• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್​ ಹಾವಳಿ ತಪ್ಪಿಸಿ - ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್​ ಹಾವಳಿ ತಪ್ಪಿಸಿ - ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

ದಂಧೆ ಕೇವಲ ಸ್ಯಾಂಡಲ್‍ವುಡ್ ಬಾಲಿವುಡ್ ಅಷ್ಟೇ ಸಿಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯನ್ನ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು. ಹಾಗೆಯೇ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್​ ಹಾವಳಿಗೆ ಬ್ರೇಕ್​ ಹಾಕಬೇಕು ಎಂಬುದು ಎಬಿವಿಪಿಯವರ ಒತ್ತಾಯವಾಗಿದೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ(ಸೆ.03): ಶಾಲಾ- ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ತಪ್ಪಿಸಲು ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಇಲ್ಲಿನ ನವನಗರದ ಪೊಲೀಸ್ ಕಮಿಷನರ್ ಕಚೇರಿ ಎದುರು ವಿದ್ಯಾರ್ಥಿ ಪರಿಷತ್ ಕಾರ್ತಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ಮನವಿ ಸ್ವೀಕರಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು. ಆದರೆ, ಮನವಿ ಸ್ವೀಕರಿಸಲು ಅಧಿಕಾರಿಗಳು ಹೊರಗೆ ಬರಲಿಲ್ಲ. ಹೀಗಾಗಿ ಪ್ರತಿಭಟನಾಕಾರರು ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದಲ್ಲೇ ಧರಣಿ ಮಾಡಬೇಕಾಯ್ತು. ಆದ್ದರಿಂದ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕಚೇರಿಯಿಂದ ಹೊರಗೆ ಹೋಗುವಂತೆ ಕೆಲವು ಪೊಲೀಸರು ಪ್ರತಿಭಟನಾಕಾರರಿಗೆ ತಾಕೀತು ಮಾಡಿದರು. ಹಾಗಾಗಿ ಆಯುಕ್ತರ ಕಚೇರಿ ಎದುರು ಹೈಡ್ರಾಮಾ ಸೃಷ್ಟಿಯಾಗಿತ್ತು. ಪೊಲೀಸ್ ಆಯುಕ್ತ ಆರ್‌. ದಿಲೀಪ್ ಅವರು ಕಚೇರಿಯಲ್ಲಿ ಇರಲಿಲ್ಲ‌. ಆದ ಕಾರಣ ಪೊಲೀಸ್ ಕಮಿಷನರ್ ಕುರ್ಚಿಗೆ ಮನವಿ ಪತ್ರ ಅಂಟಿಸಿದ ಪ್ರತಿಭಟನಾಕಾರರು ಸ್ಥಳದಿಂದ ವಾಪಸ್ಸಾದರು.


ಡ್ರಗ್ಸ್ ದಂಧೆ ಟೆರರಿಸಂನ ಒಂದು ಭಾಗ, ಒಂದು ದೇಶವನ್ನ ಹಾಳು ಮಾಡಬೇಕಾದ್ರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದ್ರೆ ಸಾಕು, ಅದೇ ಅವರ ಮುಂದಿನ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ.


ಕೋವಿಡ್‌ ಹೇಗೆ ಜಗತ್ತಿಗೆ ಆವರಿಸಿದೆ ಅದೇ ರೀತಿ ಡ್ರಗ್ಸ್ ಕೂಡ ಗೊತ್ತಿಲ್ಲದೆ ಆವರಿಸಿದೆ. ಯುವಕ,ಯುವತಿಯರು ಅರಿವಿಲ್ಲದೆ ಬಲಿಯಾಗುತ್ತಿದ್ದಾರೆ. ಈ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು‌ ಬರುತ್ತಿದೆ.


ದಂಧೆ ಕೇವಲ ಸ್ಯಾಂಡಲ್‍ವುಡ್ ಬಾಲಿವುಡ್ ಅಷ್ಟೇ ಸಿಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯನ್ನ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು. ಹಾಗೆಯೇ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್​ ಹಾವಳಿಗೆ ಬ್ರೇಕ್​ ಹಾಕಬೇಕು ಎಂಬುದು ಎಬಿವಿಪಿಯವರ ಒತ್ತಾಯವಾಗಿದೆ.


ಇದನ್ನೂ ಓದಿ: DV Sadananda Gowda: ಜನೌಷಧ ಕೇಂದ್ರಗಳಲ್ಲಿ 8 ಹೊಸ ಪೌಷ್ಟಿಕಾಂಶದ ಉತ್ಪನ್ನಗಳ ಬಿಡುಗಡೆ

First published: