HOME » NEWS » District » A YOUNG MAN CHEATING BY ONLINE SHOPPING LAKH RUPEES LOOTED RHHSN DKK

ಆನ್​ಲೈನ್ ಶಾಪಿಂಗ್​ನಲ್ಲಿ ಮೋಸ‌ ಹೋದ ಯುವಕ; ಬರೋಬ್ಬರಿ ಲಕ್ಷ ರೂಪಾಯಿ ಕಳೆದುಕೊಂಡ ಅಸಾಮಿ!

ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ಇತ್ತ ಮೊಬೈಲ್ ಕೂಡಾ ಸಿಗದೇ, ಅತ್ತ ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಂಡ ಬಳಿಕ ಯುವಕನಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಮೋಸಕ್ಕೊಳಗಾದ ಯುವಕ ಕಾರವಾರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

news18-kannada
Updated:March 25, 2021, 7:36 PM IST
ಆನ್​ಲೈನ್ ಶಾಪಿಂಗ್​ನಲ್ಲಿ ಮೋಸ‌ ಹೋದ ಯುವಕ; ಬರೋಬ್ಬರಿ ಲಕ್ಷ ರೂಪಾಯಿ ಕಳೆದುಕೊಂಡ ಅಸಾಮಿ!
ಪ್ರಾತಿನಿಧಿಕ ಚಿತ್ರ.
  • Share this:
ಕಾರವಾರ: ದುಬಾರಿ ಬೆಲೆಯ ಮೊಬೈಲ್​ ಅನ್ನು ಕಡಿಮೆ ಬೆಲೆಯಲ್ಲಿ ನೀಡುವ ವೆಬ್‌ಸೈಟ್ ‌ಒಂದರ ಜಾಹಿರಾತು ನಂಬಿ ಯುವಕನೊಬ್ಬ ಬರೋಬ್ಬರಿ 1 ಲಕ್ಷದ 13 ಸಾವಿರ ಹಣ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಚಿತ್ರಗಿಯಲ್ಲಿ ನಡೆದಿದೆ. ಪದೆ ಪದೆ ಇಂತಹ ಆನ್ ಲೈನ್ ಶಾಪಿಂಗ್ ಜಾಲಕ್ಕೆ ಮೋಸ‌ ಹೋಗುತ್ತಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಜನ.

ಆಗಿದ್ದೇನು? ಏನಿದು ಜಾಹಿರಾತು?

ಯುವಕ ಚಿನ್ಮಯ ನಾಯ್ಕ ಮಾರ್ಚ್ 17ರಂದು ತಮ್ಮ ಮೊಬೈಲ್ ಬಳಸುತ್ತಿದ್ದ ವೇಳೆ theonline.shopping ಹೆಸರಿನ ವೆಬ್‌ಸೈಟ್‌ನಲ್ಲಿ 48,000 ಸಾವಿರ ಮೌಲ್ಯದ Oneplus 8T ಮೊಬೈಲ್‌ನ್ನು ಕೇವಲ 13,000 ಸಾವಿರಕ್ಕೆ ನೀಡುವುದಾಗಿ ಜಾಹೀರಾತು ಕಂಡುಬಂದಿತ್ತು. ಇದನ್ನು ನೋಡಿದ ಬಳಿಕ ಮೊಬೈಲ್ ಆರ್ಡರ್ ಮಾಡಲು ವೆಬ್‌ಸೈಟ್‌ಗೆ ತೆರಳಿದ್ದು ಅಲ್ಲಿ ವ್ಯಕ್ತಿಯೊಬ್ಬರ ಇನ್‌ಸ್ಟಾಗ್ರಾಮ್ ಖಾತೆಯ ಲಿಂಕ್ ಸಿಕ್ಕಿತ್ತು. ಈ ವೇಳೆ ಯುವಕ ಮೊಬೈಲ್ ಬೇಕು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದು, ಆ ವ್ಯಕ್ತಿ ಮೊದಲು 1,000 ಸಾವಿರ ರೂಪಾಯಿ ಹಣ ಹಾಕುವಂತೆ ತಿಳಿಸಿ ಗೂಗಲ್ ಪೇ ಕ್ಯೂಆರ್ ಕೋಡ್‌ನ್ನು ಕಳುಹಿಸಿಕೊಟ್ಟಿದ್ದನು.

ಇದನ್ನು ಓದಿ: ಎಸ್.ಐ.ಟಿ ತನಿಖೆಯಿಂದ ಸಿಡಿ ಪ್ರಕರಣ ತಾರ್ಕಿಕ ಅಂತ್ಯ ಕಾಣಲ್ಲ, ಸಿಬಿಐ ತನಿಖೆಯೇ ಸೂಕ್ತ; ರಾಜಶೇಖರ ಮುಲಾಲಿ

ಅದರಂತೆ ಹಣ ಹಾಕಿದ ಬಳಿಕ ದಿನಾಂಕ ಮಾರ್ಚ್ 18 ರಂದು ಪುನಃ ಉಳಿದ 12,000 ಸಾವಿರ ಹಣವನ್ನ ಪಾವತಿಸುವಂತೆ ತಿಳಿಸಿದ್ದು ಅದರಂತೆ ಚಿನ್ಮಯ್ ಹಣವನ್ನು ವರ್ಗಾಯಿಸಿದ್ದಾನೆ. ಆದರೆ ಇದಾದ ಬಳಿಕವೂ ಮೊಬೈಲ್ ಡೆಲಿವರಿ ಆಗಿಲ್ಲ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದಾಗ ಮತ್ತೆ 5,000 ಸಾವಿರ ಹಣ ಹಾಕುವಂತೆ ಆ ವ್ಯಕ್ತಿ ಡಿಮಾಂಡ್ ಮಾಡಿದ್ದಾನೆ. ಇದಕ್ಕೆ ಒಪ್ಪದ ಯುವಕ, ತನಗೆ ಮೊಬೈಲ್ ಬೇಡ ತನ್ನ ಹಣವನ್ನ ರಿಫಂಡ್ ಮಾಡುವಂತೆ ತಿಳಿಸಿದಾಗ, ಈತನ ಇನ್‌ಸ್ಟಾಗ್ರಾಮ್ ಖಾತೆಯನ್ನ ಬ್ಲಾಕ್ ಮಾಡಲಾಗಿದೆ. ಬಳಿಕ 7603085526 ನಂಬರಿನಿಂದ ಕರೆ ಮಾಡಿ ತಾನು the on line.shopping ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ತಾನು ಕಳುಹಿಸುವ ಲಿಂಕ್‌ನ್ನು ತೆರೆದು ಅದರಲ್ಲಿ ಕೇಳಿರುವ ಬ್ಯಾಂಕ್ ಹೆಸರು, ಮೊಬೈಲ್ ನಂಬರ್, UPI ಪಿನ್ ಸಂಖ್ಯೆಯನ್ನು ತುಂಬಿ 51 ರೂಪಾಯಿ ಕಳುಹಿಸಿ, ತಮ್ಮ ಹಣವನ್ನು ರಿಫಂಡ್ ಮಾಡುವುದಾಗಿ ಕರೆ ಮಾಡಿದ್ದ ವ್ಯಕ್ತಿ ಹೇಳಿಕೊಂಡಿದ್ದಾನೆ.
Youtube Video

ಇದನ್ನು ನಂಬಿದ ಯುವಕ ಚಿನ್ಮಯ್ ಲಿಂಕ್‌ನಲ್ಲಿ ಕೇಳಿದ್ದ ಎಲ್ಲ ಮಾಹಿತಿಯನ್ನೂ ತುಂಬಿ, 1 ರೂಪಾಯಿ ಪೇ ಮಾಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಈತನ ಖಾತೆಯಿಂದ ಎರಡು ಬಾರಿ 49,000 ಸಾವಿರ ರೂಪಾಯಿಯಂತೆ ಒಟ್ಟು 98,000 ಸಾವಿರ ಹಾಗೂ ನಂತರ 2,000 ಸಾವಿರ ರೂಪಾಯಿ ಖಾತೆಯಿಂದ ಡೆಬಿಟ್ ಆಗಿದೆ. ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ಇತ್ತ ಮೊಬೈಲ್ ಕೂಡಾ ಸಿಗದೇ, ಅತ್ತ ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಂಡ ಬಳಿಕ ಯುವಕನಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಮೋಸಕ್ಕೊಳಗಾದ ಯುವಕ ಕಾರವಾರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
Published by: HR Ramesh
First published: March 25, 2021, 7:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories