• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚಿನ್ನದ ಆಸೆಯಿಂದ ದೋಚಿಕೊಂಡು ಬಂದ ಅದೆ ಚಿನ್ನಕ್ಕೆ ಕೊಲೆಯಾದ ವ್ಯಾಪಾರಿ; ಇದು ಒಂದು ಚಿನ್ನದ ಕಥೆ!

ಚಿನ್ನದ ಆಸೆಯಿಂದ ದೋಚಿಕೊಂಡು ಬಂದ ಅದೆ ಚಿನ್ನಕ್ಕೆ ಕೊಲೆಯಾದ ವ್ಯಾಪಾರಿ; ಇದು ಒಂದು ಚಿನ್ನದ ಕಥೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೃತ ಸಾಗರ ಪಾಟೀಲ್ ಆತನ ಸಂಬಂದಿ ಸಂತೋಷ ಜೋತೆ ಉತ್ತರ ಪ್ರದೇಶದ ಮಯಗಲ್ ಸರಾಯ್ ಎಂಬ ಊರಿನಲ್ಲಿ ಚಿನ್ನ ಕರಗಿಸಿ ಗಟ್ಟಿ ಬಂಗಾರ ಮಾಡುವ ಕಸುಬು ಮಾಡಿಕೊಂಡಿದ್ದ. ಬಂಗಾರದ ಅಂಗಡಿಯನ್ನು ಇಟ್ಟಿದ್ದ ಸಾಗರ ಅಲ್ಲಿಯ ಜನರ ಆಭರಣಗಳನ್ನ ಪಡೆದು ಗಟ್ಟಿ ಬಂಗಾರ ಮಾಡಿಕೊಡುವುದಾಗಿ ಹೇಳಿ 1.491 ಕೆಜಿ ಚಿನ್ನ ಹಾಗೂ 3.638 ಕೆಜಿ ಬೆಳ್ಳಿಯನ್ನ ಲಪಟಾಯಿಸಿಕೊಂಡು ಅಲ್ಲಿಂದ ಸಪ್ಟೆಂಬರ್ 27 ರಂದು ಪರಾರಿಯಾಗಿದ್ದ.

ಮುಂದೆ ಓದಿ ...
  • Share this:

ಬೆಳಗಾವಿ: ಚಿನ್ನ ಅಂದ್ರೆ ಯಾರಿಗೆ ಆಸೆ ಇರಲ್ಲ ಹೇಳಿ. ಚಿನ್ನ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಗಾದೆ ಮಾತಿದೆ. ಆ ಗಾದೆ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ ಚಿನ್ನದ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿ ಒಬ್ಬರು ಚಿನ್ನದ ಆಸೆಗೆ ಬಿದ್ದು ಜನ ಕೊಟ್ಟಿದ್ದ ಚಿನ್ನವನ್ನ ದೋಚಿಕೊಂಡು ಈಗ ಅದೆ ಚಿನ್ನಕ್ಕೆ ತನ್ನ  ಸ್ನೇಹಿತರ ಕೈಯಲ್ಲೆ ಕೊಲೆಯಾಗಿದ್ದಾನೆ. ಹೌದು ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ. ಜಿಲ್ಲೆಯ ಅಥಣಿ ಅವರಖೊಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಅಕ್ಟೊಬರ್4 ರಂದು ಒಂದು ಶವ ಪತ್ತೆಯಾಗುತ್ತೆ. ನೀರಿನಲ್ಲಿದ್ದ ಶವ ಕಂಡ ಗ್ರಾಮಸ್ಥರು ಅಥಣಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಶವ ಹೊರ ತೆಗೆಯುವ ಮುನ್ನ ಎಲ್ಲರು ಯಾರೊ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದೆ ಭಾವಿಸಿದ್ದರು. ಆದರೆ ಯಾವಾಗ ಪೊಲೀಸರು ಬಂದು ಶವ ಹೊರ ತೆಗೆದು ಆತನ ಗುರುತಿಗಾಗಿ ಆತ ತೊಟ್ಟಿದ್ದ ಬಟ್ಟೆಯಲ್ಲಿ ಹುಡುಕಾಟ ನಡೆಸ್ತಾರೊ ಆವಾಗ್ಲೆ ಎಲ್ಲರು ಒಂದು ಕ್ಷಣ ದಂಗಾಗುತ್ತಾರೆ. ಅದಕ್ಕೆ ಕಾರಣ ಆತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕಿದ್ದು ಬೇರೊಬ್ಬರಿ 1 ಕೇಜಿ 491 ಗ್ರಾಮ ಚಿನ್ನ. ಜೊತೆಗೆ ಒಂದು ಆಧಾರ ಕಾರ್ಡ್​ ಹಾಗೂ ಆತನ ಪೋಟೋ.


ಮೃತ ವ್ಯಕ್ತಿ ಸಾಗರ ಪಾಟೀಲ್ 30 ವರ್ಷದ ವ್ಯಕ್ತಿ  ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಪಾಟಗಾಂವ ಗ್ರಾಮದ ವ್ಯಕ್ತಿ ಎಂದು ಪತ್ತೆಯಾಗುತ್ತೆ. ಮೃತನ ಜಾಡು ಹಿಡಿದು ಆತನ ಮನೆಗೆ ತೆರಳಿದ ಪೊಲೀಸರು ತನಿಖೆಯನ್ನ ಆರಂಬಿಸಿದ್ದಾರೆ. ಮೃತ ಸಾಗರ ಪತ್ನಿ ಪ್ರಗತಿಯನ್ನ ವಿಚಾರಣೆ ಮಾಡಿದ್ದಾರೆ. ಪತ್ನಿ ಪ್ರಗತಿ ಯನ್ನ ಅಥಣಿಗೆ ಕರೆಸಿ ಗಂಡನ ಶವ ಗುರುತಿಸಿದ ಬಳಿಕ ಪಯ್ನಿಯಿಂದ ದೂರು ದಾಖಲಿಸಿಕೊಂಡಿದ್ದ ಅಥಣಿ ಪೊಲೀಸರು ತನಿಖೆ ಆರಂಭಿಸಿದ್ದರು.


ತನ್ನ ಗಂಡ ಅಥಣಿ ತಾಲೂಕಿನ ಜಂಬಗಿ ಗ್ರಾಮದ ನವನಾಥ ಬಾಬರ ಜೊತೆಗೆ ತೆರಳಿದ್ದ ನವನಾಥ ಬಾಬರ ಹಾಗೂ ತನ್ನ ಗಂಡ ಸಾಗರ ಪಾಟೀಲ್ ಸ್ನೇಹಿತರು ಆತನ ಜೋತೆಗೆ ಆಕೆಯ ಗಂಡ ಸಪ್ಟೆಂಬರ್ 29 ರಂದು ಕೊನೆಯದಾಗಿ ಇದ್ದರೂ ಎಂಬ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದಳು. ಇದೆ ಸುಳಿವನ್ನ ಬಿನ್ನಟ್ಟಿದ್ದ ಪೊಲೀಸರಿಗೆಈಡಿ ಪ್ರಕರಣ ಬಯಲಿಗೆ ಬಂದಿದೆ.


ಮೃತ ಸಾಗರ ಪಾಟೀಲ್ ಆತನ ಸಂಬಂದಿ ಸಂತೋಷ ಜೋತೆ ಉತ್ತರ ಪ್ರದೇಶದ ಮಯಗಲ್ ಸರಾಯ್ ಎಂಬ ಊರಿನಲ್ಲಿ ಚಿನ್ನ ಕರಗಿಸಿ ಗಟ್ಟಿ ಬಂಗಾರ ಮಾಡುವ ಕಸುಬು ಮಾಡಿಕೊಂಡಿದ್ದ. ಬಂಗಾರದ ಅಂಗಡಿಯನ್ನು ಇಟ್ಟಿದ್ದ ಸಾಗರ ಅಲ್ಲಿಯ ಜನರ ಆಭರಣಗಳನ್ನ ಪಡೆದು ಗಟ್ಟಿ ಬಂಗಾರ ಮಾಡಿಕೊಡುವುದಾಗಿ ಹೇಳಿ 1.491 ಕೆಜಿ ಚಿನ್ನ ಹಾಗೂ 3.638 ಕೆಜಿ ಬೆಳ್ಳಿಯನ್ನ ಲಪಟಾಯಿಸಿಕೊಂಡು ಅಲ್ಲಿಂದ ಸಪ್ಟೆಂಬರ್ 27 ರಂದು ಪರಾರಿಯಾಗಿದ್ದ.


ಈ ಕುರಿತು ಮಯಗಲ್ ಸರಾಯ್ ನಲ್ಲಿ ದೂರು ದಾಖಲಿಸಿದ್ದ  ಸಂತೋಷ ಸಪ್ಟೆಂಬರ್ 29 ರಂದು ಸಾಗರ ಪಾಟೀಲ್ ಪತ್ನಿ ಪ್ರಗತಿಗೆ ಪೋನ್ ಮಾಡಿ ಪರಾರಿಯಾಗಿರುವ ಕುರಿತು ವಿಷಯ ತಿಳಿಸಿದ್ದಾನೆ.


ಇನ್ನು ಬಂಗಾರ ಲಪಟಾಯಿಸಿದ್ದ ಮೃತ ಸಾಗರ ದೂರು ದಾಖಲಾದ ವಿಚಾರ ಗೊತ್ತಾಗಿ ತನ್ನ ಮನೆಗೆ ಹೋಗದೆ ತನ್ನ ಸ್ನೇಹಿತ ಆರೋಪಿ ನವನಾಥ ಬಾಬರಗೆ ಸಹಾಯ ಕೇಳಿ ತನಗೆ ಸ್ವಲ್ಪ ದಿನ ಇರಲು ಜಾಗ ಮಾಡಿ ಕೊಡುವಂತೆ ಹೇಳಿದ್ದ. ಮೃತ ಸಾಗರನ ಜೊತೆ ಚಿನ್ನ ಇದೆ ಎಂದು ಗೊತ್ತಾಗುತ್ತಿದ್ದಂತೆ ದುರಾಸೆಗೆ ಬಿದ್ದ ಆರೋಪಿ 35 ವರ್ಷದ ನವನಾಥ ಬಾಬರ್ ಆಶ್ರಯ ಕೊಡಿಸುವುದಾಗಿ ಹೇಳಿ ಅಥಣಿ ಹೊರವಲಯದಲ್ಲಿ ಕೊಲೆಮಾಡಿ ಸಾಗರ ಬಳಿಯಿದ್ದ ಬ್ಯಾಗ ಕಸಿದುಕೊಂಡು ಯಾರಿಗೂ ತಿಳಿಯದಿರಲಿ ಎಂದು ಸಾಗರ ಪಾಟೀಲ್ ಶವವನ್ನು ಕೃಷ್ಣಾ ನದಿಗೆ ಬಿಸಾಕಿದ್ದ.


ಇದನ್ನೂ ಓದಿ : ISRO Recruitment 2020: ವಿಜ್ಞಾನಿ, ಎಂಜಿನಿಯರ್ ಹುದ್ದೆ ಸೇರಿದಂತೆ 55 ಖಾಲಿ ಹುದ್ದೆಗಳಿಗೆ ಅಕ್ಟೋಬರ್ 15 ರೊಳಗೆ ಅರ್ಜಿ ಸಲ್ಲಿಸಿ


ಆದರೆ, ಚಾಲಾಕಿ ಸಾಗರ ಮಾತ್ರ ಬ್ಯಾಗ್ ನಲ್ಲಿದ್ದ ಚಿನ್ನವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಇದು ಆರೋಪಿ ನವನಾಥಗೆ ಗೊತ್ತಾಗದೆ ಚಿನ್ನದ ಸಮೇತ ಸಾಗರ ಶವವನ್ನ ನದಿಗೆ ಬಿಸಾಡಿದ್ದ ಬ್ಯಾಗ್ ನಲ್ಲಿದ್ದ 3.638 ಕೆಜಿ ಬೆಳ್ಳಿಯನ್ನ ತೆಗೆದ್ದುಕೊಂಡು ಮನೆಗೆ ಹೋಗಿದ್ದಾಗಿ ಆರೋಪಿ ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ.


ಒಟ್ಟಿನಲ್ಲಿ ಚಿನ್ನದ ಆಸೆಗೆ ಬಿದ್ದು ಮೃತ ಸಾಗರ ಜನರಿಗೆ ಮೊಸ ಮಾಡಿ ಚಿನ್ನ ಲಪಟಾಯಿಸಿ ಕೊಲೆಯಾದ. ಅದೆ ಚಿನ್ನದ ಆಸೆಗೆ ಬಿದ್ದು ಆರೋಪಿ ನವನಾಥ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

First published: