HOME » NEWS » District » ACCIDENT IN CHIKKAMAGALURU TAKES LIFE OF HEAD CONSTABLE WHO WAS PROMOTED AS ASI VCTV SNVS

ಚಿಕ್ಕಮಗಳೂರಿನಲ್ಲಿ ಅಪಘಾತ: ಇಂದು ಎಎಸ್ಐ ಆಗಬೇಕಿದ್ದ ಹೆಡ್ ಕಾನ್ಸ್​ಟೆಬಲ್ ದಾರುಣ ಸಾವು

ಇಂದು ಎಎಸ್ಐ ಆಗಿ ಬಡ್ತಿ ಸ್ವೀಕರಿಸಬೇಕಿದ್ದ ಚಿಕ್ಕಮಗಳೂರಿನ ಹೆಡ್ ಕಾನ್ಸ್ಟೆಬಲ್ ಸಿದ್ದರಾಮಪ್ಪ ಅವರು ನಿನ್ನೆ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಹಿರೇಗೌಜ ಬಳಿ ನಡೆದಿದೆ.

news18-kannada
Updated:December 3, 2020, 8:14 AM IST
ಚಿಕ್ಕಮಗಳೂರಿನಲ್ಲಿ ಅಪಘಾತ: ಇಂದು ಎಎಸ್ಐ ಆಗಬೇಕಿದ್ದ ಹೆಡ್ ಕಾನ್ಸ್​ಟೆಬಲ್ ದಾರುಣ ಸಾವು
ಚಿಕ್ಕಮಗಳೂರಿನಲ್ಲಿ ಮೃತಪಟ್ಟ ಹೆಡ್ ಕಾನ್ಸ್​ಟೆಬಲ್ ಸಿದ್ದರಾಮಪ್ಪ
  • Share this:
ಚಿಕ್ಕಮಗಳೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪೊಲೀಸ್ ಹೆಡ್​ಕಾನ್ಸ್​ಟೆಬಲ್​ವೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ನಿನ್ನೆ ಬುಧವಾರ ರಾತ್ರಿ ಸಂಭವಿಸಿದೆ. 48 ವರ್ಷದ ಸಿದ್ದರಾಮಪ್ಪ ಮೃತ ದುರ್ದೈವಿ. ಇವತ್ತು ಅವರು ಎಎಸ್​ಐ ಆಗಿ ಬಡ್ತಿ ಪಡೆಯಬೇಕಿತ್ತು. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಬಳಿ ಕಾರು-ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೂಲತಃ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು ಇಂದು ಎ.ಎಸ್.ಐ ಆಗಿ ಬಡ್ತಿ ಪಡಿಯುತ್ತಿದ್ದರು. ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಎ.ಎಸ್.ಐ ಸಮವಸ್ತ್ರ ಕೂಡ ಸಿದ್ದ ಮಾಡಿಕೊಂಡಿದ್ದ ಸಿದ್ದರಾಮಪ್ಪ ಕರ್ತವ್ಯ ಮುಗಿಸಿ ಖುಷಿಯಿಂದ ಮನೆಗೆ ಬರುವಾಗ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಇದನ್ನೂ ಓದಿ: ಗ್ರಾಪಂ ಚುನಾವಣೆ ಬಹಿಷ್ಕರಿಸಿ ಬ್ಯಾನರ್ ಹಾಕಿದ ಗ್ರಾಮಸ್ಥರು; ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ

ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಎ.ಎಸ್.ಐ. ಆಗಬೇಕಿದ್ದ ಸಿಬ್ಬಂದಿಯನ್ನ ಕಳೆದುಕೊಂಡ ಇಲಾಖೆಯ ಅವರ ಸಹೋದ್ಯೋಗಿಗಳು ಮರುಗಿದ್ದಾರೆ. 25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಿದ್ದರಾಮಪ್ಪ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದು, ಸರಳ ಸಜ್ಜನ ಪೊಲೀಸ್ ಅಂತಲೂ ಖ್ಯಾತಿ ಹೊಂದಿದ್ದಾರೆ. ಇವರ ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: December 3, 2020, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories