಿಯೊಬ್ಬ ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾನೆ. ಹೌದು ಇಂದು ಮೈಸೂರು ಜಿಲ್ಲೆ ಟಿ.ನರಸೀಪುರದ ಚೌಡೇಶ್ವರಿ ಯುವಕರ ಬಳಗದವರು ಕಳೆದ ನಾಲ್ಕು ವರ್ಷದಿಂದ ಈ ಜೊಡೆತ್ತು ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡು ಬರ್ತಿದ್ದಾರೆ. ಅದೇ ರೀತಿ ಈ ವರ್ಷವು ಜೊಡೆತ್ತಿನ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದರು.

ಸ್ಪರ್ಧೆಗೆ ದೂರದ ಹುಬ್ಬಳ್ಳಿ, ಚಿಕ್ಕಮಗಳೂರು,ಮಂಡ್ಯ ಚಾಮರಾಜನಗರ, ಹಾಸನ  ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 50 ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದವು. ಆದರೆ, ಸ್ಪರ್ಧೆ ವೇಳೆ ಅವಘಡ ನಡೆದಿದ್ದು, ಎತ್ತಿನ ಗಾಡಿ ಯುವಕರ ಮೇಲೆ ನುಗ್ಗಿ ಇಬ್ಬರಿಗೆ ಗಾಯವಾಗಿದೆ.‌ ಅದರಲ್ಲಿ‌ ಮೈಸೂರು ತಾಲೂಕಿನ ಹೊಸಹಳ್ಳಿ ಗ್ರಾಮದ  ರವಿ ಎಂಬ ಯುವಕನ‌ ತಲೆ‌ ಮೇಲೆ ಎತ್ತಿನ ಗಾಡಿ ಹರಿದು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದಾನೆ.

ಸದ್ಯ ಯುವಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ‌ ನಡೆಸುತ್ತಿದ್ದಾನೆ. ಇನ್ನು ಈ ಘಟನೆಗೆ ಎತ್ತಿನ ಗಾಡಿ ಸ್ಪರ್ಧೆ ಆಯೋಜಕರ ನಿರ್ಲಕ್ಷ್ಯವೆ ಕಾರಣ ಎಂದು ಗಾಯಾಳು ರವಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಗಾಯಾಳು ರವಿ ನರಸೀಪುರ ಪಟ್ಟಣದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನಂತೆ. ಮಧ್ಯಾಹ್ನ ಮನೆಗೆ ಹೋಗಬೇಕಾದರೆ ಜನರು ಸೇರಿರುವುದನ್ನು‌ ನೋಡಿ ಸ್ಥಳಕ್ಕೆ ಹೋಗಿದ್ದನಂತೆ. ಈ ವೇಳೆ ಎತ್ತಿನ ಗಾಡಿ ಇವರೆಡೆಗೆ ಬಂದು ಅವಘಡ ನಡೆದಿದೆ. ಸದ್ಯ ಆಯೋಜನಕರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ramesh Jarkiholi CD Case: ಸಿಡಿ ಯುವತಿಗೆ ಮೂರನೇ ಬಾರಿ ನೊಟೀಸ್​ ಜಾರಿ; ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ

ನಾವು ಎಲ್ಲಾ ರೀತಿಯ ಅನುಮತಿ ತೆಗೆದುಕೊಂಡು‌ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದೇವು. ಪೊಲೀಸರು ಅನುಮತಿ‌ ಕೊಟ್ಟಿದ್ದರು, ಆದ್ರೆ ಇಷ್ಟು ದೊಡ್ಡದಾಗಿ ಅವಘಡ ನಡೆದಿರೋದು ತಡವಾಗಿ ಗೊತ್ತಾಯಿತು, ಜನರು ಮೈದಾನದಕ್ಕೆ ನುಗ್ಗಿದ್ದೆ ಅವಘಡಕ್ಕೆ ಕಾರಣ ಅಂತಾರೆ ಕಾರ್ಯಕ್ರಮದ ಆಯೋಜಕರು.

ಒಟ್ಟಾರೆ,ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಇಂತಹ‌ ಕ್ರೀಡೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಆದ್ರೆ ಮುಂಜಾಗ್ರತೆ ಬಗ್ಗೆ ಎಚ್ಚರವಹಿಸದೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿರೋದು ಸುಳ್ಳಲ್ಲ. ಇನ್ನುಮುಂದಾದರು ಇಂತಹ ಕ್ರೀಡೆ ಆಯೋಜನೆ ಮಾಡುವ ಮುನ್ನ ಎಚ್ಚರ ವಹಿಸಬೇಕಿದೆ.
Published by: MAshok Kumar
First published: March 29, 2021, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories