• Home
  • »
  • News
  • »
  • district
  • »
  • ವಿಜಯಪುರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ವಿಜಯಪುರದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಕೊರೋನಾ ಪೀಡಿತ ಮತ್ತು ಅನೀಮಿಯಾದಿಂದ ಬಳಲುತ್ತಿದ್ದ ಮಹಿಳೆಗೆ ಸಹಜ ಹೆರಿಗೆ ಮಾಡಿಸುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ತಮ್ಮ ವೃತ್ತಿಪರತೆ ಜೊತೆಗೆ ಮಾನವೀಯತೆಯನ್ನೂ ಪ್ರದರ್ಶಿಸಿದ್ದಾರೆ‌.

  • Share this:

ವಿಜಯಪುರ(ಜೂ.22): ಕೊರೋನಾ ಸಂಕಷ್ಟ ಸಮಯದಲ್ಲಿ ಬಸವ ನಾಡಿನ ವೈದ್ಯರು ಅಪರೂಪದ ಹೆರಿಗೆ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಐಎಲ್​​ಐ ತೊಂದರೆಯಿಂದ ಬಳಲುತ್ತಿದ್ದ 20 ವರ್ಷದ ಮಹಿಳೆ ಆಸ್ಪತ್ರೆಗೆ ತೆರಳಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಈ ಮಹಿಳೆಯಲ್ಲಿ ಕೊರೋನಾ ಸೋಂಕು ಇರುವುದು ನಿನ್ನೆ ಜೂ. 21 ರಂದು ದೃಢಪಟ್ಟಿತ್ತು. ಅಲ್ಲದೆ ಯುವತಿ ಅನೀಮಿಯಾದಿಂದಲೂ ಬಳಲುತ್ತಿದ್ದಳು. ಇಂದು ಬೆಳಿಗ್ಗೆ ಈ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕಾರ್ಯೋನ್ಮುಖರಾದ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದು ಹೆರಿಗೆ ಮಾಡಿಸಿದ್ದಾರೆ. ಈ ಮಹಿಳೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ ತಿಳಿಸಿದ್ದಾರೆ.


ಈ ಕುರಿತು ಪ್ರತಿಕ್ರಿಯೆ ನೀಡಿರಿವ ವಿಜಯಪುರ ಜಿಲ್ಲಾಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಮನಪ್ರೀತ್ ಕೌರ ತಹರೀಯಾ, ಪೆ.8789 ಮಹಿಳೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈಗ ತಾಯಿ ಮತ್ತು ಅವಳಿ ಹೆಣ್ಣು ಮಕ್ಕಳು ಆರೋಗ್ಯವಂತರಾಗಿದ್ದಾರೆ.  ಕೊರೊನಾ ಪಾಸಿಟಿವ್ ಮಹಿಳೆಗೆ ಜನಿಸಿದ ಅವಳಿ ಹೆಣ್ಣು ಮಕ್ಕಳಲ್ಲಿ ಮೊದಲು ಮಗು 2 ಕೆ.ಜಿ ಮತ್ತು ಎರಡನೇ ಮಗು 2.10 ಕೆಜಿ ತೂಕವನ್ನು ಹೊಂದಿದ್ದು, ತಾಯಿ, ಅವಳಿ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ ತಿಳಿಸಿದ್ದಾರೆ.


ಇದು ಇಂತಹ ಎರಡನೇ ಪ್ರಕರಣವಾಗಿದ್ದು, ಅನೀಮಿಯಾದಿಂದ ಬಳಲುತ್ತಿದ್ದ, ಈ ಮಹಿಳೆಗೆ ಬೆಳಿಗ್ಗೆ ಬೇನೆ ಕಾಣಿಸಿಕೊಂಡಿತ್ತು. ನಂತರ ಎಲ್ಲ ಸಿಬ್ಬಂದಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಲಾಗಿದೆ.


ಸಿಸ್ಟರ್ ಕಾಶೀಬಾಯಿ, ಡಾ. ಉಪಾಸೆ, ರವಿ ಕೂಚಬಾಳ, ಮೊಹಸೀನ್ ಮಮದಾಪೂರ, ಸಿಬ್ಬಂದಿಯಾದ ಮಲ್ಲಿಕಾರ್ಜುನ ಅವರನ್ನು ಒಳಗೊಂಡ ವೈದ್ಯರ ತಂಡ ಮಹಿಳೆಗೆ ಸಹಜ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ ತಂಡದ ಸದಸ್ಯರಾಗಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರ ತಂಡಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ ಒಟ್ಟು 211 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಈವರೆಗೆ ಥಲ್ಸೇಮಿಯಾ, ಕ್ಯಾನ್ಸರ್, ಹೃದ್ರೋಗ, ಎಚ್ ಐ ವಿ ಸೇರಿದಂತೆ ಕೊರೊನಾ ಸೋಂಕಿನ ಜೊತೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಉತ್ತಮ ಚಿಕಿತ್ಸೆ ನೀಡಲಾಗಿದ್ದು, ಅವರೆಲ್ಲ ಗುಣಮುಖರಾಗಿದ್ದಾರೆ.


ಇದನ್ನೂ ಓದಿ : ಬೆಳಗಾವಿಗೆ ಶಿಫ್ಟ್ ಆಗಬೇಕಿದ್ದ ಸಕ್ಕರೆ ನಿರ್ದೇಶನಾಲಯವನ್ನು ಕೈಗಾರಿಕೆ ಇಲಾಖೆಯಲ್ಲಿ ವಿಲೀನಕ್ಕೆ ಸರ್ಕಾರ ಯತ್ನ; ಕಬ್ಬು ಬೆಳಗಾರರ ಆಕ್ರೋಶ..!


ಈಗ ಕೊರೋನಾ ಪೀಡಿತ ಮತ್ತು ಅದರಲ್ಲೂ ಅನೀಮಿಯಾದಿಂದ ಬಳಲುತ್ತಿದ್ದ ಈ ಯುವತಿಗೆ ಈಗ ಅವಳಿ ಹೆರಿಗೆ ಅದರಲ್ಲೂ ಸಹಜ ಹೆರಿಗೆ ಮಾಡಿಸುವ ಮೂಲಕ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ತಮ್ಮ ವೃತ್ತಿಪರತೆ ಜೊತೆಗೆ ಮಾನವೀಯತೆಯನ್ನೂ ಪ್ರದರ್ಶಿಸಿದ್ದಾರೆ‌.


ಈ ಮೂಲಕ ಸರಕಾರಿ ಆಸ್ಪತ್ರೆ ಮತ್ತು ವೈದ್ಯರೆಂದರೆ ಮೂಗು ಮುರಿಯುವ ಜನರು ಹಾಗೂ ಇತರರಿಗೆ ತಕ್ಕ ಉತ್ತರ ನೀಡಿದ್ದಾರೆ.  ಅಷ್ಟೇ ಅಲ್ಲ, ಇತರ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.

Published by:G Hareeshkumar
First published: