AAP Protest - ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಬೆಂಗಳೂರಿನಲ್ಲಿ ಆಪ್ ವಿನೂತನ ಪ್ರತಿಭಟನೆ

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್​​ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ದಿನ ಬಳಕೆಯ ವಸ್ತುಗಳ ಮೇಲೆ ಹಾಗೂ ಅಗತ್ಯ ಸೇವೆಗಳ ಮೇಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷ ವಿನೂತನವಾಗಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

 • Share this:
  ಬೆಂಗಳೂರು: ಮೋದಿ ಸರ್ಕಾರದ ಬಜೆಟ್ ಈಗ ಎಲ್ಲೆಡೆ ಚರ್ಚೆ ಆಗ್ತಿದೆ. ಪರ ವಿರೋಧಗಳು‌ ಕೇಳಿ ಬರ್ತಿದೆ. ಅದರಲ್ಲೂ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಸಿದ್ದಕ್ಕೆ ಎಲ್ಲೆಡೆಯಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮೌರ್ಯ ವೃತ್ತದ ಬಳಿ ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಆಪ್ ಪಕ್ಷದಿಂದ ವಿನೂತನವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್  ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯಿತು.

  ಪ್ರತಿಭಟನೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯ್ತು. ರಸ್ತೆ ಮಧ್ಯೆ ಬನ್, ಜಾಮ್, ಬೇಳೆ,‌ ಅವರೆ, ಮೆಣಸು, ಉದ್ದಿನ‌ ಬೇಳೆ ವಿವಿಧ ಕಾಳು ಉತ್ಪನ್ನಗಳನ್ನಿಟ್ಟು ಆಮ್ ಆದ್ಮಿ ಕಾರ್ಯಕರ್ತರು ಪ್ರೋಟೆಸ್ಟ್  ಮಾಡಿದರು. ಅಲ್ಲದೆ, ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಹೋಗಿರುವ ಹಣಕಾಸು ಸಚಿವೆ ಕರ್ನಾಟಕಕ್ಕೆ ಬಿಡಿಗಾಸು ಕೊಟ್ಟಿಲ್ಲ ಅಂತ ಕೂಗಿದರು. ಕೇಂದ್ರ ಸರ್ಕಾರದ ಈ ಬಜೆಟ್ ಓಎಲ್​ಎಕ್ಸ್ ಎಂದು ಅವರು ವ್ಯಂಗ್ಯವಾಡಿದರು.

  ಇದನ್ನೂ ಓದಿ: ಐಟಿಐ ಪರೀಕ್ಷೆಗಳಲ್ಲಿ ತಾಂತ್ರಿಕ ಸಮಸ್ಯೆ: ಸಹಸ್ರಾರು ವಿದ್ಯಾರ್ಥಿಗಳು ಅತಂತ್ರ

  ಕೊರೋನಾ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಂತೆ ಟ್ಯಾಕ್ಸಿ ಸೇವೆಗಳಿಗೂ ಹೊಡೆತ ಬಿದ್ದಿದೆ. ಆದರೆ ಈ ಬಜೆಟ್ ನಲ್ಲಿ ಟ್ಯಾಕ್ಸಿ ವಲಯಕ್ಕೆ ಸೂಕ್ತ ರೀತಿಯ ಸವಲತ್ತು ನೀಡುವ ಭರವಸೆ ಇತ್ತು.‌ ಆದರೆ ಕಳೆದ ಬಾರಿಯಂತೆ ಈ ಬಾರಿಯ ಬಜೆಟ್ ನಲ್ಲೂ ಕೂಡ ಟ್ಯಾಕ್ಸಿ ವಲಯಕ್ಕೆ ಸಿಕ್ಕಿದ್ದು ಶೂನ್ಯ ಅಂತ ಓಲಾ ಊಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಕಿಡಿ ಕಾರಿದ್ದಾತೆ. ಸೇವೆಗಳ ದರ ಹೆಚ್ಚಿಸುವ ಬಗ್ಗೆ ಹಲವು ಬಾರಿ ಕೋರಿಕೊಳ್ಳಲಾಗಿತ್ತು‌. ಆದರೆ ಕಳೆ ಬಾರಿಯದ್ದೇ ದರವನ್ನು ಮತ್ತೊಮ್ಮೆ ಪ್ರಿಂಟ್ ಮಾಡಿ ಬಜೆಟ್ ಜೊತೆ ಲಗತ್ತಿಸಲಾಗಿದೆ ಅಂತ ಹೇಳಿದರು.

  ಇದನ್ನೂ ಓದಿ: Aero India 2021: ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 3 ದಿನ ಏರ್ ಶೋ; ಏರೋ ಇಂಡಿಯಾಗೆ ರಾಜನಾಥ್ ಸಿಂಗ್ ಚಾಲನೆ

  ಇನ್ನು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳಿಗೂ ಹೇಳಿಕೊಳ್ಳುವ ರೀತಿಯ ಬಹುಮಾನವನ್ನೇನು ಮೋದಿ ಸರ್ಕಾರ ಈ ಬಜೆಟ್ ನಲ್ಲಿ ಕೊಟ್ಟಿಲ್ಲ. ಹೀಗಾಗಿ ಹಲವು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೊರೋನಾ‌ ಸಮಯದಲ್ಲಿ ಕೆಲಸ ಇಲ್ಲದೆ ಪೋಷಕರೆಲ್ಲಾ ಮನೆಯಲ್ಲೇ ಕುಳಿತಿದ್ದರು. ಹೀಗಿರುವಾಗ ಈಗ ಶಾಲೆ ಕಾಲೇಜು ಆರಂಭವಾದ ಬೆನ್ನಲ್ಲೇ ಶಿಕ್ಷಣ ಸಂಸ್ಥೆಗಳು ಫೀಸ್ ಕಟ್ಟಿಸಲು ಮುಗಿಬಿದ್ದಿದೆ. ಆದರೆ ಬಹುಪಾಲು ಪೋಷಕರಿಗೆ ಶುಲ್ಕ ಕಟ್ಟಲು ಕಷ್ಟವಿದೆ. ಇದನ್ನು ಮೋದಿ ಸರ್ಕಾರ ಬಗೆಹರಿಸುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ ಅಂತ ಸಂಶೋಧನಾ ವಿದ್ಯಾರ್ಥಿಯೊಬ್ಬರು ಹೇಳಿದರು. ಕೇಂದ್ರ ಸರ್ಕಾರದ 2021 ಸಾಲಿನ ಈ ಬಜೆಟ್ ವಿರುದ್ಧ ಜನಸಾಮಾನ್ಯರು ಅಸಮಾಧಾನಗೊಂಡಿದ್ದಾರೆ. ಮುಖ್ಯವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ಸೇವೆಗಳ ಬೆಲೆ ಏರಿಕೆ ಮಾಡಿದ್ದು ಈಗ ಜನರಿಗೆ ಕೊರೋನಾ ಗಾಯದ ಮೇಲೆ ಬರೆದ ಬಿದ್ದಿದೆ.

  ವರದಿ: ಆಶಿಕ್ ಮುಲ್ಕಿ
  Published by:Vijayasarthy SN
  First published: