ವಿಜಯಪುರು(ಸೆಪ್ಟೆಂಬರ್. 01): ಬೆಳಗಾವಿ ಜಿಲ್ಲೆಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿಚಾರ ಈಗ ಸುಖಾಂತ್ಯ ಕಂಡಿದೆ. ಆದರೆ, ಈ ಘಟನೆ ಮಾಸುವ ಮುನ್ನವೇ ಸಂಗೊಳ್ಳಿ ರಾಯಣ್ಣನ ಕಟೌಟ್ ಗೆ ಅವಮಾನ ಮಾಡುವ ಮೂಲಕ ದುಷ್ಕರ್ಮಿಗಳು ಸಾಮರಸ್ಯ ಕದಡಲು ಪ್ರಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ.
ಹಂಜಗಿ ಗ್ರಾಮದಲ್ಲಿ ರಾಯಣ್ಣನ ಸರ್ಕಲ್ ನಲ್ಲಿ ಸ್ವಾತಂತ್ರ ಸೇನಾನಿ ಸಂಗೊಳ್ಳಿ ರಾಯಣ್ಣನ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಈ ಕಟೌಟ್ ನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಭಾವಚಿತ್ರವೂ ಇದೆ. ಆದರೆ, ದುಷ್ಕರ್ಮಿಗಳು ನಿನ್ನೆ ರಾತ್ರಿ ಈ ಕಟೌಟ್ ಮೇಲೆ ಕೆಸರು ಎರಚುವ ಮೂಲಕ ದುಷ್ಕೃತ್ಯ ಮೆರೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಖರು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶಗೊಂಡಿರುವ ಗ್ರಾಮಸ್ಥರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ಆರಂಭಿಸಿದ್ದರು.
ಸಂಗೊಳ್ಳಿ ರಾಯಣ್ಣನ ಕಟೌಟ್ ಗೆ ಅವಮಾಮ ಮಾಡಿದ ಸುದ್ದಿ ತಿಳಿದ ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪಿಎಸ್‌ಐ ಎಸ್.ಎಂ.ಶಿರಗುಪ್ಪಿ ತಮ್ಮ ಸಿಬ್ಬಂದಿಯೊಡನೆ ಹಂಜಗಿ ಗ್ರಾಮಕ್ಕೆ ದೌಡಾಯಿಸಿದರು. ಅಲ್ಲದೇ, ಅಲ್ಲಿ ಧರಣಿ ನಿರತ ಮುಖಂಡ ಬಿ.ಡಿ.ಪಾಟೀಲ ಮತ್ತು ಇತರೊಂದಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಲಂಪಿಸ್ಕಿನ್ ವ್ಯಾಪಕ - ರೋಗ ನಿಯಂತ್ರಣಕ್ಕೆ ಸಚಿವ ಪ್ರಭು ಚವ್ಹಾಣ್ ಕಟ್ಟುನಿಟ್ಟಿನ ಸೂಚನೆ
ಈ ಸಂದರ್ಭದಲ್ಲಿ ಮಾತನಾಡಿದ ನಾನಾ ಮುಖಂಡರು, ಸಂಗೊಳ್ಳಿ ರಾಯಣ್ಣನ ಕೌಟೌಟ್ಗೆ ಅವಮಾನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಧರಣಿ ಮುಂದುವರೆಸಿದರು. ಪಿಎಸ್‌ಐ ಎಸ್.ಎಂ.ಶಿರಗುಪ್ಪಿ, ಈ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಧರಣಿ ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು. ಅಲ್ಲದೇ, ಅಲ್ಲಿಯೇ ಹಾಲನ್ನು ತರಿಸಿ ಸಂಗೊಳ್ಳಿ ರಾಯಣ್ಣನ ಕಟೌಟ್ ಗೆ ಕ್ಷೀರಾಭಿಷೇಕ ಮಾಡುವ ಮೂಲಕ ಪಿಎಸ್ಐ ಗೌರವ ನಮನ ಸಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ