HOME » NEWS » District » A WOMEN DRILL 60 FEET WELL ALONE AT KARAWARA RHHSN DKK

ಏಕಾಂಗಿಯಾಗಿ 60 ಅಡಿ ಆಳದ ಬಾವಿ ತೋಡಿ ಜನರ ದಾಹ ನೀಗಿಸಿದ 56 ವರ್ಷದ ಧೀರ ‌ಮಹಿಳೆ!

ಬತ್ತುತ್ತಿರುವ ಜಲ ಮೂಲಗಳು, ಒಣಗಿ ಬಾಡುತ್ತಿರುವ ಗಿಡ ಮರಗಳು ಹೀಗೆ ಜಗತ್ತು ಸಾಗುವಾಗ ಗೌರಿ ಎರಡು ಬಾವಿ ತೋಡಿ ಸಾಧನೆ ಮಾಡಿ ಗಿಡ-ಮರಗಳಿಗೆ ಆಸರೆಯಾಗಿದ್ದಾರೆ. ಜತೆಗೆ ಜನರ ನೀರಿನ ದಾಹ ಸಹ ತೀರಿಸಿದ್ದಾರೆ. ಯಾವ ಫಲಾಪೇಕ್ಷೆ ಇಲ್ಲದೆ ಎರಡು ಬಾವಿ ತೋಡಿದ ಮಹಿಳೆಗೆ ನಮ್ಮದೊಂದು ಸಲಾಂ.

news18-kannada
Updated:March 26, 2021, 7:02 PM IST
ಏಕಾಂಗಿಯಾಗಿ 60 ಅಡಿ ಆಳದ ಬಾವಿ ತೋಡಿ ಜನರ ದಾಹ ನೀಗಿಸಿದ 56 ವರ್ಷದ ಧೀರ ‌ಮಹಿಳೆ!
ಬಾವಿ ತೋಡಿದ ಮಹಿಳೆ ಗೌರಿ ನಾಯ್ಕ್
  • Share this:
ಕಾರವಾರ: ಲಾಕ್ ಡೌನ್ ನಲ್ಲಿ ಖಾಲಿ ಮನೆಯಲ್ಲಿ ಇರುವ ಬದಲು ನೀರಿನ ದಾಹ ತೀರಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಗಣೇಶನಗರದ ನಿವಾಸಿ 56ವರ್ಷದ ಗೌರಿ ನಾಯ್ಕ್ ಎಂಬ ಮಹಿಳೆ ಏಕಾಂಗಿಯಾಗಿ ಯಾರ ಸಹಾಯ ಪಡೆಯದೆ 60 ಅಡಿ ಆಳದ ಬಾವಿ ತೋಡಿ ಜಲ ಉಕ್ಕಿಸಿದ್ದಾಳೆ. ಈಕೆ ಒಂದಲ್ಲ ಎರಡು ಬಾವಿ ತೋಡಿ ಸಾಹಸ ಮೆರೆದಿದ್ದಾಳೆ. 56 ವರ್ಷದ ಮಹಿಳೆ 60 ಅಡಿ ಆಳದ ಎರಡು ಬಾವಿ ತೋಡಿ ಭೂಮಿಯಿಂದ ಜಲ ಉಕ್ಕಿಸಿದ್ದಾಳೆ ಎಂದರೆ ಸಾಮಾನ್ಯ ಮಾತಲ್ಲ. ಜನ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಲಾಕ್ ಡೌನ್ ನಲ್ಲಿ ಖಾಲಿ ಕೂರುವ ಬದಲು ನೀರಿನ ದಾಹ ತೀರಿಸಲು ಬಾವಿ ತೋಡಿದ ಗೌರಿ ಎಂಬ ಮಹಿಳೆಯ ಯಶೋಗಾಥೆ ಕೇಳಿದ ಝಲ್ ಎನಿಸುತ್ತೆ.

ಸರಾಗವಾಗಿ ಹಗ್ಗ ಹಿಡಿದು ಬಾವಿಯ ಆಳದಲ್ಲಿ ಇಳಿಯುವ ಈ ಮಹಿಳೆಯ ಸಾಧನೆ ನಿಜಕ್ಕೂ ಜನ ಹುಬ್ಬೇರಿಸಿ ನೋಡುವಂತಹದ್ದು. ಕೊರೋನಾ ಮಹಾಮಾರಿಗೆ ಇಡೀ ದೇಶವೇ ಸ್ಥಬ್ದವಾದ ದಿನ ಅದು. ಶಿರಸಿಯಲ್ಲಿ ಬಿರು ಬಿಸಿಲು, ಬತ್ತುತ್ತಿರುವ ಜಲ ಮೂಲಗಳು. ಅದರಲ್ಲಿ ಗಿಡಮರಗಳಿಗೆ ನೀರುಣಿಸುವ ಮನೆ ಬಾವಿಗಳು ಬತ್ತಿ ಬರಡಾಗುವ ದಿನವಾಗಿತ್ತು. ಈ ಸಂದರ್ಭದಲ್ಲಿ ಗಿಡ ಮರಗಳಿಗೆ ನೀರುಣಿಸಬೇಕು. ಜತೆಗೆ ಅಕ್ಕಪಕ್ಕದ ಜನರ ನೀರಿನ ದಾಹ ಕೂಡ ತೀರಿಸಬೇಕು ಎನ್ನುವ ನಿಟ್ಟಿನಲ್ಲಿ ಗೌರಿ ನಾಯ್ಕ್ ಒಂದು ಬಾವಿ ತೋಡಿದ್ದಾರೆ. ಯಾರ  ಸಹಾಯ ಇಲ್ಲದೆ ಏಕಾಂಗಿಯಾಗಿ ಒಬ್ಬರೇ ಈ ಸಾಹಸಗೈದಿದ್ದಾರೆ. ಅದು ಬರೋಬ್ಬರಿ 60 ಅಡಿ ಆಳದ ಬಾವಿ ತೋಡಿ ಜಲ ಉಕ್ಕಿಸಿದ್ದಾರೆ. ಈ ಮೂಲಕ ಗಿಡ ಮರಗಳಿಗೆ ಆಸರೆಯಾಗಿದ್ದಾರೆ. ಹಾಗೂ ಅಕ್ಕಪಕ್ಕದ ಜನರ ನೀರಿದ ದಾಹ ತೀರಿಸಿದ್ದಾರೆ. ಈಗ ಗೌರಿ ಊರುಕೇರಿಯಲ್ಲಿ ಬಾವಿ ಗೌರಿ ಅಂತಾ ಮನೆ ಮಾತಾಗಿದ್ದು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕೊರೋನಾತಂಕ; ವರ್ಕ್ ಫ್ರಂ ಹೋಂ, ಹೊರಗಿನ ಚಟುವಟಿಕೆ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ ಕಾರ್ಯಪಡೆ

ಇನ್ನೂ ಕಳೆದ ಎರಡು ವರ್ಷದ ಹಿಂದೆ ಗೌರಿ ನಾಯ್ಕ್ ತಮ್ಮದೆ ತೋಟದ ಜಾಗದಲ್ಲಿ 60 ಅಡಿ ಆಳದ ಒಂದು ಬಾವಿ ತೋಡಿ ಹೆಸರು ಮಾಡಿದ್ದರು. ಈಗ ಮತ್ತೆ ಲಾಕ್ ಡೌನ್ ನಲ್ಲಿ ಬಾವಿ ತೋಡಿ ಮನೆ ಮಾತಾಗಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಬಾವಿ ಕೆಲಸಕ್ಕೆ ಇಳಿದರೆ ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಬಾವಿ ಕೆಲಸಕ್ಕೆ ಇಳಿದು ಸಂಜೆ 6ರ ತನಕ ಕೆಲಸ ಮಾಡುತ್ತಿದ್ದರಂತೆ. ಮನೆಯಲ್ಲಿ ಸಂಬಂಧಿಕರು, ಮಕ್ಕಳು, ಎಲ್ಲರೂ ಇದ್ದರೂ ಕೂಡ ಯಾರ ಸಹಾಯವೂ ಪಡೆಯದೆ ಒಬ್ಬರೇ ಬಾವಿ ತೋಡಿ ಸಾಹಸಗೈದಿದ್ದಾರೆ. ಗೌರಿಯ ಸಾಹಸಕ್ಕೆ ಮನೆ ಮಂದಿ ಖುಷಿಯಾಗಿದ್ದಾರೆ. ಹೆಮ್ಮೆಯಿಂದ ಗೌರಿಯ ಸಂಬಂಧಿಕರು ತಾವು ಅಂತಾ ಹೇಳಿ ತಿರುಗುತ್ತಿದ್ದಾರೆ. ಎರಡು ಅಡಿ ಆಳದ ಗುಂಡಿ ತೋಡಲು ಹರಸಾಹಪಡುವ ಜನರ ಮಧ್ಯೆ 60 ಅಡಿ ಆಳದ ಬಾವಿ ತೋಡಿ ಸಾಹಸ ಮಾಡಿರುವ ಗೌರಿಯ ಸಾಧನೆ ನಿಜಕ್ಕೂ ಶ್ಲಾಘನೀಯ.

ಒಟ್ಟಾರೆ ಬತ್ತುತ್ತಿರುವ ಜಲ ಮೂಲಗಳು, ಒಣಗಿ ಬಾಡುತ್ತಿರುವ ಗಿಡ ಮರಗಳು ಹೀಗೆ ಜಗತ್ತು ಸಾಗುವಾಗ ಗೌರಿ ಎರಡು ಬಾವಿ ತೋಡಿ ಸಾಧನೆ ಮಾಡಿ ಗಿಡ-ಮರಗಳಿಗೆ ಆಸರೆಯಾಗಿದ್ದಾರೆ. ಜತೆಗೆ ಜನರ ನೀರಿನ ದಾಹ ಸಹ ತೀರಿಸಿದ್ದಾರೆ. ಯಾವ ಫಲಾಪೇಕ್ಷೆ ಇಲ್ಲದೆ ಎರಡು ಬಾವಿ ತೋಡಿದ ಮಹಿಳೆಗೆ ನಮ್ಮದೊಂದು ಸಲಾಂ.
Published by: HR Ramesh
First published: March 26, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories