HOME » NEWS » District » ACB TRAP AT A BEO SDA TEACHER BRIBERY IN KALBURGI HK

ಹೆರಿಗೆ ರಜೆ ಪಡೆದ ಶಿಕ್ಷಕಿಯಿಂದಲೇ ಲಂಚ - ಬಿಇಒ ಹಾಗೂ ಎಸ್.ಡಿ.ಎ. ಎಸಿಬಿ ಬಲೆಗೆ

ಎಸ್.ಡಿ.ಎ. ಶಶಿಕಾಂತ್ ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದಿದ್ದಾನೆ. ನಂತರ ಆ ಹಣವನ್ನು ಬಿ ಇ ಒ ಈಶ್ವರಪ್ಪಗೆ ಮುಟ್ಟಿಸಿದ್ದಾನೆ. ಈ ಸಂದರ್ಭದಲ್ಲಿ ಮಿಂಚಿನ ದಾಳಿಸಿ ನಡೆಸಿದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾರೆ

news18-kannada
Updated:June 18, 2020, 3:12 PM IST
ಹೆರಿಗೆ ರಜೆ ಪಡೆದ ಶಿಕ್ಷಕಿಯಿಂದಲೇ ಲಂಚ - ಬಿಇಒ ಹಾಗೂ ಎಸ್.ಡಿ.ಎ. ಎಸಿಬಿ ಬಲೆಗೆ
ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ
  • Share this:
ಕಲಬುರ್ಗಿ(ಜೂ.18): ಹೆರಿಗೆ ರಜೆ ಪಡೆದ ಶಿಕ್ಷಕಿಗೇ ಲಂಚಕ್ಕೆ ಡಿಮ್ಯಾಂಡ್ ಮಾಡಿ, ಶಿಕ್ಷಣ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ದ್ವಿತೀಯ ದರ್ಜೆ ಸಹಾಯ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಲಬುರ್ಗಿಯ ಲಕ್ಷ್ಮಿ ನಾರಾಯಣ ನಗರದಲ್ಲಿ ಘಟನೆ ನಡೆದಿದೆ. ಶಿಕ್ಷಕಿಯೊಬ್ಬರು ಹೆರಿಗೆ ರಜೆ ಮುಗಿಸಿ ವಾಪಸ್ಸಾಗಿದ್ದಾರೆ. ಆದರೆ, ಮರಳಿ ಶಾಲೆಗೆ ಜಾಯಿನ್​​ ಮಾಡಿಕೊಳ್ಳಲು ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಹೀಗೆ ಮರಳಿ ಶಾಲೆಗೆ ಹಾಜರಾಗಲು ಶಿಕ್ಷಕಿಯಿಂದ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಆಳಂದ ಬ್ಲಾಕ್ ಎಜುಕೇಷನ್ ಆಫೀಸರ್ ಈಶ್ವರಪ್ಪ ಹಾಗೂ ದ್ವಿತೀಯ ದರ್ಜೆ ಸಹಾಯ ಶಶಿಕಾಂತ್ ಬಲೆಗೆ ಬಿದ್ದ ಲಂಚಬಾಕರಾಗಿದ್ದಾರೆ.

ಇದನ್ನೂ ಓದಿ : ಗದಗನ ಹಾತಲಗೇರಿಯಲ್ಲಿ ಪ್ರತಿ ಮನೆಗೊಬ್ಬ ಯೋಧ ; ಚೀನಾ ಗಡಿಗೆ ತೆರಳಲು ಕರೆಗಾಗಿ ಕಾಯುತ್ತಿರುವ ಸೈನಿಕರು

ಎಸ್.ಡಿ.ಎ. ಶಶಿಕಾಂತ್ ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದಿದ್ದಾನೆ. ನಂತರ ಆ ಹಣವನ್ನು ಬಿ ಇ ಒ ಈಶ್ವರಪ್ಪಗೆ ಮುಟ್ಟಿಸಿದ್ದಾನೆ. ಈ ಸಂದರ್ಭದಲ್ಲಿ ಮಿಂಚಿನ ದಾಳಿಸಿ ನಡೆಸಿದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾರೆ. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದಾರೆ.

ಕೊರೋನಾದಂತಹ ಸಂದಿಗ್ಧ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಪಡೆದಿದ್ದ ಹೆರಿಗೆ ರಜೆಯ ನಂತರ ಶಾಲೆಗೆ ಜಾಯಿನ್​​ ಮಾಡಿಕೊಳ್ಳಲು ಹಿರಿಯ ಅಧಿಕಾರಿಯೊಬ್ಬರು ಲಂಚಕ್ಕೆ ಕೈಚಾಚಿರುವುದು ಚರ್ಚೆಗೆ ಗ್ರಾಸವಾಗಿದೆ.
First published: June 18, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading