• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ಲಾಭ ಗಳಿಸುತ್ತಿರುವ ಕುಶಾಲನಗರದ ಯುವ ರೈತ ದಂಪತಿ

ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ಲಾಭ ಗಳಿಸುತ್ತಿರುವ ಕುಶಾಲನಗರದ ಯುವ ರೈತ ದಂಪತಿ

ರೇಷ್ಮೆ ಗೂಡು ಸಿದ್ಧಪಡಿಸುತ್ತಿರುವ ಸಾಗರ್ ಪತ್ನಿ ಮಿತ್ರಾ.

ರೇಷ್ಮೆ ಗೂಡು ಸಿದ್ಧಪಡಿಸುತ್ತಿರುವ ಸಾಗರ್ ಪತ್ನಿ ಮಿತ್ರಾ.

ತಂದೆಯ ಕಾಲದಿಂದಲೂ ಮಾಡುತ್ತಿದ್ದ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿಕೊಂಡಿರುವ ಸಾಗರ್ ಅದರಿಂದಲೇ ವರ್ಷಕ್ಕೆ ಅಧಿಕ ಲಾಭ ಗಳಿಸಿ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ರೇಷ್ಮೆ ಕೃಷಿಗೆ ಬೆಂಗಳೂರು ಮಾರುಕಟ್ಟೆಯನ್ನು ಅವಲಂಬಿಸಿರುವ ರೈತ ಸಾಗರ್, ಹೈನುಗಾರಿಕೆಗೆ ಸ್ಥಳೀಯರ ಹಾಲಿನ ಡೇರಿಗೆ ಹಾಲು ಹಾಕುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೊಡಗು; ಕೇವಲ ಸಾಂಪ್ರದಾಯಿಕ ಕೃಷಿಯನ್ನೇ ನಂಬಿಕೊಂಡು ವ್ಯವಸಾಯದಲ್ಲಿ ಲಾಭವಿಲ್ಲ ಎಂದು ಯೋಚಿಸುವುದಕ್ಕಿಂತ ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಾ ಉತ್ತಮ ಆದಾಯ ಗಳಿಸಿ  ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ ಕೊಡಗಿನ ಯುವ ದಂಪತಿ. ರೇಷ್ಮೆ ಹುಳುಗಳಿಗೆ ಸ್ವತಃ ತಾವೇ ಸೊಪ್ಪು ತಂದು ಹಾಕುವ ದಂಪತಿ, ಆಕಳುಗಳಿಗೂ ಸ್ವತಃ ತಾವೇ ಮೇವು ಪೂರೈಸುತ್ತಾರೆ. ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ರೈತ ಯುವತಿ ದಂಪತಿ ಸಾಗರ್ ಮತ್ತು ಮಿತ್ರಾ ಅವರು ಕೂಲಿ ಆಳುಗಳನ್ನು ಕೆಲಸಕ್ಕೆ ಕರೆದುಕೊಂಡರೆ ಲಾಭ ಗಳಿಸೋದು ಕಷ್ಟವೆಂದು ಅರಿತ್ತಿರುವ ಅರಿತು ಎಲ್ಲ ಕೆಲಸಗಳನ್ನು ಇವರೇ ನಿಭಾಯಿಸುತ್ತಿದ್ದಾರೆ.


ಸಾಗರ್ ಪಿಯುಸಿ ಓದಿದ್ದು, ಮುಂದಿನ ಶಿಕ್ಷಣಕ್ಕೆ ಹೋಗುವ ಬದಲು ಪ್ರಗತಿಪರ ಕೃಷಿ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಾ ಅದರ ಜೊತೆಗೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಕೊಡಗಿನ ವಾತಾವರಣ ಬಿತ್ತನೆ ರೇಷ್ಮೆಗೂಡುಗಳ ಬೆಳೆಗೆ ಅತ್ಯುತ್ತಮ ಹವಾಮಾನವಾಗಿದ್ದು, ಬಿತ್ತನೆ ರೇಷ್ಮೆ ಗೂಡುಗಳನ್ನು ಬೆಳೆಯುತ್ತಿದ್ದಾರೆ. ಹವಾಮಾನಕ್ಕೆ ತಕ್ಕಂತೆ ಒಳ್ಳೆಯ ಬೆಳೆ ಬರುವುದರಿಂದ ಕೊಡಗಿನ ಬಿತ್ತನೆ ರೇಷ್ಮೆ ಗೂಡುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯೂ ಇದೆಯಂತೆ. ಹೀಗಾಗಿ ಹತ್ತು ವರ್ಷಗಳಿಂದಲೂ ಬಿತ್ತನೆ ರೇಷ್ಮೆಗೂಡು ಬೆಳೆಯುತ್ತಿದ್ದೇವೆ. ಬಿತ್ತನೆಗೂಡನ್ನು ಮಾರಾಟ ಮಾಡಲು ಹಾಸನ, ರಾಮನಗರ ಮತ್ತು ಮೈಸೂರುಗಳಲ್ಲಿ ಅವಕಾಶವಿದೆ. ಆದರೆ ಈ ಜಿಲ್ಲೆಗಳಲ್ಲಿ ರೈತರು ಮತ್ತು ವ್ಯಾಪಾರಿಗಳು ನೇರವಾಗಿ ನಮ್ಮಿಂದಲೇ ಕೊಂಡುಕೊಳ್ಳುತ್ತಾರೆ. ಆದರೆ ನಿರೀಕ್ಷಿತ ಲಾಭ ಸಿಗೋದು ಸ್ವಲ್ಪ ಕಷ್ಟ. ಆದರೆ ಬೆಂಗಳೂರಿನಲ್ಲಿ ರೇಷ್ಮೆ ಬಿತ್ತನೆ ಗೂಡು ಮಾರಾಟಕ್ಕೆ ಒಳ್ಳೆಯ ಮಾರುಕಟ್ಟೆ ಇದೆ. ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಎರಡು ದಿನ ಮುನ್ನವೇ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಹೀಗಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ ದಿನವೇ ಬಹಿರಂಗ ಹರಾಜು ಮೂಲಕ ನಮ್ಮ ಗೂಡುಗಳು ವ್ಯಾಪಾರವಾಗಿ ಉತ್ತಮ ಲಾಭ ಸಿಗುತ್ತದೆ ಎನ್ನುತ್ತಾರೆ ರೈತ ಸಾಗರ್.


ಇದನ್ನು ಓದಿ: ಖಾತೆ ಹಂಚಿಕೆ ಅಸಮಾಧಾನ, ಸಚಿವ ಸಂಪುಟ ಸಭೆಗೆ ಗೈರು; ಸಿಎಂ ಮಾತನಾಡಿ ಸರಿಪಡಿಸುತ್ತಾರೆ ಎಂದ ಬೊಮ್ಮಾಯಿ


ರೇಷ್ಮೆ ಕೃಷಿ ಜೊತೆಗೆ ಎಂಟು ವರ್ಷಗಳಿಂದ ಹೈನುಗಾರಿಕೆಯನ್ನು ಜೊತೆ ಜೊತೆಯಾಗಿಯೇ ಮಾಡುತ್ತಿದ್ದಾರೆ. ಹತ್ತು ಹಸುಗಳನ್ನು ಸಾಕಿದ್ದು ಜರ್ಸಿ ತಳಿಯ ನಾಲ್ಕು ಮತ್ತು ಎಚ್ಎಫ್ ತಳಿಯ 6 ಹಸುಗಳನ್ನು ಸಾಕಿದ್ದಾರೆ. ಇವುಗಳಿಗೆ ನಿತ್ಯವೂ ಹಸಿ ಮೇವಿನ ಜೊತೆಗೆ ರಾತ್ರಿ ಒಂದು ಕಂತೆ ಒಣ ಭತ್ತದ ಮೇವನ್ನು ಹಾಕುತ್ತಾರೆ. ಹೀಗಾಗಿ ಅತ್ಯಧಿಕ ಹಾಲು ಕರೆಯುತ್ತವೆಯಂತೆ. ಬೆಳಿಗ್ಗೆ 75 ರಿಂದ 80 ಲೀ. ಮತ್ತು ರಾತ್ರಿ 75 ರಿಂದ 80 ಲೀಟರ್ ಹಾಲು ಕರೆಯುತ್ತವೆ. ಒಟ್ಟಿನಲ್ಲಿ ನಿತ್ಯ 150 ರಿಂದ 160 ಲೀಟರ್ ಹಾಲನ್ನು ಹಾಸನ ಹಾಲು ಒಕ್ಕೂಟ ಸ್ಥಳೀಯ ಡೇರಿಗೆ ಹಾಕುತ್ತಿದ್ದಾರೆ. ಸರ್ಕಾರದ ಸಹಾಯಧನವೂ ಸೇರಿದಂತೆ ಪ್ರತೀ ಲೀಟರ್​ಗೆ 30 ರೂಪಾಯಿಯಂತೆ ನಿತ್ಯ 4.500 ರಿಂದ 4800 ರೂಪಾಯಿ ಹೈನುಗಾರಿಕೆಯಿಂದ ಗಳಿಸುತ್ತಿದ್ದಾರೆ. ಅಂದರೆ ತಿಂಗಳೊಂದಕ್ಕೆ ಖರ್ಚು ಕಳೆದು 80 ರಿಂದ 90 ಸಾವಿರ ಲಾಭ ಗಳಿಸುತ್ತಿದ್ದಾರೆ.


ಒಟ್ಟಿನಲ್ಲಿ ತಂದೆಯ ಕಾಲದಿಂದಲೂ ಮಾಡುತ್ತಿದ್ದ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿಕೊಂಡಿರುವ ಸಾಗರ್ ಅದರಿಂದಲೇ ವರ್ಷಕ್ಕೆ ಅಧಿಕ ಲಾಭ ಗಳಿಸಿ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ರೇಷ್ಮೆ ಕೃಷಿಗೆ ಬೆಂಗಳೂರು ಮಾರುಕಟ್ಟೆಯನ್ನು ಅವಲಂಬಿಸಿರುವ ರೈತ ಸಾಗರ್, ಹೈನುಗಾರಿಕೆಗೆ ಸ್ಥಳೀಯರ ಹಾಲಿನ ಡೇರಿಗೆ ಹಾಲು ಹಾಕುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

Published by:HR Ramesh
First published: