ವಿಜಯಪುರದಲ್ಲಿ ರೌಡಿಶೀಟರ್​​ನ ಬರ್ಬರ ಹತ್ಯೆ; ಕೊಲೆಗೆ ಕಾರಣ ನಿಗೂಢ..!

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ನಿನ್ನೆ ರಾತ್ರಿ 11.30 ರಿಂದ 12 ಗಂಟೆಯ ಮಧ್ಯೆ ಸುಮಾರಿಗೆ ರೌಡಿಶೀಟರ್​​ ಸತೀಶ ನಾಗನೂರ ಪ್ರವೀಣ ದಾಬಾದಿಂದ ಮನೆಗೆ ಹೋಗುವಾಗ ಮೂರು ಜನ ಈ ಕೊಲೆ ಮಾಡಿದ್ದಾರೆ.  ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿಜಯಪುರ, (ಜು. 25): ನಾಗರ ಪಂಚಮಿಯ ದಿನ ನಡೆದ ರೌಡಿಶೀಟರ್ ಕೊಲೆ ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ.

ವಿಜಯಪುರ ನಗರದ ಆಶ್ರಮ ಬಳಿಯ ನಿವಾಸಿ ಸತೀಶ ನಾಗನೂರ(28) ಕೊಲೆಯಾದ ರೌಡಿ ಶೀಟರ್.  ನಿನ್ನೆ ರಾತ್ರಿ 11.30 ರಿಂದ 12 ಗಂಟೆ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ವಿಜಯಪುರದ ಸೋಲಾಪುರ ರಸ್ತೆಯ ರಿಂಗ್ ರೋಡ್ ಕ್ರಾಸ್ ನಿಂದ ಸಿದ್ಧಾರೂಢ ಮಠದ ರಸ್ತೆಯ ಬಳಿ ಈ ಘಟನೆ ನಡೆದಿದೆ.  ಕೊಲೆಯಾದ ವ್ಯಕ್ತಿಯನ್ನು ವಿಜಯಪುರ ನಗದ ಆಶ್ರಮ ಬಳಿಯ ನಿವಾಸಿ 28 ವರ್ಷದ ಸತೀಶ ನಾಗನೂರ ಎಂದು ಗುರುತಿಸಲಾಗಿದೆ.

ವಿಷಯ ತಿಳಿದ ವಿಜಯಪುರ ನಗರದ ಆದರ್ಶ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ನಿನ್ನೆ ರಾತ್ರಿ 11.30 ರಿಂದ 12 ಗಂಟೆಯ ಮಧ್ಯೆ ಸುಮಾರಿಗೆ ರೌಡಿಶೀಟರ್​​ ಸತೀಶ ನಾಗನೂರ ಪ್ರವೀಣ ದಾಬಾದಿಂದ ಮನೆಗೆ ಹೋಗುವಾಗ ಮೂರು ಜನ ಈ ಕೊಲೆ ಮಾಡಿದ್ದಾರೆ.  ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

1-10ನೇ ತರಗತಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಎರಡು ಚಾನೆಲ್​​ಗಳ ಮೂಲಕ ಧ್ವನಿಮುದ್ರಿತ ಪಾಠ: ಸಚಿವ ಸುರೇಶ್ ಕುಮಾರ್

ಆದರ್ಶ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಂದ ಮತ್ತು ಆತನ ಸ್ನೇಹಿತರಿಂದ ಕೆಲವು ಮಾಹಿತಿ ಸಿಕ್ಕಿದೆ.  ಕೆಲವರ ಹೆಸರು ಗೊತ್ತಾಗಿದೆ.   ಈ ಕುರಿತು ಕೊಲೆ ಪ್ರಕರಣ ದಾಖಲಾಗಿದೆ.  ಈಗ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣಕಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ.  ಕೆಲವರನ್ನು ವಿಚಾರಣೆಗೆ ಕರೆಯಲಾಗಿದೆ.  ಎರಡು ಮೂರು ವರ್ಷಗಳಿಂದ ಅವರ ಸ್ನೇಹಿತರಾದವರನ್ನು ವಿಚಾರಣೆಗೆ ಕರೆದಿದ್ದೇವೆ.  ಈ ಕೊಲೆಯ ಉದ್ದೇಶ ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.  ಎರಡು ವರ್ಷಗಳ ಹಿಂದೆ ಸತೀಶ ನಾಗನೂರ ಧಾಬಾವೊಂದರಲ್ಲಿ ಜಗಳವಾಡಿದ್ದ ಹಿನ್ನೆಲೆಯಲ್ಲಿ ರೌಡಿಶೀಟ್ ಓಪನ್ ಮಾಡಲಾಗಿದೆ.

ಆ ಬಳಿಕ ಆತನ ಚಟುವಟಿಕೆಗಳೇನು? ನಿನ್ನೆ ಯಾಕೆ ಕೊಲೆಯಾಗಿದೆ ಎಂಬುದರ ಕುರಿತು ಈಗ ತನಿಖೆ ನಡೆಸಲಾಗುತ್ತಿದೆ.  ಆತ ಹಣಕಾಸು ವ್ಯವಹಾರ ಹೊಂದಿದ್ದ ಎಂಬುದರ ಬಗ್ಗೆಯೂ ಮಾಹಿತಿ ಇದೆ.  ಒಟ್ಟಾರೆ ಈ ಕೊಲೆಗೆ ಏನು ಕಾರಣ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಅನುಪಮ ಅಗ್ರವಾಲ ತಿಳಿಸಿದ್ದಾರೆ.
Published by:Latha CG
First published: