ವಯಸ್ಸಾದ ತಾಯಿ ಮೇಲೆ  ಮಗನ ಕ್ರೌರ್ಯ ವರ್ತನೆ; ಮನಬಂದಂತೆ ಥಳಿಸಿ ಎತ್ತಿ ಬಿಸಾಡಿದ ಕ್ರೂರಿ

ಅಪ್ಪಿ ಶೆಟ್ಟಿ ಸವಣಾಲು ಪ್ರದೇಶದ ಪ್ರಸಿದ್ಧ ಪ್ರಸೂತಿ ಮಾಡುವವರಾಗಿದ್ದು, ಸುಮಾರು 500 ಕ್ಕೂ ಹೆಚ್ಚು ಪ್ರಸೂತಿ ಕಾರ್ಯ ಮಾಡಿದ್ದಾರೆ. 500 ಮಕ್ಕಳನ್ನು ಭೂಮಿಗೆ ತಂದ ಮಹಾತಾಯಿಯ ಮಕ್ಕಳೇ ಇಳಿವಯಸ್ಸಿನಲ್ಲಿ ಹೊಡೆದಿದ್ದು, ಎಂತವರ ಕಲ್ಲು ಹೃದಯವನ್ನೂ ನೀರಾಗಿಸುವಂತೆ ಮಾಡಿದೆ.

news18-kannada
Updated:July 17, 2020, 6:55 PM IST
ವಯಸ್ಸಾದ ತಾಯಿ ಮೇಲೆ  ಮಗನ ಕ್ರೌರ್ಯ ವರ್ತನೆ; ಮನಬಂದಂತೆ ಥಳಿಸಿ ಎತ್ತಿ ಬಿಸಾಡಿದ ಕ್ರೂರಿ
ವೃದ್ದ ತಾಯಿಗೆ ಥಳಿಸುತ್ತಿರುವ ನಿರ್ದಯಿ ಮಗ
  • Share this:
ದಕ್ಷಿಣ ಕನ್ನಡ(ಜು.17): ಒಂಬತ್ತು ತಿಂಗಳು ಹೆತ್ತು ಹೊತ್ತು ಸಲಹಿದ ತಾಯಿಗೆ ಸ್ವಂತ ಮಗನೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕಂಠಪೂರ್ತಿ ಕುಡಿದು ಮೃಗೀಯನಂತೆ ವರ್ತಿಸಿದ್ದಾನೆ. ಹಲ್ಲೆ ನಡೆಸಿದ ದೃಶ್ಯಗಳನ್ನು ನೋಡಿದ್ರೆ ಎಂತವರಿಗೂ ಅಯ್ಯೋ ಪಾಪ ಎನ್ನುವಂತಿದೆ.

ಹೌದು, ಮನುಷ್ಯ ಎಷ್ಟೇ ಕೆಟ್ಟವನಾಗಿದ್ದರೂ ಹೆತ್ತ ತಾಯಿಯ ಮೇಲೆ ಎಂತವರಿಗೂ ಪ್ರೀತಿ ಇರುತ್ತದೆ. ಆದರೆ ಇವತ್ತು ನಾವು ಹೇಳುತ್ತಿರುವ ಈ ಘಟನೆಯಲ್ಲಿ ಹೆತ್ತ ಮಗನೇ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ‌. ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ಈ ಘಟನೆ ನಡೆದಿದೆ.

ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧ ತಾಯಿ ಅಪ್ಪಿ ಶೆಟ್ಟಿ ಮೇಲೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನುಷವಾಗಿ ಹಲ್ಲೆ ನಡೆಸಿ, ಎತ್ತಿ ಬಿಸಾಡಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ‌ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಲಾಕ್​ಡೌನ್​ ಸಂಕಷ್ಟದಿಂದ ಸ್ಥಗಿತಗೊಂಡ ರೈತರ ಸಾಲಮನ್ನಾ ಯೋಜನೆ

ಅಪ್ಪಿ ಶೆಟ್ಟಿ ಸವಣಾಲು ಪ್ರದೇಶದ ಪ್ರಸಿದ್ಧ ಪ್ರಸೂತಿ ಮಾಡುವವರಾಗಿದ್ದು, ಸುಮಾರು 500 ಕ್ಕೂ ಹೆಚ್ಚು ಪ್ರಸೂತಿ ಕಾರ್ಯ ಮಾಡಿದ್ದಾರೆ. 500 ಮಕ್ಕಳನ್ನು ಭೂಮಿಗೆ ತಂದ ಮಹಾತಾಯಿಯ ಮಕ್ಕಳೇ ಇಳಿವಯಸ್ಸಿನಲ್ಲಿ ಹೊಡೆದಿದ್ದು, ಎಂತವರ ಕಲ್ಲು ಹೃದಯವನ್ನೂ ನೀರಾಗಿಸುವಂತೆ ಮಾಡಿದೆ.

ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು,ಇದರಿಂದ ನೊಂದ ಅಸಹಾಯಕ‌ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಈ ದೃಶ್ಯಗಳು ವೈರಲ್ ಆಗ್ತಿದ್ದಂತೆ ಬೆಳ್ತಂಗಡಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಹಲ್ಲೆ ನಡೆಸಿದ ಮಗ ಶ್ರೀನಿವಾಸ ಶೆಟ್ಟಿ, ಮೊಮ್ಮಗ ಪ್ರದೀಪ್ ಶೆಟ್ಟಿ‌ ಹಾಗೂ ಇನ್ನೋರ್ವನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ‌ ಹಾಗೂ ಹಲ್ಲೆ ಪ್ರಕರಣದಡಿ ಕೇಸ್ ರಿಜಿಸ್ಟರ್ ಮಾಡಲಾಗಿದೆ.

ಸದ್ಯ ವೃದ್ಧೆಯನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಒಟ್ಟಿನಲ್ಲಿ ಮಗ ಹಾಗೂ ಮೊಮ್ಮಗ ನಡೆಸಿದ ಈ ಕೃತ್ಯವನ್ನು ಯಾರೂ ಕೂಡಾ ಒಪ್ಪುವಂತಿಲ್ಲ. ಈ ರೀತಿಯ ದುಷ್ಟರಿಗೆ ಕಠಿಣ ಶಿಕ್ಷೆಯಾಗಬೇಕಿದೆ.
Published by: Latha CG
First published: July 17, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading