HOME » NEWS » District » A TEACHER GOING TO VILLAGE AND TEACH TO CHILDREN RH

ಮಕ್ಕಳ ಶಿಕ್ಷಣದ ಆಸಕ್ತಿ ಕುಂದಬಾರದು ಎಂದು ಸಂಚಾರಿ ಶಿಕ್ಷಕನಾದ ಮಾರುತಿ; ಮನೆಮನೆಗೆ ಹೋಗಿ ಪಾಠ ಹೇಳಿಕೊಡುತ್ತಿರುವ ಶಿಕ್ಷಕ

ಮಕ್ಕಳು ಕ್ರಿಯಾತ್ಮಕವಾಗಿರಬೇಕೆಂಬ ಕಾರಣಕ್ಕೆ ಮನೆಯಂಗಳದಲ್ಲಿ. ಸಭಾಭವನದಲ್ಲಿ ಮಕ್ಕಳೊಂದಿಗೆ ನಲಿಕಲಿ ಶಿಕ್ಷಣ ಮಾದರಿಯಲ್ಲಿ ನೃತ್ಯ ಮಾಡಿ ಹೆಜ್ಜೆ ಹಾಕಿ ಪಾಠ ಮಾಡುವುದು ಪಾಲಕರಿಗೂ ಕೂಡ ಖುಷಿ ತರುತ್ತಿದೆ. ಕೋವಿಡ್ 19 ಕಾರಣದಿಂದ ಶಾಲೆಗಳು ಪ್ರಾರಂಭವಾಗುವ ಇಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಇದೇ ಮಾದರಿಯಲ್ಲಿ ರಾಜ್ಯದ ಇತರೆಡೆ ಮೊಬೈಲ್ ಶಿಕ್ಷಣ ಆರಂಭಿಸಿದಲ್ಲಿ ಮಕ್ಕಳು ಕೊಂಚವಾದರೂ ವಿದ್ಯಾಭ್ಯಾಸ ಪಡೆಯಬಹುದಾಗಿದೆ.

news18-kannada
Updated:November 3, 2020, 6:37 PM IST
ಮಕ್ಕಳ ಶಿಕ್ಷಣದ ಆಸಕ್ತಿ ಕುಂದಬಾರದು ಎಂದು ಸಂಚಾರಿ ಶಿಕ್ಷಕನಾದ ಮಾರುತಿ; ಮನೆಮನೆಗೆ ಹೋಗಿ ಪಾಠ ಹೇಳಿಕೊಡುತ್ತಿರುವ ಶಿಕ್ಷಕ
ಮನೆಗೆ ತೆರಳಿ ಪಾಠ ಮಾಡುತ್ತಿರುವ ಶಿಕ್ಷಣ ಮಾರುತಿ.
  • Share this:
ಕಾರವಾರ: ಕೊರೋನಾ ಮಹಾಮಾರಿಯಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಇನ್ನು ಮೊಬೈಲ್ ಇಲ್ಲದೆ, ನೆಟ್ ವರ್ಕ್ ಸಿಗದ ಕುಗ್ರಾಮಗಳ ಮಕ್ಕಳು ಸ್ಥಿತಿ ಹೇಳತೀರದಾಗಿದೆ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ಶಿಕ್ಷಣದಿಂದ ಮಕ್ಕಳು ಆಸಕ್ತಿ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಶಿಕ್ಷಕರೊಬ್ಬರು ಹಳ್ಳಿಹಳ್ಳಿಗಳಿಗೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಈ ಶಿಕ್ಷಕನ ಮಾದರಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಒಂದೆಡೆ ಐಸ್ ಕ್ಯಾಂಡಿ ಡಬ್ಬಿ ಹೋಲುವ ಬಾಕ್ಸ್ ಹೊತ್ತು ಬೈಕ್ ಮೂಲಕ ಬರುತ್ತಿರುವ ವ್ಯಕ್ತಿ. ಮಕ್ಕಳೊಂದಿಗೆ ಹಾಡುತ್ತಾ ನಲಿಯುತ್ತಿರುವ ಶಿಕ್ಷಕ.  ಇವರ ಹೆಸರು ಮಾರುತಿ ಉಪ್ಪಾರ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ತಿಗಣೆಯವರು. ತಿಗಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಇವರು ಕೋವಿಡ್ 19 ಅಂತಾ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಮೊಬೈಲ್ ಶಿಕ್ಷಣದ ಪೆಟ್ಟಿಗೆಯನ್ನು ಏರಿಸಿಕೊಂಡು ಊರೂರು ತಿರುಗುತ್ತಿದ್ದಾರೆ. ಮಕ್ಕಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ನಲಿಕಲಿ, ಕಲಿ-ನಲಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಪರಿಕರಗಳು ಕೂಡ ಇವರ ಬಳಿಯಲ್ಲಿದೆ. ಆರಂಭದಲ್ಲಿ ಇವರು ಬೈಕ್ ಗೆ ಬಣ್ಣದ ಪೆಟ್ಟಿಗೆಯನ್ನ ಇಟ್ಟು ಬರುತ್ತಿರೋದನ್ನು ಕಂಡು ಊರವರು ಐಸ್ ಕ್ಯಾಂಡಿ ಮಾರೋನು ಬರ್ತಿದ್ದಾನೆ ಅಂದುಕೊಂಡಿದ್ದರು. ಮಕ್ಕಳಿಗೂ ಕೂಡ ಇದು ಆಕರ್ಷಣೆ ಕೂಡ ಆಗಿತ್ತು. ಒಂದೊಂದು ಏರಿಯಾದಲ್ಲಿ ಸಭಾ ಭವನ, ಮನೆ ಅಂಗಳಕ್ಕೆ ಇವರು ಬಂದು ಮಕ್ಕಳಿಗೆ ಪಾಠ ಮಾಡಲು ಶುರು ಮಾಡಿದ್ರು. ಹೀಗಾಗಿ ಬನವಾಸಿ ಮತ್ತು ಸೊರಬ ತಾಲೂಕಿನ ಗಡಿ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಪಡೆಯತ್ತಿದ್ದಾರೆ.

ಶಿಕ್ಷಕ ಮಾರುತಿ


ಕೆಲ ಕಡೆಗಳಂತೆ ಬಹುತೇಕ ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಬರಲ್ಲ. ಹೀಗಾಗಿ ಮನೆ ಪಾಠ ಕೂಡ ತಲುಪುತ್ತಿರಲಿಲ್ಲ. ಪಾಲಕರು ಬಳಿ ಕೂಡ ಆಂಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳುವ ಶಕ್ತಿ ಕೂಡ ಇಲ್ಲ. ಹೀಗಾಗಿ ಆನ್ ಲೈನ್ ಪಾಠ ಕೂಡ ಇಲ್ಲಿನ ಮಕ್ಕಳಿಗೆ ಪಡೆಯಲು ಸಾಧ್ಯವಾಗ್ತಾ ಇರಲಿಲ್ಲ. ಹೀಗಾಗಿ ಮಕ್ಕಳ ಮನೆಗೆ ಭೇಟಿ ನೀಡಿದಾಗ ಅಕ್ಷರವೇ ಮರೆತಿದ್ದರು. ಮಕ್ಕಳು ಶಿಕ್ಷಣದಿಂದ ವಿಮುಖರಾಗಿ ಪಾಲಕರೊಂದಿಗೆ ಕೂಲಿ ಕೆಲಸಕ್ಕೆ ಹೋಗಲು ಆಸಕ್ತರಾಗಿದ್ದರು. ಇದನ್ನ ಗಮನಿಸಿ ಮಾರುತಿ ಅವರು ಶಿಕ್ಷಣದ ಹೊಸ ಮಾರ್ಗವನ್ನ ಕಂಡುಕೊಂಡರು. ಆರಂಭದಲ್ಲಿ ಬರಿಗೈಯಲ್ಲಿ ಮಕ್ಕಳ ಮನೆಗೆ ಹೋದಾಗ ತಿಳಿಸಿ ಹೇಳುವುದು ಕಷ್ಟವಾಯಿತು. ಬಳಿಕ ಪಾಠೋಪಕರಣದ ಜೊತೆ ಹೋದಾಗ ಮಕ್ಕಳು ಉತ್ಸುಕರಾದರು. ಕಲಿಕಾ ಸಾಮಾಗ್ರಿಗಳಾದ ರಟ್ಟಿನ ಚಾರ್ಟ್, ಲೆಕ್ಕ ಮಾಡುವ ಕಡ್ಡಿ, ಮಣಿಗಳು, ಗಣಿತದ ಕಿಟ್ ಎಲ್ಲವನ್ನ ತಮ್ಮ ಹಳದಿ ಬಣ್ಣದ ಬಾಕ್ಸ್ ನಲ್ಲಿ ತುಂಬಿಕೊಂಡು ಹೋದಾಗ ಬೈಕ್ ಹಾರ್ನ್ ಕೇಳಿ ಮಕ್ಕಳು ಓಡೋಡಿ ಬರ್ತಿದ್ದಾರೆ. ಮಕ್ಕಳಿಗೂ ಕೂಡ ಶಾಲೆಯಲ್ಲಿ ಕುಳಿತು ಶಿಕ್ಷಣ ಪಡೆದ ಅನುಭವವಾಗುತ್ತಿದೆ.

ಇದನ್ನು ಓದಿ: ಮತದಾನದ ಬಳಿಕ ಎಲ್ಲೆಂದರಲ್ಲೆ ಎಸೆದಿರುವ ಹ್ಯಾಂಡ್ ಗ್ಲೌಸ್: ಸ್ಥಳೀಯ ನಿವಾಸಿಗಳಲ್ಲಿ ಆತಂಕ
Youtube Video

ಸ್ಕೌಟ್ ಮತ್ತು ಗೈಡ್ಸ್ ನಲ್ಲೂ ಸಕ್ರೀಯವಾಗಿರುವ ಶಿಕ್ಷಕ ಮಾರುತಿ ಉಪ್ಪಾರ ಯಾವುದೇ ಫಲಾಪೇಕ್ಷೆ ಇಲ್ಲದೇ ಊರೂರು ತಿರುಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಪಾಠ ಆರಂಭಿಸೋಕೆ ಮುಂಚೆ ಮಕ್ಕಳಿಗೆ ಅಗತ್ಯವಿರುವ ಸ್ಯಾನಿಟೈಜರ್, ತಾಪಮಾನ ಪರೀಕ್ಷೆ ಮಾಡುತ್ತಾರೆ. ಮಕ್ಕಳು ಕ್ರಿಯಾತ್ಮಕವಾಗಿರಬೇಕೆಂಬ ಕಾರಣಕ್ಕೆ ಮನೆಯಂಗಳದಲ್ಲಿ. ಸಭಾಭವನದಲ್ಲಿ ಮಕ್ಕಳೊಂದಿಗೆ ನಲಿಕಲಿ ಶಿಕ್ಷಣ ಮಾದರಿಯಲ್ಲಿ ನೃತ್ಯ ಮಾಡಿ ಹೆಜ್ಜೆ ಹಾಕಿ ಪಾಠ ಮಾಡುವುದು ಪಾಲಕರಿಗೂ ಕೂಡ ಖುಷಿ ತರುತ್ತಿದೆ. ಕೋವಿಡ್ 19 ಕಾರಣದಿಂದ ಶಾಲೆಗಳು ಪ್ರಾರಂಭವಾಗುವ ಇಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಇದೇ ಮಾದರಿಯಲ್ಲಿ ರಾಜ್ಯದ ಇತರೆಡೆ ಮೊಬೈಲ್ ಶಿಕ್ಷಣ ಆರಂಭಿಸಿದಲ್ಲಿ ಮಕ್ಕಳು ಕೊಂಚವಾದರೂ ವಿದ್ಯಾಭ್ಯಾಸ ಪಡೆಯಬಹುದಾಗಿದೆ.
Published by: HR Ramesh
First published: November 3, 2020, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories