• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Murder Case| ಮಂಡ್ಯ; ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿ ಮನೆಗೆ ಮರಳಿ ಹೆಂಡತಿಯ ಕತ್ತು ಸೀಳಿದ ಪಾಪಿ ಗಂಡ!

Murder Case| ಮಂಡ್ಯ; ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿ ಮನೆಗೆ ಮರಳಿ ಹೆಂಡತಿಯ ಕತ್ತು ಸೀಳಿದ ಪಾಪಿ ಗಂಡ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೊಲೆ ದರೋಡೆ ಪ್ರಕರಣದಲ್ಲಿ 10 ವರ್ಷ ಜೈಲಿನಲ್ಲಿದ್ದು, ಇತ್ತೀಚೆಗೆ ಮರಳಿ ಬಂದಿದ್ದ ಭೂಪ ಇದೀಗ ತನ್ನ ಸ್ವಂತ ಹೆಂಡತಿಯನ್ನೇ ಕತ್ತು ಕುಯ್ದು ಕೊಲೆ ಮಾಡಿ ಮತ್ತೆ ಜೈಲು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

  • Share this:

ಮಂಡ್ಯ (ಆಗಸ್ಟ್​ 22); ಆತ ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ ಹತ್ತು ವರ್ಷ ಜೈಲಿನಲ್ಲಿದ್ದ. ಆದ್ರೆ, ಇತ್ತೀಚೆಗೆ ಕಾರಾಗೃಹಗಳಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆ ಇನ್ಮುಂದಾದ್ರೂ ಒಳ್ಳೆ ಜೀವನ ನಡೆಸ್ಲಿ ಅಂತ ಆತನನ್ನ ಬಿಡುಗಡೆ ಮಾಡಲಾಗಿತ್ತು. ವಿಪರ್ಯಾಸ ಜೈಲಿನಿಂದ ಬಂದ ಈ ಭೂಪ ಇದೀಗ ತನ್ನ ಸ್ವಂತ ಹೆಂಡತಿಯನ್ನೇ ಕತ್ತು ಕುಯ್ದು ಕೊಲೆ ಮಾಡಿ ಮತ್ತೆ ಜೈಲು ಪಾಲಾಗಿದ್ದಾನೆ. ಹೌದು.. ಇಂತಾದ್ದೊಂದು ಘಟನೆ ನಡೆದಿರೋದು ಬೇರೆಲ್ಲೂ ಅಲ್ಲಾ ಸಕ್ಕರೆನಾಡು ಮಂಡ್ಯದ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ. ಕೊಲೆ ಆರೋಪಿಯನ್ನು ಶಿವರಾಜ್ ಅಲಿಯಾಸ್ ಪಿಚ್ಚಾ ಎಂದು ಗುರುತಿಸಲಾಗಿದೆ.


ಆರೋಪಿ ಶಿವರಾಜ್ ಅಲಿಯಾಸ್ ಪಿಚ್ಚಾ ಕಳೆದ 20 ವರ್ಷಗಳ ಹಿಂದೆ ತನ್ನ ಸ್ವಂತ ಅಕ್ಕನ ಮಗಳಾದ ರಾಣಿಯನ್ನ ಇಷ್ಟಪಟ್ಟು ಮದುವೆಯಾಗಿದ್ದ‌. ಬಳಿಕ ಇವ್ರ ಪ್ರೀತಿಗೆ ಒಂದು ಗಂಡು ಮಗು ಕೂಡ ಆಗತ್ತೆ. ಆ ಸಂದರ್ಭ ಈತ ಮತ್ತು ಈತನ ಪತ್ನಿ ರಾಣಿ ಕೂಲಿ ಕೆಲಸ ಮಾಡುತ್ತ. ಗ್ರಾಮದಲ್ಲಿ ಸುಖ ಜೀವನ ನಡೆಸಿದ್ದರು. ಹಣದ ಆಸೆಗೆ ಬಿದ್ದ ಶಿವರಾಜ್ ಅರ್ಚಕನೊಬ್ಬನನ್ನು ಕೊಲೆ ಮಾಡಿ ಕದ್ದ ಆಭರಣದ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪರಿಣಾಮ ಕಳೆದ ಹತ್ತು ವರ್ಷಗಳಿಂದ ಶಿವರಾಜ ಅಲಿಯಾಸ್ ಪಿಚ್ಚಾ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದ.


ಹತ್ತು ವರ್ಷಗಳ ಕಾಲ ಜೈಲು ಪಾಲಾಗಿದ್ದ ಶಿವರಾಜ ಕಳೆದ ಏಳೆಂಟು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ತನ್ನ ಗ್ರಾಮವಾದ ಕಲ್ಲುವೀರನಹಳ್ಳಿಗೆ ವಾಪಸ್ಸಾಗಿದ್ದ‌. ಈ ಸಂದರ್ಭ ತನ್ನ ಹೆಂಡತಿ ರಾಣಿ ಎಲ್ಲಿ ಅಂತ ತನ್ನ ತಾಯಿ ಪಾಪಮ್ಮಳನ್ನ ವಿಚಾರಿಸಿದ್ದ‌. ಹಿಗಾಗಿ ರಾಣಿ ಬಗ್ಗೆ ಮಾಹಿತಿ ನೀಡಿದ ಪಾಪಮ್ಮ ರಾಣಿ ಈಗ ಬೆಂಗಳೂರಿನಲ್ಲಿ ಇದ್ದಾಳೆ. ನೀನು ಜೈಲಿಗೆ ಹೋದ ಬಳಿಕ ಅವಳು ಕೂಡ ಬೆಂಗಳೂರಿಗೆ ಹೋದ್ಲು ಅಂತ ತಿಳಿಸಿದ್ದಾರೆ. ಹಿಗಾಗಿ ರಾಣಿಯ ಹುಡುಕಾಡಿದ ಶಿವರಾಜನಿಗೆ ಅದೊಂದು ದಿನ ಶಾಕ್ ಕಾದಿತ್ತು.


12 ವರ್ಷಗಳ ಹಿಂದೆ ಶಿವರಾಜ್ ಜೈಲು ಸೇರ್ತಿದ್ದಂತೆ ಇತ್ತ ರಾಣಿ ಬೆಂಗಳೂರು ಕಡೆ ಮುಖ ಮಾಡಿದ್ದಳು. ಮೊದಲು ತನ್ನ ತಮ್ಮನ ಮನೆಯಲ್ಲಿದ್ದ ರಾಣಿ ಹೇಗೋ ಸಣ್ಣಾ ಪುಟ್ಟ ಕೆಲಸ ಮಾಡ್ತ ಬದುಕು ನಡೆಸಿದ್ಲು. ಆದ್ರೆ ಇತ್ತೀಚೆಗೆ ರಾಣಿಗೆ ಬೇರೊಬ್ಬ ಗಂಡಸಿನ ಜೊತೆ ಸ್ನೇಹ ಬೆಳೆದಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಹಿಗಾಗಿ ರಾಣಿ ಗಂಡ ಶಿವರಾಜ ಬರುವ ಹೊತ್ತಿಗೆ ಸರಿಯಾಗಿ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಳು.


ಇನ್ನು ಇತ್ತ ರಾಣಿ ಗರ್ಭಿಣಿಯಾಗಿದ್ದನ್ನ ಕಂಡ ಶಿವರಾಜ ಶಾಕ್ ಆಗಿದ್ದ. ಇಷ್ಟಾದರೂ ಕೂಡ ನನಗೆ ನನ್ನ ಹೆಂಡತಿ ರಾಣಿ ಬೇಕೆ ಬೇಕು ಅಂತ ಹೇಳಿದ ಶಿವರಾಜ ಮಗುವಾಗೋ ವರೆಗೂ ಸುಮ್ಮನಾಗಿದ್ದ‌. ಬಳಿಕ ಮಗುವಾಗ್ತಿದ್ದಂತೆ, ಸ್ವಲ್ಪ ದಿನ ಕಳಿತಿದ್ದ ಹಾಗೆ ಆ ಮಗುವನ್ನ ಬೇರೊಬ್ಬರಿಗೆ ಕೊಡಿಸಿ. ತನ್ನ ರಾಣಿಯನ್ನ ಮತ್ತೆ ಕಲ್ಲುವೀರನಹಳ್ಳಿ ಗ್ರಾಮಕ್ಕೆ ಕರೆ ತಂದಿದ್ದ.


ಇದನ್ನೂ ಓದಿ: ಕಾಣೆಯಾಗಿದ್ದ ತಂಗಿ ರಕ್ಷಾಬಂಧನ ದಿನವೇ ಪತ್ತೆ; ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ ರಾಖಿ ಕಟ್ಟಿ ಸಂಭ್ರಮ


ಹೇಗೋ ರಾಣಿಯ ಮನವೊಲಿಸಿ ಕರೆತಂದ ಶಿವರಾಜ ಗ್ರಾಮದಲ್ಲಿ ತನ್ನ ಪತ್ನಿ ಜೊತೆ ಸಂಸಾರ ನಡೆಸಿದ್ದ. ಆದ್ರೆ ಈ ಮದ್ಯೆ ಶಿವರಾಜ ತನ್ನ ಪತ್ನಿ ಜೊತೆ ಪ್ರತಿ ದಿನ ಪ್ರಿಯಕರನ ವಿಚಾರವಾಗಿ ಕ್ಯಾತೆ ಆರಂಭಿಸಿದ್ದ‌. ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಕೂಡ ನಡಿತಿತ್ತು. ಇದರಿಂದ ಕೋಪಗೊಂಡ ಶಿವರಾಜ ಮೊನ್ನೆ ರಾತ್ರಿ ರಾಣಿ ಮಲಗಿದ್ದಾಗ ಆಕೆಯ ಕತ್ತನ್ನ ಸೀಳಿಬಿಟ್ಟಿದ್ಧಾನೆ.


ಬಳಿಕ ಯಾರಿಗೂ ಗೊತ್ತಾಗಬಾರದು ಅಂತ ಆಕೆಯ ಕತ್ತಿನಿಂದ ಚಿಮ್ಮಿದ ರಕ್ತವನ್ನ ಬಕೇಟೊಂದಕ್ಕೆ ತುಂಬಿದ್ದಾನೆ‌. ಯಾರಿಗೂ ತಿಳಿಯದಂತೆ ರಾತ್ರೋ ರಾತ್ರಿ ತನ್ನ ಮನೆಯ ಹಿಂಭಾಗ ಅರ್ಧ ಕಿ.ಮೀ. ನಷ್ಟು ದೂರದಲ್ಲಿ ರಾಣಿಯ ಮೃತ ದೇಹ ತೆಗೆದುಕೊಂಡು ಹೋಗಿ ಸತೀಶ್ ಎಂಬುವವರ ಜಮೀನಿನಲ್ಲಿ ಒಂದು ಅಡಿಯಷ್ಟು ಹಳ್ಳ ತೆಗೆದು ರಾಣಿಯ ಮೃತ ದೇಹ ಊತಿಟ್ಟು ಪರಾರಿಯಾಗಿದ್ದಾನೆ.


ಇದನ್ನೂ ಓದಿ: Afghanistan Crisis| ಅಫ್ಘನ್​ನಿಂದ ಮತ್ತಷ್ಟು ಭಾರತೀಯರ ರಕ್ಷಣೆ; 7 ಮಂದಿ ಕನ್ನಡಿಗರು ತಾಯ್ನಾಡಿಗೆ ವಾಪಸ್


ಆದರೆ, ನಿನ್ನೆ ಶನಿವಾರ ಕಲ್ಲು ವೀರನಹಳ್ಳಿ ಗ್ರಾಮಸ್ಥರು ಎಂದಿನಂತೆ ಬೆಳಗ್ಗೆ ಎದ್ದು ತಮ್ಮ ಜಮೀನಿನ ಕಡೆ ಮುಖ ಮಾಡಿದ್ದರು. ಆದ್ರೆ ತಮ್ಮ ಜಮೀನಿನ ಕಾಲು ದಾರಿಯಲ್ಲಿ ರಕ್ತ ಪತ್ತೆಯಾಗಿದೆ‌. ಈ ರಕ್ತ ಕಂಡ ಗ್ರಾಮಸ್ಥರಲ್ಲಿ ಆತಂಕ ಎದುರಾಗಿತ್ತು. ಈ ಬಳಿಕ ಆ ರಕ್ತದ ಜಾಡು ಇಡಿದು ಹೊರಟ ಗ್ರಾಮಸ್ಥರಿಗೆ ಕಾಣಿಸಿದ್ದು ಇದೆ ಶಿವರಾಜನ ಮನೆ. ಅಲ್ಲಿಗೆ ಗ್ರಾಮಸ್ಥರಲ್ಲಿ ಒಂದು ವಿಚಾರ ಸ್ಪಷ್ಟವಾಗಿತ್ತು. ಮೊದಲೆ ಜೈಲಿಗೆ ಹೋಗಿ ಬಂದಿದ್ದ ಶಿವರಾಜ ಅಲಿಯಾಸ್ ಪಿಚ್ಚಾ ಏನೋ ಒಂದು ಅನಾಹುತ ಮಾಡಿದ್ದಾನೆ ಅನ್ನೋದು ಗ್ರಾಮಸ್ಥರಿಗೆ ಮನವರಿಕೆ ಯಾಗಿತ್ತು.


ಹಿಗಾಗಿ ಶಿವರಾಜನ ಮನೆ ಒಕ್ಕಿ ನೋಡಲಾಗಿ ಬಕೆಟ್ ತುಂಬಾ ರಕ್ತ ಕಂಡು ಜನ ಬೆಚ್ಚಿ ಬಿದ್ದಿದ್ರು. ಅಷ್ಟರಲ್ಲಾಗಲೆ ಗ್ರಾಮಕ್ಕೆ ಮಳವಳ್ಳಿ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಸದ್ಯ ಮಳವಳ್ಳಿ ಪೊಲೀಸರು ಊತಿದ್ದ ರಾಣಿಯ ಮೃತ ದೇಹ ಹೊರ ತೆಗದು ಪಂಚನಾಮೆ ನಡೆಸಿದ್ದಾರೆ. ಅಲ್ಲದೆ, ಪರಾರಿಯಾಗಿದ್ದ ಶಿವರಾಜನನ್ನು ಬಂಧಿಸಿ ತನಿಖೆ ಕೈಗಿಂಡಿದ್ದಾರೆ.


(ವರದಿ - ಸುನೀಲ್ ಗೌಡ, ಮಂಡ್ಯ)

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು