• Home
  • »
  • News
  • »
  • district
  • »
  • ಎರಡು ಕೈಯಲ್ಲಿ ಏಕಕಾಲಕ್ಕೆ 4 ಭಾಷೆಗಳನ್ನು ಉಲ್ಟಾ ಬರೆಯುವ ಯುವಕ, ಲಿಮ್ಕಾ ದಾಖಲೆ!

ಎರಡು ಕೈಯಲ್ಲಿ ಏಕಕಾಲಕ್ಕೆ 4 ಭಾಷೆಗಳನ್ನು ಉಲ್ಟಾ ಬರೆಯುವ ಯುವಕ, ಲಿಮ್ಕಾ ದಾಖಲೆ!

ಎರಡು ಕೈಗಳಿಂದ ಬರೆಯುತ್ತಿರುವ ಬಸವರಾಜು.

ಎರಡು ಕೈಗಳಿಂದ ಬರೆಯುತ್ತಿರುವ ಬಸವರಾಜು.

ನಿರಂತರ ಪ್ರಯತ್ನವೊಂದಿದ್ದರೆ ಯಾವುದೂ ಅಸಾಧ್ಯ ಅಲ್ಲ ಅನ್ನೋದನ್ನ ಬಸವರಾಜ್ ಸಾಬೀತು ಮಾಡಿದ್ದಾರೆ. ಅವರು ಎರಡು ದಾಖಲೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಿಕೊಂಡಿದ್ದಾರೆ. ಗಿನ್ನೆಸ್ ದಾಖಲೆಗೆ ಯತ್ನ ನಡೆಸಿದ್ದಾರೆ.

  • Share this:

ರಾಯಚೂರು: ಕೆಲವರಿಗೆ ಏನಾದರೂ ಸಾಧಿಸಬೇಕೆಂಬ ಹಠವಿರುತ್ತದೆ. ಅದಕ್ಕಾಗಿ ಅನೇಕ ರೀತಿಯ ಕಸರತ್ತು ಮಾಡುತ್ತಾರೆ. ಕೆಲವರು ತಮ್ಮ ಸಾಧನೆಯಿಂದ ನಿಬ್ಬೆರಗಾಗುವಂತೆ ಮಾಡುತ್ತಾರೆ. ಅಚ್ಚರಿ ಪಡುವಂತೆ ಮಾಡುತ್ತಾರೆ. ಇಂಥ ಒಂದು ಸಾಧನೆಯನ್ನು ತೆಲಂಗಾಣದ ಬಡೆನೆಲ್ಲೂರಿನ ಬಸವರಾಜ ಮಾಡಿದ್ದಾರೆ. ತನ್ನ ಎರಡೂ ಕೈಗಳಿಂದ ನಾಲ್ಕು ಭಾಷೆಗಳ ಪದಗಳನ್ನು ಏಕಕಾಲಕ್ಕೆ ಬರೆಯುವ ಮೂಲಕ ಯುವಕನೋರ್ವ ಲಿಮ್ಕಾ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ರೀತಿ ಎರಡೂ ಕೈಗಳಿಂದ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರೆಯುವ ಮೂಲಕ ಎರಡು ಲಿಮ್ಕಾ ರೆಕಾರ್ಡ್ ಗಳನ್ನು ತನ್ನ ಹೆಸರಿನಲ್ಲಿ ನಿರ್ಮಿಸಿ, ಗಿನ್ನೆಸ್ ದಾಖಲೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


ಒಂದು ಕೈಯಲ್ಲಿ ಕನ್ನಡದ ಅಕ್ಷರಗಳನ್ನು ಬರೆಯುತ್ತಿದ್ದರೆ, ಇನ್ನೊಂದು ಕಡೆ ತೆಲುಗು, ತಕ್ಷಣವೇ ಬದಲಾಯಿಸಬೇಕಾದರೆ ಹಿಂದಿ ಒಂದು ಕೈ ಯಲ್ಲಿ ಬರೆಯುತ್ತಿದ್ದರೆ, ಇನ್ನೊಂದು ಕೈಯಲ್ಲಿ ಇಂಗ್ಲಿಷ್ ಬರೆತ್ತಾರೆ. ಹೇಗೆ ಬೇಕಾದರೂ ಯಾವ ಅಕ್ಷರವಾದರೂ ಲೀಲಾಜಾಲವಾಗಿ ಬರೆಯುತ್ತಾರೆ. ಒಬ್ಬ ವ್ಯಕ್ತಿ ಎರಡು ಕೈಗಳಲ್ಲಿ ಶಬ್ದಗಳನ್ನು ಉಲ್ಟಾ ಬರೆಯುತ್ತಿರುವುದು ವಿಶೇಷವಾಗಿದೆ.


ಎರಡೂ ಕೈಗಳಿಂದ ನಾಲ್ಕು ಭಾಷೆಯಲ್ಲಿನ ಪದಗಳನ್ನು ವೇಗವಾಗಿ ಬರೆಯುತ್ತಿರುವ ಈ ಯುವಕನ ಹೆಸರು ಬಸವರಾಜ. ರಾಯಚೂರಿನ ಆರ್​ಟಿಪಿಎಸ್​ ನಲ್ಲಿ ಉದ್ಯೋಗಿಯಾಗಿರುವ ಬಸವರಾಜ ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಸರಾಗವಾಗಿ ಪದಗಳನ್ನು ಬರೆದು ವಿಶಿಷ್ಟ ದಾಖಲೆ ತನ್ನದಾಗಿಸಿಕೊಂಡಿದ್ದಾರೆ. ಒಂದೊಂದು ಅಕ್ಷರ ಜೋಡಿಸಿ, ತಿರುವಣಿಯಾಗಿ ಓದಲು ಬರುವಂತೆ ವಾಕ್ಯ ರಚಿಸಿರೋ ಬಸವರಾಜ ಏಷಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ವರ್ಲ್ಡ್ ರೆಕಾರ್ಡ್ ಯೂನಿವರ್ಸಿಟಿಯಲ್ಲಿ ದಾಖಲೆ ನಿರ್ಮಿಸಿ ಪದಕಗಳನ್ನ ಪಡೆದಿದ್ದಾರೆ. ಬಸವರಾಜ ಸಾಧನೆ ಮಾಡುವ ಆಸೆ ಇದ್ದಾಗ ಅಂಬ್ಯುಲೆನ್ಸ್ ನಲ್ಲಿ ಉಲ್ಟಾ ಬರೆದಿದ್ದನ್ನು ಕಂಡು ಅದರಿಂದ ಪ್ರಭಾವಿತನಾಗಿ ಉಲ್ಟಾ ಬರೆಯಲು ಆರಂಭಿಸಿ ಎರಡು ಕೈ ಗಳಿಂದಲೂ ಉಲ್ಟಾ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ.


ಇದನ್ನು ಓದಿ: ಮತ್ತೆ ಬಾದಾಮಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು!


ಈಗಾಗಲೇ ಎರಡೂ ಕೈಗಳಿಂದ ಏಕಕಾಲಕ್ಕೆ ಬರೆಯುವವರು ಸಾಕಷ್ಟು ಜನರಿದ್ದಾರೆ‌. ಆದರೆ ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ಎರಡೂ ಕೈಗಳಿಂದ ಬರೆಯೋರು ಯಾರೂ ಇಲ್ಲ‌. ಈ ರೀತಿ ಏಕಕಾಲಕ್ಕೆ ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಬರೆಯುವ ವಿಶಿಷ್ಟ ಕಲೆಯನ್ನ ಬಸವರಾಜ ರೂಢಿಸಿಕೊಂಡಿದ್ದಾರೆ. ಬಸವರಾಜ 2011ರಿಂದಲೇ ಎರಡೂ ಕೈಗಳಿಂದ ಬರೆಯೋದನ್ನ ಪ್ರಾರಂಭಿಸಿದ್ದು, ಬಿಡುವಿದ್ದ ಸಮಯದಲ್ಲೆಲ್ಲಾ ಈ ರೀತಿಯ ಪ್ರಯತ್ನವನ್ನು ಇಂದಿಗೂ ಮುಂದುವರೆಸಿದ್ದಾರೆ. ಇವರ ಈ ಬರವಣಿಗೆಯನ್ನ ಗುರುತಿಸಿದ ಇಂಡಿಯನ್ ಬುಕ್ ಆಪ್ ರೆಕಾರ್ಡ್ ನವರು ನವೆಂಬರ್ 24ಕ್ಕೆ ಪದವಿ ನೀಡಿ ಸನ್ಮಾಸುವ ಮೂಲಕ ತಮ್ಮ ರೆಕಾರ್ಡ್ ನಲ್ಲಿ ದಾಖಲಿಸಿದ್ದಾರೆ.


ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ ಬಸವರಾಜ ಸಾಧನೆಯನ್ನು ಮುಂದುವರಿಸಿ ಗಿನ್ನೆಸ್ ದಾಖಲೆಗೆ ತಮ್ಮ ಸಾಧನೆಯ ಮಾಹಿತಿಯನ್ನು ಕಳುಹಿಸುತ್ತಿದ್ದಾರೆ. ನಿರಂತರ ಪ್ರಯತ್ನವೊಂದಿದ್ದರೆ ಯಾವುದೂ ಅಸಾಧ್ಯ ಅಲ್ಲ ಅನ್ನೋದನ್ನ ಬಸವರಾಜ್ ಸಾಬೀತು ಮಾಡಿದ್ದಾರೆ. ಅವರು ಎರಡು ದಾಖಲೆಗಳನ್ನು ನಿರ್ಮಿಸುವ ಮೂಲಕ ತಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಿಕೊಂಡಿದ್ದಾರೆ. ಗಿನ್ನೆಸ್ ದಾಖಲೆಗೆ ಯತ್ನ ನಡೆಸಿದ್ದಾರೆ.

Published by:HR Ramesh
First published: