Teach with Dolls: ಗೊಂಬೆಗಳಿಂದ ಮಕ್ಕಳಿಗೆ ಪಾಠ ಕಲಿಸುವ ಶಿಕ್ಷಕ, ಗಣಿತದ ಸೂತ್ರಕ್ಕೂ ಇಲ್ಲಿ ಗೊಂಬೆಗಳಿವೆ!

Retired Teacher uses dolls to educate kids: ಇಳಿವಯಸ್ಸಿನಲ್ಲಿ ಉತ್ಸಾಹದಿಂದ ಶಿಕ್ಷಣದಲ್ಲಿ ಆಟವಾಡಿಕೊಂಡು. ಗೊಂಬೆಗಳೊಂದಿಗೆ ಪಾಠ ಮಾಡುವ ಇವರ ಕಲೆ ನಿಜಕ್ಕೂ ಶ್ಲಾಘನೀಯವಾಗಿದೆ, ಈಗ ಲಾಕ್ ಡೌನ್ ಆಗಿರುವದರಿಂದ ಶಾಮಣ್ಣ ತಮ್ಮ ಮನೆಗೆ ಬರುವ ಮಕ್ಕಳಿಗೆ ಗೊಂಬೆಗಳೊಂದಿಗೆ ಪಾಠ ಮಾಡಿ ಮಾದರಿಯಾಗಿದ್ದಾರೆ.

ಶ್ಯಾಮಣ್ಣ ಮಾಸ್ತರ್ ಬಳಿ ಇರುವ ಗೊಂಬೆಗಳು

ಶ್ಯಾಮಣ್ಣ ಮಾಸ್ತರ್ ಬಳಿ ಇರುವ ಗೊಂಬೆಗಳು

  • Share this:
ಕೊಪ್ಪಳ: ಇವತ್ತು ನೌಕರಿಯಿಂದ ನಿವೃತ್ತರಾದರೆ (Retirement) ಸಾಕು, ಒಂದಿಷ್ಟು ಕಾಲ ಸುಖವಾಗಿರಬೇಕೆನ್ನುವವರು ಹೆಚ್ಚು. ಆದರೆ ಇಲ್ಲೊಬ್ಬ ನಿವೃತ್ತ ಶಿಕ್ಷಕರಿದ್ದಾರೆ, ಅವರು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ, ಗಣಿತ ಹಾಗು ಇಂಗ್ಲಿಷ್ (Science, Mathematics and English) ನಲ್ಲಿ ಗೊಂಬೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಾವಿರಾರು ಗೊಂಬೆಗಳು (Thousands of Dolls)ಇವರ ಬಳಿಯಲ್ಲಿವೆ. ಸುಮಾರು 17 ಲಕ್ಷ ರೂಪಾಯಿಯ ಗೊಂಬೆಗಳಿವೆ, ಈ ಗೊಂಬೆಗಳನ್ನು ಸಂಗ್ರಹಿಸಿ ಅದನ್ನೆ ಪಾಠಕ್ಕೆ (Teach) ಬಳಸಿಕೊಳ್ಳುತ್ತಿದ್ದಾರೆ,ರಾಶಿ ರಾಶಿ ಗೊಂಬೆಗಳನ್ನು ಹಾಕಿಕೊಂಡು ಅವುಗಳೊಂದಿಗೆ ಮಾಹಿತಿ ನೀಡುತ್ತಿರುವದು ನೋಡಿದವರು ಇದೇನೊ ಇಷ್ಟು ವರ್ಷವಾದರೂ ಇನ್ನೂ ಗೊಂಬೆಗಳೊಂದಿಗೆ ಆಟವಾಡುತ್ತಾರೆ ಎಂದರೆ ನಿಮ್ಮ ಊಹೆ ತಪ್ಪು ಕಾರಣ ಈ ರೀತಿಯ ಗೊಂಬೆಗಳೊಂದಿಗೆ ಆಟವಾಡುತ್ತಾ ಪಾಠ ಮಾಡುತ್ತಿರುವವರು ಕಳೆದ ಐದು ವರ್ಷದ ಹಿಂದೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾಗಿರುವ ಶಾಮಣ್ಣ ಕುಲಕರ್ಣಿ. 

ಸಾಮಾನ್ಯವಾಗಿ ಗೊಂಬೆಗಳೊಂದಿಗೆ ಆಟವಾಡುವುದು ಮಕ್ಕಳು, ಮಕ್ಕಳು ರಚ್ಚೆ ಹಿಡಿದಾಗ ಅವರನ್ನು ರಮಿಸಲು ಮಕ್ಕಳಿಗೆ ಆಟಿಕೆಯ ಗೊಂಬೆಗಳು ನೀಡುವುದು ವಾಡಿಕೆ, ಆದರೆ ಇಲ್ಲಿ ವಯೋವೃದ್ದರೆ ಆಟಿಕೆ ಗೊಂಬೆಗಳನ್ನು ಹಿಡಿದು ಆಟವಾಡುತ್ತಾರೆ, ಈ ಆಟದಲ್ಲಿ ವೈಜ್ಞಾನಿಕ ಹಿನ್ನೆಲೆ, ಇಂಗ್ಲಿಷ್ ಪದಗಳ ಜೋಡಣೆ, ಗ್ರಾಮರ್ ಹಾಗು ಗಣಿತದ ವಿಷಯಗಳು ಅವರಿಗೆ ಪಾಠವಾಗಿವೆ.

ನಿವೃತ್ತರಾದ ನಂತರವೂ ಮುಂದುವರೆದ ಶಿಕ್ಷಣ

ಶಾಮಣ್ಣ ಕುಲಕರ್ಣಿ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಕಳೆದ 35 ವರ್ಷದ ಹಿಂದೆ ವಿಜ್ಙಾನ ಶಿಕ್ಷಕರಾಗಿ ಸೇವೆ ಸೇರಿದ್ದರು, ಕಳೆದ ಐದು ವರ್ಷಗಳ ಹಿಂದೆ ಸೇವೆ ನಿವೃತ್ತರಾಗಿದ್ದಾರೆ, ನಿವೃತ್ತರಾದ ನಂತರ ಅವರು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ವಾಸವಾಗಿದ್ದಾರೆ, ನಿವೃತ್ತರಾದ ನಂತರವೂ ಅವರು ಈಗಲೂ ಶಾಲೆಗಳಿಗೆ ಹೋಗಿ ವಿಜ್ಞಾನ, ಗಣಿತ ಹಾಗು ಇಂಗ್ಲಿಷ್ ಪಾಠಗಳನ್ನು ಮಾಡುತ್ತಾರೆ.

A retired government school teacher in Koppala teaches english maths and science using dolls worth lakhs
ಗೊಂಬೆಗಳ ಮೂಲಕ ಪಾಠ ಹೇಳುವ ಶ್ಯಾಮಣ್ಣ ಕುಲಕರ್ಣಿ ಮಾಸ್ತರ್


ಲಕ್ಷಾಂತರ ರೂಪಾಯಿ ಬೆಲೆಬಾಳುವ ಗೊಂಬೆಗಳು

ಈ ಮೂರು ವಿಷಯಗಳು ವಿದ್ಯಾರ್ಥಿಗಳಿಗೆ ಕಷ್ಟದ ವಿಷಯವಾಗಿವೆ, ಆದರೆ ಈ ವಿಷಯಗಳನ್ನು ಆಟವಾಡುತ್ತಾ ಕಲಿಯುವ ವಿಧಾನವನ್ನು ಅವರು ಕಲಿಸುತ್ತಿದ್ದಾರೆ, ಅವರಲ್ಲಿ ವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಖರೀದಿಸಿದ್ದಾರೆ, ಖರೀದಿಸಿದ ಗೊಂಬೆಗಳಿಂದ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುತ್ತಾರೆ.ಅವರ ಬಳಿಯಲ್ಲಿ ಇಂಗ್ಲಿಷ್ ಹಾಗು ಗಣಿತ ಕಲಿಸುವ ಸುಮಾರು 12 ಲಕ್ಷ ಮೌಲ್ಯದ ಗೊಂಬೆಗಳು. ವಿಜ್ಞಾನಕ್ಕೆ ಸಂಬಂಧಿಸಿ ಸುಮಾರು 4.50 ಲಕ್ಷ ರೂಪಾಯಿ ಗೊಂಬೆಗಳಿವೆ, ಈ ಗೊಂಬೆಗಳ ಕುಷ್ಟಗಿ ಬಸ್ ನಿಲ್ದಾಣದ ಬಳಿಯಲ್ಲಿ ಲ್ಯಾಬ್ ಮಾಡಿಕೊಂಡಿದ್ದಾರೆ.

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗೊಂಬೆಯಲ್ಲಿದೆ

ಕುಷ್ಟಗಿ, ಇಲಕಲ್, ಹುನಗುಂದದಲ್ಲಿ ವಿಶೇಷ ಗೊಂಬೆಗಳು ಅಂಗಡಿಗಳಿಗೆ ಬಂದರೆ ತಕ್ಷಣವೇ ಶಾಮಣ್ಣರಿಗೆ ಮಾಹಿತಿ ನೀಡಲಾಗುತ್ತಿದೆ. ಅವರನ್ನು ಗೊಂಬೆ ಮಾಸ್ತರ ಎಂದೇ ಕರೆಯುತ್ತಾರೆ. ಫೆಥಾಗೋರಸ್ ನ ಪ್ರಮೇಯ., ಲಸಾಅ . ಮಸಾಅ ಗಳು, ನ್ಯೂಟಿನ್ ನ ನಿಯಮಗಳು ಹೀಗೆ ಎಲ್ಲಾ ವಿಷಯಗಳನ್ನು ಬಹಳ ಸರಳವಾಗಿ ಹೇಳುತ್ತಾರೆ, ಅವರು ಸೇವೆಯಲ್ಲಿದ್ದಾಗ ಹಾಗು ಈಗಲೂ ಸಹ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

A retired government school teacher in Koppala teaches english maths and science using dolls worth lakhs
ಮಕ್ಕಳಿಗೆ ಸರಳವಾಗಿ ಪಾಠ ಹೇಳಲು ಗೊಂಬೆಗಳ ಸಹಾಯ


ಇಳಿವಯಸ್ಸಿನಲ್ಲಿ ಉತ್ಸಾಹದಿಂದ ಶಿಕ್ಷಣದಲ್ಲಿ ಆಟವಾಡಿಕೊಂಡು. ಗೊಂಬೆಗಳೊಂದಿಗೆ ಪಾಠ ಮಾಡುವ ಇವರ ಕಲೆ ನಿಜಕ್ಕೂ ಶ್ಲಾಘನೀಯವಾಗಿದೆ, ಈಗ ಲಾಕ್ ಡೌನ್ ಆಗಿರುವದರಿಂದ ಶಾಮಣ್ಣ ತಮ್ಮ ಮನೆಗೆ ಬರುವ ಮಕ್ಕಳಿಗೆ ಗೊಂಬೆಗಳೊಂದಿಗೆ ಪಾಠ ಮಾಡಿ ಮಾದರಿಯಾಗಿದ್ದಾರೆ. ಹೀಗೆ ಸಾಮಾನ್ಯ ಆಟಿಕೆಗಳು ಸಹ ಪಾಠ ಮಾಡುವ ಶಿಕ್ಷಕರು ಮಾದರಿಯಾಗಿದ್ದಾರೆ.
Published by:Soumya KN
First published: