HOME » NEWS » District » A SHEEP EAT THE SOIL AND STAY AWAY FROM THE DISEASE HK

ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ಔಷಧೀಯ ಗುಣ ; ಇಲ್ಲಿಯ ಮಣ್ಣನ್ನು ತಿಂದು ಕಾಯಿಲೆಯಿಂದ ದೂರವಿರುವ ಕುರಿಗಳು

ಕಪ್ಪತ್ತಗುಡ್ಡದಲ್ಲಿ ಔಷಧಿಯ ಗುಣವಿರುವ ಅಪಾರ ಪ್ರಮಾಣದ ಸಸಿಗಳು ಇರುವುದರಿಂದ ಅವುಗಳನ್ನು ತಿನ್ನುವುದರಿಂದ ಕುರಿಗಳು ಸಹ ಅರೋಗ್ಯವಾಗಿ ಇರುತ್ತವೆ. ಕುರಿಗಳಿಗೆ ಕ್ಯಾಲ್ಸಿಯಂ ಕಡಿಮೆಯಾದಾಗ ಉಪ್ಪು ಮಿಶ್ರಿತ ಮಣ್ಣು ಸೇವನೆ ಮಾಡುತ್ತವೆ.

news18-kannada
Updated:August 27, 2020, 7:17 AM IST
ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ಔಷಧೀಯ ಗುಣ ; ಇಲ್ಲಿಯ ಮಣ್ಣನ್ನು ತಿಂದು ಕಾಯಿಲೆಯಿಂದ ದೂರವಿರುವ ಕುರಿಗಳು
ಮಣ್ಣು ತಿನ್ನುತ್ತಿರುವ ಕುರಿ
  • Share this:
ಗದಗ(ಆಗಸ್ಟ್. 27): ಕುರಿ, ಮೇಕೆ ಸಹಜವಾಗಿ ಹುಲ್ಲು ತಿನ್ನುವುದನ್ನು ನಾವು ನೀವು ನೋಡಿರುತ್ತೇವೆ. ಆದರೆ, ಇಲ್ಲಿನ ಕುರಿ ಹಾಗು ಮೇಕೆಗಳು ಮಣ್ಣು ತಿನ್ನುತ್ತವೆ. ನಿಮಗೆ ಅಚ್ಚರಿ ಅನಿಸಿದರು ಇದು ಸತ್ಯ. ಈ ಮಣ್ಣು ತಿಂದ್ರೆ ಅವುಗಳಿಗೆ ಯಾವುದೇ ಕಾಯಿಲೆ ಇದ್ದರು ಅದು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿಯೇ ಇಲ್ಲಿನ ಕುರಿಗಾಯಿಗಳು ಕುರಿಗಳಿಗೆ ಮಣ್ಣು ತಿನ್ನಲು ಬಿಡುತ್ತಾರೆ. 

ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಾ ಕರೆಸಿಕೊಳ್ಳುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರಸಿದ್ದ ಪಡೆದಿದೆ. ಇಷ್ಟು ದಿನ ಕಪ್ಪತ್ತಗುಡ್ಡ ಕೇವಲ ಔಷಧಿಯ ಗಿಡಮೂಲಿಕಗಳಿಗೆ ಮಾತ್ರ ವಿಶೇಷ ಸ್ಥಾನ ಪಡೆದುಕೊಂಡಿದೆ ಅಂತ ನಾವೆಲ್ಲಾ  ಅಂದುಕೊಂಡಿದ್ದೀವಿ. ಆದರೆ, ಇದೇ ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ಔಷಧಿ ಗುಣವಿದೆ ಎನ್ನುವುದು ಯಾರಿಗಾದರೂ ಗೊತ್ತಾಗಿದೆನಾ ಇಲ್ಲಾ. ಆದರೆ, ಮನುಷ್ಯರಿಗೆ ಗೊತ್ತಾಗದ ಈ ಗುಣ ಕುರಿಗಳಿಗೆ ಗೊತ್ತಾಗಿದೆ ಅಂದ್ರೆ ನೀವು ನಂಬಲೇಬೇಕು.

ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ವಿಶೇಷ ಗುಣವಿದೆ. ಕುರಿಗಳು ಈ ಮಣ್ಣು ತಿಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿವೆ. ಕುರಿಗಾಹಿಗಳು ತಮ್ಮ ಕುರಿಗಳಿಗೆ ಅನಾರೋಗ್ಯಕ್ಕೆ ತುತ್ತಾದಾಗ ಕಪ್ಪತ್ತಗುಡ್ಡದ ಈ ಮಣ್ಣಿನ ಹತ್ತಿರ ಕರೆದುಕೊಂಡು ಬರುತ್ತಾರೆ ಹೀಗೆ ಬಂದ ಕುರಿಗಳು ಈ ಮಣ್ಣು ತಿಂದು ಹುಷಾರಾಗುತ್ತವೆ ಅಂತಾರೆ ಕುರಿಗಾಯಿ.

ಉಪ್ಪಿನಿಂದ ಕೂಡಿರುವ ಈ ಮಣ್ಣಿನಲ್ಲಿ ವಿವಿಧ ಖನಿಜಾಂಶಗಳನ್ನು ಸಹ ಹೊಂದಿದ್ದು ಎರಡು ಅಥವಾ ಮೂರು ದಿನಕ್ಕೊಮ್ಮೆ ಹೊಸಳ್ಳಿ ಬಳಿಯ ಈ ಕಪ್ಪತ್ತಗುಡ್ಡದಲ್ಲಿ ಮಧ್ಯದಲ್ಲಿ ಇರುವ ಚೂಜ ಮಡ್ಡಿಯಲ್ಲಿ ಕುರಿಗಳನ್ನು ತಂದು ಇಲ್ಲಿಯ ಮಣ್ಣನ್ನು ತಿನಿಸುತ್ತಾರೆ. ಇದರಿಂದ ಕುರಿಗಳು ಹೊಟ್ಟೆ ನೋವು, ಜ್ವರ, ಹೀಗೆ ನಾನಾ ಕಾಯಿಲೆಗಳಿಂದ ಆರಾಮಾಗುತ್ತವೆ ಎಂಬುದು ಇಲ್ಲಿನ ಕುರಿಗಾಹಿಗಳ ನಂಬಿಕೆ. ಅದಲ್ಲದೇ ಪ್ರತಿ ದಿನ ಹುಲ್ಲು ತಿಂದು ಕುರಿಗಳು ಬಾಯಿ ಸವಳುಗಟ್ಟಿರುತ್ತವೆ. ಇದರಿಂದ ಬಾಯಿ ರುಚಿ ಹೆಚ್ಚಾಗುತ್ತದೆ. ಜೊತೆಗೆ ಹಲ್ಲುಗಳ ನೋವಿನ ಕಾಯಿಲೆ ಮಾಯವಾಗಿತ್ತದೆ ಅನ್ನೋದು ಕುರಿಗಾಯಿಗಳ ಮಾತು.

ಇದನ್ನೂ ಓದಿ : ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆ ವಾಪಸ್ ಪಡೆದ ಪ್ರವಾಹ ಸಂತ್ರಸ್ತರು.!

ಇನ್ನೂ ಕಪ್ಪತ್ತಗುಡ್ಡದಲ್ಲಿ ಔಷಧಿಯ ಗುಣವಿರುವ ಅಪಾರ ಪ್ರಮಾಣದ ಸಸಿಗಳು ಇರುವುದರಿಂದ ಅವುಗಳನ್ನು ತಿನ್ನುವುದರಿಂದ ಕುರಿಗಳು ಸಹ ಅರೋಗ್ಯವಾಗಿ ಇರುತ್ತವೆ. ಕುರಿಗಳಿಗೆ ಕ್ಯಾಲ್ಸಿಯಂ ಕಡಿಮೆಯಾದಾಗ ಉಪ್ಪು ಮಿಶ್ರಿತ ಮಣ್ಣು ಸೇವನೆ ಮಾಡುತ್ತವೆ. ಹಾಗಾಗಿ ಈ ಭಾಗದ ಕುರಿಗಳು ಸಹ ಮಣ್ಣು ತಿನ್ನುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಮಣ್ಣು ತಿಂದ್ರೆ ಏನು ಆಗುವುದಿಲ್ಲ. ಹೆಚ್ಚಿನ ಪ್ರಮಾಣದ ಮಣ್ಣು ತಿಂದ್ರೆ ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕುರಿಗಳಿಗೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಮಣ್ಣು ತಿನ್ನುತ್ತವೆ ಎಂದು ಗದಗ ಜಿಲ್ಲಾ ಪಶು ನಿರ್ದೇಶಕ  ಜಿ ಪಿ ಮನಗೂಳಿ ಹೇಳುತ್ತಾರೆ.
Youtube Video
ಕಪ್ಪತ್ತಗುಡ್ಡ ಹಲವು ವಿಸ್ಮಯಗಳ ಆಗರವಾಗಿದೆ ಎನ್ನುವುದಕ್ಕೆ ಕುರಿಗಳು ಮಣ್ಣು ತಿನ್ನುವುದು ಒಂದು ಉದಾಹರಣೆ. ಒಟ್ಟಿನಲ್ಲಿ ಸ್ಥಳೀಯ ಕುರಿಗಾಯಿಗಳು ಇಲ್ಲಿನ ಮಣ್ಣು ತಿಂದ್ರೆ ನಮ್ಮ ಕುರಿಗಳು ಅರೋಗ್ಯವಾಗಿ ಇರ್ತಾವೆ ಎನ್ನುವ ಬಲವಾದ ನಂಬಿಕೆ ಇಟ್ಟುಕೊಂಡಿರುವುದು ಮಾತ್ರ ಸತ್ಯ
Published by: G Hareeshkumar
First published: August 27, 2020, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories