ಪಾನಿಪೂರಿ ತಿನ್ನಬೇಕು ಎಂದು ಮಂತ್ರಾಲಯ ಸ್ವಾಮೀಜಿ ಬಳಿ ಬೇಡಿಕೆ ಇಟ್ಟ ವಿದ್ಯಾರ್ಥಿ; ಶ್ರೀಗಳು ಹೇಳಿದ್ದೇನು

ಮಂತ್ರಾಲಯದ ಶ್ರೀಗುರುಸಾರ್ವಭೌಮ ಪಾಠಶಾಲೆಯು ವರ್ಷ ವರ್ಷವು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಾಲೆಯಿದೆ. ಈ ಶಾಲೆಯಲ್ಲಿ ನಾಡಿನ ವಿವಿಧಡೆಯಿಂದ‌ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿಯುತ್ತಾರೆ. 

ಸ್ವಾಮೀಜಿ ಬಳಿ ವಿಶಿಷ್ಟ ಬೇಡಿಕೆ ಇಟ್ಟ ವಿದ್ಯಾರ್ಥಿ

ಸ್ವಾಮೀಜಿ ಬಳಿ ವಿಶಿಷ್ಟ ಬೇಡಿಕೆ ಇಟ್ಟ ವಿದ್ಯಾರ್ಥಿ

  • Share this:
ರಾಯಚೂರು(ಸೆಪ್ಟೆಂಬರ್​. 27): ಇಂದಿನ ಯುವಜನರು ಹಾಗು ಮಕ್ಕಳಿಗೆ ಬಹುತೇಕ ಆಕರ್ಷಣೆ ಪಾನಿಪುರಿ, ಉತ್ತರ ಭಾರತ ಸ್ನ್ಯಾಕ್ಸ್​ ಆಗಿರುವ ಪಾನಿಪುರಿಗೆ ಈಗ ಬಹು ಬೇಡಿಕೆ ಇದೆ. ಇಂಥದ್ದೇ ಒಂದು ಬೇಡಿಕೆಯನ್ನು ಪುಟ್ಟ ವಿದ್ಯಾರ್ಥಿ ಸಲ್ಲಿಸಿದ್ದಾನೆ. ಅದು ಶಾಲೆಯ ಗುರುಗಳ ಬಳಿ ಅಲ್ಲ, ದೇಶದ ಪ್ರಸಿದ್ದ ಮಠದ ಸ್ವಾಮೀಜಿಗಳ ಬಳಿ, ವಿದ್ಯಾರ್ಥಿಯ ಬೇಡಿಕೆ ಕೇಳಿ ನಸುನಕ್ಕು ವಿದ್ಯಾರ್ಥಿಗಳೆಲ್ಲರಿಗೂ ಪಾನಿಪುರಿ ವಿತರಿಸಿದ ಘಟನೆ ನಡೆದಿದೆ. ಇಂಥ ಒಂದು ಬೇಡಿಕೆ ಕೇಳಿ ಬಂದಿದ್ದು ಭಕ್ತರ ಕಾಮಧೇನು, ಕಲ್ಪವೃಕ್ಷ ಎಂದು ಕರೆಯುವ ಮಂತ್ರಾಲಯದ ಮಠದ ವೇದ ಪಾಠ ಶಾಲೆಯಲ್ಲಿ. 500 ವರ್ಷಗಳಗಿಂತಲೂ ಹಿಂದೆ ಅವತರಿಸಿದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಗಳ ಮಠವು ವೇದ, ಶಾಸ್ತ್ರ, ಪುರಾಣ, ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಯ ಪಾಠ ಮಾಡುವ ಕೇಂದ್ರವಾಗಿದ್ದು, ಹಿಂದು ಧರ್ಮದ ಬ್ರಾಹ್ಮಣ ಸಂಸ್ಕೃತಿಯ ಆಚರಣೆಗಳು, ಕೀರ್ತನೆ, ಪುರಾಣಗಳನ್ನು ಕಲಿಸುವ ಕೇಂದ್ರವಾಗಿದೆ. ಈ ಪರಂಪರೆ ಹಿಂದಿನಿಂದಲೂ ಇದೆ.

ಮಂತ್ರಾಲಯದ ಶ್ರೀಗುರುಸಾರ್ವಭೌಮ ಪಾಠಶಾಲೆಯು ವರ್ಷ ವರ್ಷವು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಾಲೆಯಿದೆ. ಈ ಶಾಲೆಯಲ್ಲಿ ನಾಡಿನ ವಿವಿಧಡೆಯಿಂದ‌ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿಯುತ್ತಾರೆ. ಅವರಿಗೆ ಊಟ, ವಸತಿ ನೀಡಿ ಪಾಠವನ್ನು ಸಹ ಮಾಡಲಾಗುತ್ತಿದೆ. ಈಗ ಪಾಠ ಶಾಲೆಯಲ್ಲಿ ಒಟ್ಟು 100 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪಾಠ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ರುಚಿಕಟ್ಟಾದ ಅಡುಗೆ ಮಾಡಿ ಬಡಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಕೆಲವು ಬಾರಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ‌ ಮಠದ ಈಗಿನ ಪೀಠಾಧಿಪತಿಗಳಾದ ಶ್ರೀಸುಭುದೇಂದ್ರ ತೀರ್ಥರು ಭೇಟಿ ನೀಡಿ ವಿದ್ಯಾರ್ಥಿಗಳ ಬೇಕು ಬೇಡಗಳನ್ನು ಕೇಳುತ್ತಾರೆ, ಅದರಂತೆ ಕಳೆದ ಗುರುವಾರ ಪಾಠಶಾಲೆಯ ಭೋಜನ ಸಂದರ್ಭದಲ್ಲಿ ಸ್ವಾಮಿಗಳು ಭೇಟಿ ನೀಡಿದಾಗ ಪುಟ್ಟ ಬಾಲಕ ವಿದ್ಯಾರ್ಥಿ ಗುರುಗಳ ಬಳಿ ಪಾನಿ ಪುರಿ ಬೇಡಿಕೆ ಇಟ್ಟಿದ್ದಾನೆ.

ನನಗೆ ಪಾನಿಪುರಿ ಬೇಕು ಎಂದಾಗ, ಸ್ವಾಮಿಗಳು "ಹಾಂ ಏನುಬೇಕು " ಎಂದಿದ್ದಾರೆ ವಿದ್ಯಾರ್ಥಿ ಪಾನಿಪುರಿ ಎಂದು ಮತ್ತೆ ಉಚ್ಛರಿಸಿದ್ದಾನೆ. ಪಾನಿಪುರಿ ಬೇಕು ಎಂದು ಬೇಡಿಕೆ ಇಟ್ಟ ವಿದ್ಯಾರ್ಥಿ ಬೇಡಿಕೆಗೆ ನಸುನಕ್ಕು ಸ್ವಾಮಿಗಳ ತಕ್ಷಣ ಅಡುಗೆ ತಯಾರಿಸುವವರನ್ನು ಕರೆದು ಪಾನಿಪುರ ಮಾಡಿ ಕೊಡಿ ಎಂದು ಹೇಳಿದ್ದಾರೆ. ಯಾವಾಗ ಮಾಡುತ್ತೀಯಾ ಎಂದು ಸಹ ಕೇಳಿದ್ದಾರೆ. ನಾಳೆಯೇ ಮಾಡುವುದಾಗಿ ಅಡುಗೆಯವರು ಹೇಳಿದ್ದರು. ಸ್ವಾಮಿಗಳ ಸೂಚನೆಯ ಸಿಗುತ್ತಿದ್ದಂತೆ ಶುಕ್ರವಾರ ವಿದ್ಯಾರ್ಥಿಗಳಿಗೆ ಭರ್ಜರಿಯಾಗಿ ಪಾನಿಪುರಿ ತಯಾರಿಸಿ ಉಣಬಡಿಸಲಾಗಿದೆ.

ಇದನ್ನೂ ಓದಿ : ಅವರು ತೇಜಸ್ವಿ ಸೂರ್ಯ ಅಲ್ಲ, ಅಮವಾಸ್ಯೆ ಸೂರ್ಯ; ಬಿಜೆಪಿ ಸಂಸದನ ವಿರುದ್ಧ ಡಿಕೆಶಿ ಗುಡುಗು

ಒಬ್ಬ ವಿದ್ಯಾರ್ಥಿಯ ಬೇಡಿಕೆಯಿಂದಾಗಿ ಉಳಿದವರಿಗೂ ಪಾನಿಪುರಿ ಸಿಕ್ಕಿದೆ. ಎಲ್ಲರಿಗೂ ಪಾನಿಪುರಿ ತಿನ್ನುವ ಆಸೆ ಇರುತ್ತೆ. ಆದರೆ ಅದನ್ನು ಅಭಿವ್ಯಕ್ತಿಗೊಳಿಸದೆ ಮನಸ್ಸಿನಲ್ಲಿ ಮಂಡಗಿ ತಿನ್ನುತ್ತಿರುತ್ತಾರೆ. ಈ ಮಧ್ಯೆ ಒಬ್ಬ ವಿದ್ಯಾರ್ಥಿ ತನ್ನ ಬೇಡಿಕೆಯನ್ನು ಕೇಳಿ ಪಡೆದಿದ್ದಾನೆ. ಆತನೊಂದಿಗೆ ಇತರರು ಪಡೆದಿದ್ದಾರೆ.ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಜೀವನವನ್ನು ಕಟ್ಟುನಿಟ್ಟಾಗಿ ನಡೆಸುವ ಪಾಠ ಇರುವದರಿಂದ ಸಾಮಾನ್ಯವಾಗಿ ಇಲ್ಲಿಯ ವಿದ್ಯಾರ್ಥಿಗಳು ಬೀದಿ ಬದಿಯ ತಿಂಡಿ ತಿನಿಸು ತಿನ್ನುವುದು ಕಡಿಮೆ. ಇಂಥ ಸಂದರ್ಭದಲ್ಲಿ ಪಾನಿಪುರಿ ಆಸೆ ಪಡುವುದು ಸಹಜ, ಈ ಬಯಕೆಯನ್ನು ಈಡೇರಿಸಲಾಗಿದೆ. ಪಾನಿಪುರಿ ಕೇಳಿ, ಪಾನಿಪುರಿ ತಿನ್ನುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
Published by:G Hareeshkumar
First published: