ಕೊರೋನಾ ರೋಗಿಗಳ ಚಿಕಿತ್ಸೆಗೆ ರಾಯಚೂರಿನಲ್ಲಿ ಸಿದ್ದವಾಯಿತು ನೈಸರ್ಗಿಕವಾಗಿ ಆಮ್ಲಜನಕ ಉತ್ಪಾದಿಸುವ ಆಸ್ಪತ್ರೆ

ಈ ಆಸ್ಪತ್ರೆಯು ಖಾಸಗಿಯವರು ಕೋವಿಡ್ ಪೇಷಂಟ್ ಗೆ ತೆಗೆದುಕೊಳ್ಳುವ ದರಗಿಂತ ಶೇ. 50 ರಷ್ಟು ಕಡಿಮೆ ದರ ನಿಗಿದಿ ಮಾಡಲಾಗಿದೆ. ಇಂಥ ಆಸ್ಪತ್ರೆಯನ್ನು ಮೂರು ದಿನಗಳ ಹಿಂದೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಿದ್ದಾರೆ. ಕೋವಿಡ್ ಅಬ್ಬರಿಸುವಾಗ ಆಶಾದಾಯಕವಾಗಿ ಈ ಆಸ್ಪತ್ರೆಯು ಆರಂಭವಾಗಿದ್ದು ಭರವಸೆ ಉಂಟು ಮಾಡಿದೆ.

ರಾಯಚೂರಿನಲ್ಲಿ ಆರಂಭವಾಗಿರುವ ಆಸ್ಪತ್ರೆಯ ಬೆಡ್ ವ್ಯವಸ್ಥೆ

ರಾಯಚೂರಿನಲ್ಲಿ ಆರಂಭವಾಗಿರುವ ಆಸ್ಪತ್ರೆಯ ಬೆಡ್ ವ್ಯವಸ್ಥೆ

  • Share this:
ರಾಯಚೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಅಬ್ಬರಿಸುತ್ತಿದೆ. ಕೊರೋನಾ ಸೋಂಕಿತರಿಗೆ ಈಗ ಆಮ್ಲಜನಕ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಆಮ್ಲಜನಕದ್ದೆ ದೊಡ್ಡ ಸಮಸ್ಯೆಯಾಗಿದೆ. ಆದರೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸುಸಜ್ಜಿತ ನೈಸರ್ಗಿಕ ಆಮ್ಲಜನಕ ಹೊಂದಿರುವ ಕೋವಿಡ್ ಆಸ್ಪತ್ರೆ ಈಗ ಉದ್ಘಾಟನೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಶೇ 18 ಕ್ಕಿಂತ ಅಧಿಕ ಪಾಸಿಟಿವಿ ದರವಿದೆ. ಇದೇ ಸಂದರ್ಭದಲ್ಲಿ ನಿತ್ಯ 800 ಕ್ಕೂ ಅಧಿಕ ಜನರಿಗೆ ಸೋಂಕು ತಗುಲುತ್ತಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಆಸ್ಪತ್ರೆ, ಅವಶ್ಯವಿರುವವರಿಗೆ ಆಕ್ಸಿಜನ್ ಒದಗಿಸಲು ಜಿಲ್ಲಾಡಳಿತ ಹೆಣಗಾಡುತ್ತಿದೆ. ಇಂಥ ಸಂದರ್ಭದಲ್ಲಿ ಈ ಆಸ್ಪತ್ರೆ ಗಮನ ಸೆಳೆಯುತ್ತಿದೆ.

ಕೊರೋನಾ ಎರಡನೆಯ ಅಲೆಯು ಇಂದಿನ ಅಲೆಗಿಂತ ಬೇಗ ಹರಡುತ್ತಿದೆ. ರೂಪಾಂತರಿ ಕೊರೋನಾವು ಈಗ ನಾನಾ ರೂಪದಲ್ಲಿ ಹರಡುತ್ತಿದೆ. ಈ ಬಾರಿಯ ಕೊರೋನಾ ಅಲೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಮುಖ್ಯಕಾರಣ ಸಕಾಲಕ್ಕೆ ಆಮ್ಲಜನಕ ಸಿಗದೆ ಇರುವುದು. ಆಮ್ಲಜನಕ ಸಿಗದೆ ಚಾಮರಾಜನಗರ, ಕಲಬುರಗಿ ಸೇರಿದಂತೆ ಹಲವು ಕಡೆ ದುರಂತವೇ ನಡೆದಿದೆ. ಈ ಮಧ್ಯೆ ಆಮ್ಲಜನಕವನ್ನು ನೈಸರ್ಗಿಕವಾಗಿಯೇ ಪಡೆದು ಸೋಂಕಿತರಿಗೆ ನೀಡುವ ಹವಾನಿಯಂತ್ರಿತ, ಶುದ್ದ ಆಮ್ಲಜನಕಯುಕ್ತ ವಿಶೇಷ ಕೋವಿಡ್ ಆಸ್ಪತ್ರೆಯೊಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆರಂಭವಾಗಿದೆ.

ಸಿಂಧನೂರು ಮೂಲದ ಸುಕೊ ಬ್ಯಾಂಕ್ ಸ್ಥಳೀಯ ಐಎಂಎ, ಜನತಾ ಸೌಹಾರ್ದ ಸಹಕಾರ ಬ್ಯಾಂಕ್ ಸೇರಿದಂತೆ ವಿವಿಧ ಸಂಘ ಹಾಗು ಜನರ ಸಹಕಾರದಲ್ಲಿ 30 ಹಾಸಿಗೆಯ ಆಸ್ಪತ್ರೆ ಸಿದ್ದವಾಗಿದೆ. ಈ ಆಸ್ಪತ್ರೆಯಲ್ಲಿ ಸಿಲೆಂಡರ್ ಅಥವಾ ಕಂಟೇನರ್​ಯುಕ್ತ ಆಮ್ಲಜನಕ ಬೇಕಿಲ್ಲ. ಭಾರತೀಯ ವೈದ್ಯ ಸಂಶೋಧನಾ ಸಂಸ್ಥೆಯಿಂದ ಪರವಾನಗಿ ಪಡೆದ ಕನ್ಸೆಟ್ರೆಟರ್ ಅಳವಡಿಸಲಾಗಿದೆ. ಒಟ್ಟು 6 ಯಂತ್ರಗಳಿಗೆ ಆರ್ಡರ್ ನೀಡಲಾಗಿದ್ದು, ಈಗ ನಾಲ್ಕು ಯಂತ್ರಗಳು ಬಂದಿವೆ. ಇವುಗಳು ಏಕಕಾಲಕ್ಕೆ ಇಬ್ಬರಂತೆ 24 ತಾಸು ಬಳಕೆ ಮಾಡಬಹುದು, ಒಂದು ತಿಂಗಳವರೆಗೂ ಅವಿತರವಾಗಿ ಯಂತ್ರಗಳನ್ನು ಹಾಕಬಹುದು. ವಿಶಿಷ್ಟವಾಗಿರುವ ವಿಶೇಷ ಕಲ್ಪನೆಯ ಆಸ್ಪತ್ರೆ ಕೋವಿಡ್ ಪೇಷಂಟ್ ಗಳಿಗಾಗಿ ಸಿದ್ದವಾಗಿದೆ. ಈ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಹಾಗು ನಿರಂತರ ಸೇವೆ ನೀಡುವ ಶೂಶ್ರಕಿಯರನ್ನು ನೇಮಿಸಲಾಗಿದೆ.

ಇದನ್ನು ಓದಿ: Corona Effect: ಮದುವೆಯಲ್ಲಿ ಸಾಮಾಜಿಕ ಅಂತರ; ಬಿದಿರಿನ ಕೋಲಿನಲ್ಲಿ ಹಾರ ಬದಲಾಯಿಸಿಕೊಂಡ ವಧು-ವರ!

ಈ ಆಸ್ಪತ್ರೆಯು ಖಾಸಗಿಯವರು ಕೋವಿಡ್ ಪೇಷಂಟ್ ಗೆ ತೆಗೆದುಕೊಳ್ಳುವ ದರಗಿಂತ ಶೇ. 50 ರಷ್ಟು ಕಡಿಮೆ ದರ ನಿಗಿದಿ ಮಾಡಲಾಗಿದೆ. ಇಂಥ ಆಸ್ಪತ್ರೆಯನ್ನು ಮೂರು ದಿನಗಳ ಹಿಂದೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಿದ್ದಾರೆ. ಕೋವಿಡ್ ಅಬ್ಬರಿಸುವಾಗ ಆಶಾದಾಯಕವಾಗಿ ಈ ಆಸ್ಪತ್ರೆಯು ಆರಂಭವಾಗಿದ್ದು ಭರವಸೆ ಉಂಟು ಮಾಡಿದೆ.

ಸಿಂಧನೂರು ಮೂಲದ ಸುಕೊ ಬ್ಯಾಂಕ್ ಮೊದಲಿನಿಂದಲೂ ಸಹಕಾರಿ ಬ್ಯಾಂಕುಗಳಲ್ಲಿ ಹೊಸತನವನ್ನು ಪರಿಚಿಸುತ್ತಾ, ಸಾಕಷ್ಟು ಸಾಧನೆ ಮಾಡಿದೆ. ಗ್ರಾಹಕರಿಗೆ ವಿಶಿಷ್ಟ ಸೇವೆಗಳಿಂದ ಗಮನ ಸೆಳೆಯುತ್ತಿರುವ ಸುಕೋ ಈಗ ಸುಸಜ್ಜಿತ ಆಸ್ಪತ್ರೆಯನ್ನು ಸಿಂಧನೂರಿನಲ್ಲಿ ಆರಂಭಿಸಿದೆ. ಸುಕೋ ಬ್ಯಾಂಕ್ ಕಲ್ಪನೆಯನ್ನು ರೂಪಿಸಿರುವ ಸಂಸ್ಥಾಪಕ, ಹಿರಿಯ ಸಹಕಾರಿ ವಿಧಾನಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಇವರ ಕಲ್ಪನೆ ಹಾಗು ಪರಿಶ್ರಮದಿಂದ ಈಗ ಸಿಂಧನೂರಿನಲ್ಲಿ ಆಸ್ಪತ್ರೆ ಆರಂಭವಾಗಿದೆ.
Published by:HR Ramesh
First published: