ಕರ್ತವ್ಯದಲ್ಲಿರುವಾಗ ಸಮವಸ್ತ್ರದಲ್ಲೇ ಬಾರ್​​ನಲ್ಲಿ ಖಾಕಿಗಳ ‘ಎಣ್ಣೆ’ ಪಾರ್ಟಿ; Hassan Police ವಿಡಿಯೋ ವೈರಲ್!

cops drinking alcohol while on duty: ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಠಾಣೆ ವ್ಯಾಪ್ತಿಗೆ ಬರುವ ಬಾರ್​​​ವೊಂದರ ಮೇಲಿನ ಕೊಠಡಿಯಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ರಂಗಸ್ವಾಮಿ ಮತ್ತು ರಾಮೇಗೌಡ ವಾಕಿಟಾಕಿ ಜೊತೆಗೆ ಸಮವಸ್ತದಲ್ಲೇ ನೆಲದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

  • Share this:
ಹಾಸನ : ಸರ್ಕಾರಿ ಕೆಲಸ‌ (govt job) ದೇವರ ಕೆಲಸ. ಸಾಮಾಜಿಕ ಹೊಣೆ,‌ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾರೇ ಆಗಲಿ ಕರ್ತವ್ಯ ಲೋಪ ಎಸಗಿದರೆ  ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದವರು, ರಕ್ಷಣೆ ನೀಡಬೇಕಾದವರು, ತಪ್ಪಿತಸ್ಥರಿಗೆ ಬುದ್ದಿ ಕಲಿಸಬೇಕಾದ ಇಬ್ಬರು ಪೊಲೀಸರು(police) ಹಾಡುಹಗಲೇ ಅದರಲ್ಲೂ ಡ್ಯೂಟಿಯಲ್ಲಿರುವಾಗಲೇ ಸಮವಸ್ತ್ರದಲ್ಲೇ ಬಾರೊಂದರಲ್ಲಿ ಕುಳಿತು ಎಣ್ಣೆ(cops drinking alcohol) ಹೊಡೆಯುತ್ತಾ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಖಾಕಿಗಳು ಡ್ರಿಂಕ್ಸ್ ಪಾರ್ಟಿ

ನಗರದ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಎಎಸ್‌ಐ ರಂಗಸ್ವಾಮಿ ಮತ್ತು ಮುಖ್ಯಪೇದೆ ಜೆ.ಎಸ್.ರಾಮೇಗೌಡ ಎಂಬುವವರನ್ನು ಕರ್ತವ್ಯ ಲೋಪ ಆರೋಪದಡಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಈ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಠಾಣೆ ವ್ಯಾಪ್ತಿಗೆ ಬರುವ ಬಾರ್​​​ವೊಂದರ ಮೇಲಿನ ಕೊಠಡಿಯಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ರಂಗಸ್ವಾಮಿ ಮತ್ತು ರಾಮೇಗೌಡ ಅವರು, ವಾಕಿಟಾಕಿ ಜೊತೆಗೆ ಸಮವಸ್ತದಲ್ಲೇ ನೆಲದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು.

ಪೊಲೀಸರ ಅನಾಚಾರ ಬಯಲು 

ಈ ವಿಷಯ ತಿಳಿದ ಸ್ಥಳೀಯ ಯುವಕನೋರ್ವ ತನ್ನ ಮೊಬೈಲ್ ಆನ್ ಮಾಡಿಕೊಂಡೇ ಪೊಲೀಸರು ಎಣ್ಣೆ ಕುಡಿಯುತ್ತಿದ್ದ ಕೋಣೆಗೆ ಎಂಟ್ರಿಕೊಟ್ಟಿದ್ದು, ನೀವು ಯಾರು..? ಡ್ಯೂಟಿಯಲ್ಲಿದ್ದೀರಾ, ಯೂನಿಫಾರ್ಮ್ ಹಾಕಿಕೊಂಡೇ ಮದ್ಯಪಾನ ಮಾಡುತ್ತಿರುವುದು ಸರಿಯೇ, ಟ್ರಾಫಿಕ್, ಮೊದಲಾದ ಕಡೆಗಳಲ್ಲಿ ಸಾರ್ವಜನಿಕರ ವಾಹನಗಳನ್ನು ಹಿಡಿದು ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ದಂಡ ವಿಧಿಸುವ ನೀವೇ ಹೀಗೆ ಮಾಡುವುದು ಎಷ್ಟು ಸರಿ ಎಂದೆಲ್ಲಾ ಪ್ರಶ್ನೆ ಕೇಳಿದ್ದಾನೆ. ಈ ವೇಳೆ ನೀವು ಯಾರು ಎಂದು ಪೊಲೀಸರು ಮರು ಪ್ರಶ್ನೆ ಹಾಕುತ್ತಾರೆ. ಆಗ ನಾನು ಸಾಮಾನ್ಯ ವ್ಯಕ್ತಿ ಕಾನೂನು ಪರಿಪಾಲನೆ ಮಾಡುವವರೇ ಹೀಗೆ ಮಾಡೋದು ಸರೀನಾ ಅಂತ ಮತ್ತೊಮ್ಮೆ ಪ್ರಶ್ನೆ ಹಾಕುತ್ತಾನೆ.

ಇದನ್ನೂ ಓದಿ: Bangalore Theft News: ಬೆಂಗಳೂರಿಗರೇ ಎಚ್ಚರ.. ಮನೆ ಮುಂದೆ ಪಾರಿವಾಳ ಬಂದು ಕೂತರೆ ಡೇಂಜರ್!

ಕಾಮನ್​ ಮ್ಯಾನ್​ನಿಂದ ತರಾಟೆ 

ಆಗ ನೀವು ಕೇಳುತ್ತಿರುವುದು ಸರಿ ಇದೆ. ನಾವು ಎಣ್ಣೆಯನ್ನು ಇಲ್ಲೇ ಬಿಟ್ಟು ಹೋಗಿ ಎಂದರೆ ಹೋಗುತ್ತೇವೆ. ನಾವು ತಪ್ಪು ಮಾಡಿದ್ದೇವೆ ಎಂದು ಇದೇ ಪೊಲೀಸರು ಅಸಹಾಯಕರಂತೆ ಹೇಳುತ್ತಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ಜೊತೆ ಮತ್ತೊಬ್ಬ ಕುಳಿತು ಮದ್ಯಪಾನ ಮಾಡುತ್ತಿರುತ್ತಾನೆ. ಇಷ್ಟಕ್ಕೇ ಮಾತು ನಿಲ್ಲಿಸದ ವಿಡಿಯೋ ಮಾಡುವ ವ್ಯಕ್ತಿ, ನೀವು ಡ್ಯೂಟಿ ಮೇಲಿದ್ದೀರಾ, ಯೂನಿಫಾರ್ಮ್ ಹಾಕಿಕೊಂಡೇ ಮದ್ಯ ಸೇವನೆ ಮಾಡ್ದೀತಾ ಇದ್ದೀರಾ, ನೀವು ಇನ್ನೊಬ್ಬರಿಗೆ ಬುದ್ಧಿ ಹೇಳಬೇಕು, ನೀವೇ ಹೀಗೆ ಮಾಡಿದರೆ ಹೇಗೆ ಎಂದು ಮೇಲಿಂದ ಮೇಲೆ ಪ್ರಶ್ನೆ ಹಾಕುತ್ತಾನೆ. ಆ ವೇಳೆಗಾಗಲೇ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬುದೆಲ್ಲಾ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಗ ಜ್ಞಾನೋದಯ ವಾದವರಂತೆ ನೀವು ವಿಡಿಯೋ ಮಾಡುತ್ತಿದ್ದೀರಾ ಎಂದು ಮೇಲುದನಿಯಲ್ಲಿ ವ್ಯಕ್ತಿಯನ್ನು ಕೇಳುತ್ತಾರೆ. ಇಲ್ಲ ನಾನೇಕೆ ವಿಡಿಯೋ ಮಾಡಲಿ ಎನ್ನುತ್ತಾನೆ. ಈ ಸೂಕ್ಷ್ಮತೆ ಅರಿತ ಪೊಲೀಸರು ಜೊತೆ ಎಣ್ಣೆ ಕುಡಿಯುತ್ತಿದ್ದ ಇನ್ನೊಬ್ಬ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.

ಸಮಜಾಯಿಷಿಗಿಳಿದ ಪೊಲೀಸರು..! 

ಹಬ್ಬ ಇತ್ತಲ್ಲಾ ಆ ಕಾರಣದಿಂದ ಇಲ್ಲಿಗೆ ಬಂದೆವು. ಬಾರ್ ಬಾಗಿಲಲ್ಲಿ ನಿಂತರೆ ಸರಿಯಾಗಲ್ಲ ಎಂದುಕೊಂಡು ಮೇಲೆ ಬಂದೆವು ಎಂದು ಸಮಜಾಯಿಷಿ ನೀಡಲು ಮುಂದಾಗುತ್ತಾರೆ. ಆ ವೇಳೆಗಾಗಲೇ ಪೊಲೀಸರ ಗುಂಡಿನ ಕರಾಮತ್ತು ಮೊಬೈಲ್ ನಲ್ಲಿ ಸೆರೆಯಾಗಿದ್ದು ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ , ಶಿಸ್ತುಕ್ರಮ ಜರುಗಿಸಿದ್ದು, ಇಬ್ಬರ ತಲೆದಂಡವಾಗಿದೆ.
Published by:Kavya V
First published: