ಸಾಕು ನಾಯಿಗೆ ಕೃಷ್ಣನ ವೇಷ ಹಾಕಿ ಜಾಲತಾಣದಲ್ಲಿ ಹಂಚಿಕೊಂಡ ಯುವತಿ; ಆಕ್ರೋಶ ವ್ಯಕ್ತವಾದ ಬಳಿಕ ಪೋಸ್ಟ್ ಡಿಲಿಟ್

ಕ್ರಿಶ್ಚಿಯನ್ ಯುವತಿ ಉದ್ದೇಶಪೂರ್ವಕವಾಗಿಯೇ ನಾಯಿ ಮರಿಗೆ ಕೃಷ್ಣನ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿ, ತನ್ನ ಇನ್​ಸ್ಟಾಗ್ರಾಮಿನಲ್ಲಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಈ ಪೋಸ್ಟ್ ಅನ್ನು ಜೋಶಿಲ್ ಲೋಬೊ ಡಿಲೀಟ್ ಮಾಡಿದ್ದಾರೆ. 

ಸಾಕು ನಾಯಿ ಮರಿಗೆ ಕೃಷ್ಣನ ವೇಷ ಹಾಕಿರುವುದು.

ಸಾಕು ನಾಯಿ ಮರಿಗೆ ಕೃಷ್ಣನ ವೇಷ ಹಾಕಿರುವುದು.

  • Share this:
ಪುತ್ತೂರು; ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಎಲ್ಲ  ತಾಯಂದಿಯರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ, ಬಾಲಕೃಷ್ಣನನ್ನು ನೋಡಿ ಸಂಭ್ರವಿಸುತ್ತಾರೆ. ಆದರೆ, ಇಲ್ಲೊಬ್ಬರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಾಡೆಲ್ ಒಬ್ಬರು ತಮ್ಮ ಮುದ್ದಿನ ನಾಯಿಗೆ ಕೃಷ್ಣನ ವೇಷ ತೊಡಿಸಿ, ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಮಾಡೆಲ್ ಅವರು ನಾಯಿಗೆ ಕೃಷ್ಣನ ವೇಷ ಹಾಕಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪೋಸ್ಟ್​ಅನ್ನು ಡಿಲಿಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಒಂದು ಕಡೆ ಇಸ್ಲಾಂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ ವಿಚಾರ ಹಿಂಸೆಯ ಕಿಡಿ ಹಬ್ಬಿಸಿದ್ದರೆ, ಇನ್ನೊಂದು ಕಡೆ ಕೃಷ್ಣ ಜನ್ಮಾಷ್ಟಮಿಯಂದು ಕ್ರಿಶ್ಚಿಯನ್ ಯುವತಿಯೊಬ್ಬಳು ತನ್ನ ಮುದ್ದಿನ ನಾಯಿಗೆ ಕೃಷ್ಣ ವೇಷ ಹಾಕಿ ಹಿಂದು ದೇವರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಿಂದುಗಳೆಲ್ಲ ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಂತೆ ಮಂಗಳೂರು ಮೂಲದ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಯುವತಿ ತನ್ನ ನಾಯಿ ಮರಿಗೆ ಕೃಷ್ಣನ ವೇಷ ಹಾಕಿದ್ದಾರೆ. ಬಳಿಕ ಆ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದೆ.

ಇದನ್ನು ಓದಿ: ಡಿಜೆ ಹಳ್ಳಿ ಗಲಭೆ ಪ್ರಕರಣ; 9 ಕೇಸ್ ಗಳ ಪೈಕಿ 2 ಕೇಸ್ ಸಿಸಿಬಿ ಪೊಲೀಸರಿಗೆ ಹಸ್ತಾಂತರ

ಕ್ರಿಶ್ಚಿಯನ್ ಯುವತಿ ಉದ್ದೇಶಪೂರ್ವಕವಾಗಿಯೇ ನಾಯಿ ಮರಿಗೆ ಕೃಷ್ಣನ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿ, ತನ್ನ ಇನ್​ಸ್ಟಾಗ್ರಾಮಿನಲ್ಲಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಈ ಪೋಸ್ಟ್ ಅನ್ನು ಯುವತಿ ಡಿಲೀಟ್ ಮಾಡಿದ್ದಾರೆ.
Published by:HR Ramesh
First published: