• Home
  • »
  • News
  • »
  • district
  • »
  • ದಿನದ 24 ಗಂಟೆಯೂ ರೋಗಿಗಳ ಅನುಕೂಲಕ್ಕಾಗಿ ಉಚಿತ ಆಕ್ಸಿಜನ್ ಆಂಬುಲೆನ್ಸ್ ಸೇವೆ ನೀಡುತ್ತಿರುವ ಸಮಾಜ ಸೇವಕ

ದಿನದ 24 ಗಂಟೆಯೂ ರೋಗಿಗಳ ಅನುಕೂಲಕ್ಕಾಗಿ ಉಚಿತ ಆಕ್ಸಿಜನ್ ಆಂಬುಲೆನ್ಸ್ ಸೇವೆ ನೀಡುತ್ತಿರುವ ಸಮಾಜ ಸೇವಕ

ಸಮಾಜ ಸೇವಕ.

ಸಮಾಜ ಸೇವಕ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಒಬ್ಬ ಹೃದಯವಂತ ತರೀಕೆರೆಯ ಜನ ಸೇವೆಗೆ ಪಣ ತೊಟ್ಟು ನಿಂತಿದ್ದು, ಕೊರೋನಾ ರೋಗಿಗಳಿಗೆ ಅನುಕೂಲವಾಗಲೆಂದು ತಾಲೂಕು ಆಸ್ವತ್ರೆಗೆ ನಾಲ್ಕು ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

  • Share this:

ಚಿಕ್ಕಮಗಳೂರು : ಕಾಫಿನಾಡಿನ ಸಮಾಜ ಸೇವಕರೊಬ್ಬರು ಸಮಾಜ ಸೇವೆಗಾಗಿ ನಾಲ್ಕು ವೆಂಟಿಲೇಟರ್ ಆಂಬ್ಯುಲೆನ್ಸ್ ಕೊಡುಗೆ ನೀಡಿ ಸಾಮಾಜಿಕ ಕಳಕಳಿ ಮರೆದಿದ್ದಾರೆ. ಜಿಲ್ಲೆಯಲ್ಲೇ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ತರೀಕೆರೆ ತಾಲೂಕಿನ ಜನ ವೆಂಟಿಲೇಟರ್ ಅಂಬ್ಯುಲೆನ್ಸ್ ಇಲ್ದೆ ಪರದಾಡುತ್ತಿದ್ರು. ಇದನ್ನರಿತ  ಸಮಾಜ ಸೇವಕ ಕೊರೋನಾದಿಂದ ತೊಂದರೆ ಅನುಭವಿಸುತ್ತಿರೋ ಜನರ ನೆರೆವಿಗೆ ಧಾವಿಸಿದ್ದಾರೆ. ದಿನದ 24 ಗಂಟೆಯೂ ನಿರಂತರ 4 ಆಂಬ್ಯುಲೆನ್ಸ್ ಸೇವೆ ಸಲ್ಲಿಸಲಿದ್ದು ಇದರ ಸದುಪಯೋಗವನ್ನ ಜನರು ಪಡೆದುಕೊಳ್ಳಬೇಕು ಅಂತಿದ್ದಾರೆ. ಆ ಸಮಾಜ ಸೇವಕರ ಒಂದೊಳ್ಳೆ ಕೆಲಸದ ಸ್ಟೋರಿ ಇಲ್ಲಿದೆ ನೋಡಿ.


ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿರುವ ಎಲ್ಲಾ ಆಸ್ವತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿದೆ. ಇತ್ತ ಹಳ್ಳಿಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳು ಆಸ್ವತ್ರೆಗಳು ಬರಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕೆಲ ಹೃದಯವಂತರು ಜನ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ.


ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಒಬ್ಬ ಹೃದಯವಂತ ತರೀಕೆರೆಯ ಜನ ಸೇವೆಗೆ ಪಣ ತೊಟ್ಟು ನಿಂತಿದ್ದು, ಕೊರೋನಾ ರೋಗಿಗಳಿಗೆ ಅನುಕೂಲವಾಗಲೆಂದು ತಾಲೂಕು ಆಸ್ವತ್ರೆಗೆ ನಾಲ್ಕು ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ತರೀಕೆರೆಯ ಸಮಾಜ ಸೇವಕ ಗೋಪಿಕೃಷ್ಣ ಹಾಗೂ ಅವರ ಪತ್ನಿ ಅನುಸೂಯ ಗೋಪಿಕೃಷ್ಣ ತಾಲೂಕು ಆಸ್ವತ್ರೆಗೆ ನಾಲ್ಕು ವೆಂಟಿಲೇಟರ್ ಅಂಬುಲೆನ್ಸ್ ಗಳನ್ನು ನೀಡಿ ಸಮಾಜ ಮೆಚ್ಚು ವಂತಹ ಕೆಲಸ ಮಾಡಿದ್ದಾರೆ. ದಿನದ 24 ಗಂಟೆಯೂ ರೋಗಿಗಳಿಗೆ ಅನುಕೂಲವಾಗಲೆಂದು ಹಾಗೂ ಹೆಮ್ಮಾರಿ ಕೊರೋನಾ ಸೋಂಕಿನ ಅಂತ್ಯ ಕಾಣೋ ವರೆಗೂ ಈ ಆಂಬುಲೆನ್ಸ್ ಸೇವೆ ಸಾರ್ವಜ ನಿಕರಿಗೆ ಇರಲಿದೆ ಎಂದು ಗೋಪಿಕೃಷ್ಣ ಹೇಳಿದ್ದಾರೆ.


ಇದನ್ನೂ ಓದಿ: CoronaVirus: ಜೋಯಿಡಾದಲ್ಲಿ ದಿನ ದಿನಕ್ಕೆ ಏರುತ್ತಿದೆ ಸೋಂಕಿತರ ಸಂಖ್ಯೆ‌; ಹಳ್ಳಿಗಳಲ್ಲೂ ಆತಂಕದ ಛಾಯೆ!


ಇನ್ನು ತರೀಕೆರೆ ತಾಲೂಕಿನಲ್ಲಿ ಅತಿ ಹೆಚ್ಚು ಕೊರೋನಾ ಕೇಸ್ ಪತ್ತೆಯಾಗ್ತಿದ್ದು ರೋಗಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡಿದ್ದಾರೆ. ಇನ್ನು ಈ ಅಂಬುಲೆನ್ಸ್  ಗಳಲ್ಲಿ ಎಲ್ಲಾ ರೀತಿಯಾ ಸೌಲಭ್ಯಗಳು ಇದ್ದು, ದಿನದ 24 ಗಂಟೆಯಲ್ಲಿ ಯಾವುದೇ ಸಮಯದಲ್ಲಿ ಯಾರೇ ರೋಗಿಗಳು ಇವರಿಗೆ ಅಥವಾ ಆಸ್ವತ್ರೆಗ ಪೋನ್ ಮಾಡಿದರೇ ಉಚಿತವಾಗಿ ಅಂಬು ಲೆನ್ಸ್ ಸೇವೆ ಓದಗಿಸುತ್ತಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮಣಿಪಾಲ್ ಗೂ ರೋಗಿಗಳನ್ನು ಉಚಿತವಾಗಿ ಕರೆದುಕೊಂಡು ಹೋಗುವ ಹಾಗೂ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: Viral Video: ಉತ್ತರಪ್ರದೇಶದಲ್ಲಿ ನಿಲ್ಲದ ಗೋ ರಕ್ಷಕರ ಗೂಂಡಾ ವರ್ತನೆ; ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್!


ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವನ್ನು ಈ ಅಂಬುಲೆನ್ಸ್ ಹೊಂದಿದ್ದು, ದಿನದ 24 ಗಂಟೆಯೂ ರೋಗಿಗಳಿಗೆ ಅನುಕೂಲ ಆಗಲೆಂದು, ಹಾಗೂ ಈ ಸೋಂಕು ಕಡಿಮೆ ಆಗುವ ವರೆಗೂ ಈ ಕೆಲಸ ಮಾಡ ಲಿದ್ದೇವೆ ಅಂತಿದ್ದಾರೆ ಸಮಾಜ ಸೇವಕ ಗೋಪಿಕೃಷ್ಣ. ನಾಲ್ಕು ಆಂಬುಲೆನ್ಸ್‍ಗಳಿಗೂ ಯಾವುದೇ ತೊಂದರೆಯಾಗದಂತೆ 13 ಜನ ಸಿಬ್ಬಂದಿ ಗಳನ್ನೂ ನೇಮಕ ಮಾಡಿದ್ದಾರೆ. ದಿನದ 24 ಗಂಟೆಯೂ ಯಾವುದೇ ಸಮಯದಲ್ಲಾದರೂ ರೋಗಿಗಳು ಆಂಬುಲೆನ್ಸ್ ಅಥವ ಸರ್ಕಾರಿ ಆಸ್ವತ್ರೆಗೆ ಫೋನ್ ಮಾಡಿದರೇ ಉಚಿತವಾಗಿ ಆಂಬುಲೆನ್ಸ್ ಸೇವೆ ಒದಗಿಸಲಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಪತ್ನಿ ಅನಸೂಯ ಗೋಪಿಕೃಷ್ಣ ಕೂಡ ಸಾಥ್ ನೀಡಿದ್ದಾರೆ.


ಒಟ್ಟಾರೆ, ಕೊರೋನಾ ಹೆಮ್ಮಾರಿ ಆರ್ಭಟಕ್ಕೆ ಹಳ್ಳಿ ಹಳ್ಳಿಯ ಜನರು ನಲುಗಿ ಹೋಗಿದ್ದಾರೆ. ಹಳ್ಳಿಯಿಂದ ನಗರ ಪ್ರದೇಶಕ್ಕೆ ತೆರೆಳೋಕೆ ಆಗದೇ ಜನರು ಪರದಾಡುತ್ತಿದ್ರು, ಜನರ ಸೇವೆಗಾಗಿ ನಾಲ್ಕು ವೆಂಟಿಲೇಟರ್ ಅಂಬ್ಯುಲೆನ್ಸ್ ನೀಡಿ ಸಮಾಜಸೇವಕ ಗೋಪಿಕೃಷ್ಣ ಹೃದಯ ವಂತಿಕೆ ಮೆರೆದಿದ್ದಾರೆ. ಇವರ ಜನಪರ ಕಾಳಜಿಗೆ ತಾಲೂಕಿನ ಜ‌ನ ಕೂಡ  ಅಭಿನಂದನೆ ಸಲ್ಲಿಸಿದ್ದಾರೆ.

Published by:MAshok Kumar
First published: