HOME » NEWS » District » A RECORD 52 PERCENTAGE FINGER MILLET IN THE BANGALORE RURAL DISTRICT ANLM MAK

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಶೇ.52 ರಷ್ಟು ದಾಖಲೆಯ ಹಿಂಗಾರು ರಾಗಿ ಬಿತ್ತನೆ!

ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರೂ ಸಹ ಕೆರೆಕುಂಟೆಗಳಲ್ಲಿ ಹೆಚ್ಚು ನೀರು ಶೇಖರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ  ಗ್ರಾಮಾಂತರ ಭಾಗದಲ್ಲಿ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ರೈತರು ಹಿಂಗಾರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

news18-kannada
Updated:January 20, 2021, 4:07 PM IST
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ಶೇ.52 ರಷ್ಟು ದಾಖಲೆಯ ಹಿಂಗಾರು ರಾಗಿ ಬಿತ್ತನೆ!
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು ಗ್ರಾಮಾಂತರ (ಜನವರಿ. 16): ಜಿಲ್ಲೆಯಲ್ಲಿ ಈ ಭಾರಿ ಮುಂಗಾರು ಬಿತ್ತನೆ ಕೆಲಸ ವಾರ್ಷಿಕ ಗುರಿಗಿಂತ ಹೆಚ್ಚಾಗಿದ್ದು, ಹಿಂಗಾರು ಬಿತ್ತನೆ ಕಾರ್ಯ  ವಾರ್ಷಿಕ ಗುರಿಗಿಂತ ಕಡಿಮೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕಿನಲ್ಲಿ ಹಿಂಗಾರು ಬಿತ್ತನೆ ಮಾಡುವಲ್ಲಿ ರೈತರು ನಿರುತ್ಸಾಹ ತೋರಿದ್ದಾರೆ ಎಂದು ತಿಳಿದು ಬಂದಿದೆ. ಅರ್ಧದಷ್ಟು ಗುರಿ ತಲುಪಿದ ಬಿತ್ತನೆ: ಮುಂಗಾರು ಬಿತ್ತನೆಯಲ್ಲಿ  ರಾಗಿ 41338 ಹೆಕ್ಟೆರ್, ಮುಸುಕಿನ ಜೋಳ 10622 ಹೆ ಬಿತ್ತನೆ ಮಾಡಲಾಗಿತ್ತು. ಆದರೆ ಹಿಂಗಾರು ವಾರ್ಷಿಕ ರಾಗಿ ಬಿತ್ತನೆ ಗುರಿ 210 ಹೆಕ್ಟೇರ್ ಇದ್ದು, 101 ಹೆ. ಬಿತ್ತನೆಯಾಗಿದ್ದು, ಶೇ  52 ರಷ್ಟು ಮಾತ್ರ ಗುರಿ ತಲುಪಿದ್ದಾರೆ. ದೊಡ್ಡಬಳ್ಳಾಪುರದಲ್ಲಿ 31 ಹೆ. ದೇವನಹಳ್ಳಿ 09 ಹೆ. ಹೊಸಕೋಟೆ 45 ಹೆ, ನೆಲಮಂಗಲ 22 ಹೆ. ನಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ.ಮುಸುಕಿನ ಜೋಳ ಒಟ್ಟು 70 ಹೆ. ನಲ್ಲಿ ಬೆಳೆಯಲಾಗಿದ್ದು, ದೇವನಹಳ್ಳಿ 11 ಹೆ, ದೊಡ್ಡಬಳ್ಳಾಪುರ 40 ಹೆ, ಹಾಗೂ ನೆಲಮಂಗಲ 20 ಹೆ ಬೆಳೆಯಲಾಗಿದೆ.

ಹುರುಳಿ ಮತ್ತೊಂದು ಪ್ರಮುಖ ಬೆಳೆ: ಇದರ ಜೊತೆಗೆ ಪ್ರಮುಖವಾಗಿ, ಹುರುಳಿಯನ್ನು ಜಿಲ್ಲೆಯಲ್ಲಿ ಹೆಚ್ಚು ಬೆಳೆದಿದ್ದು, ಒಟ್ಟು 486 ಹೆಕ್ಟೇರ್ ನಲ್ಲಿ ಬೆಳೆಯಲಾಗಿದೆ. ದೇವನಹಳ್ಳಿ 30 ಹೆ, ದೊಡ್ಡಬಳ್ಳಾಪುರ 250 ಹೆ, ಹೊಸಕೋಟೆ 150 ಹೆ, 56 ಹೆ, ನಲ್ಲಿ ಬೆಳೆಯಲಾಗಿದೆ.

ಮುಂಗಾರು ಹೆಚ್ಚು: ಈ ಬಾರಿ ಉತ್ತಮ ಮಳೆಯಾದ ಕಾರಣ ಮುಂಗಾರು ಬಿತ್ತನೆ ಹೆಚ್ಚಾಗಿದ್ದು,  ಮುಸುಕಿನ ಜೋಳ ಶೇ 102% ರಷ್ಟು ಹೆಚ್ಚು ಬಿತ್ತನೆ ಮಾಡಲಾಗಿತ್ತು. ಆದರೆ ಹಿಂಗಾರು ಬಿತ್ತನೆ  ಕುಂಟಿತವಾಗಿದೆ.

ಮಳೆಯ ತೊಡಕು: ಕೆಲ ದಿನಗಳ ಹಿಂದೆ ಸುರಿದ ಜಡಿ ಮಳೆಗೆ ಕಟಾವು ಕೆಲಸ ನಿಧಾನವಾಗಿದ್ದು, ರೈತರು ಹಿಂಗಾರು ಬಿತ್ತನೆ ಮಾಡಲು ಇದು ಮುಖ್ಯ ತೊಡಕಾಗಿ ಪರಿಣಮಿಸಿದೆ.  ಕಟಾವು ಕೆಲಸ ಮುಗಿಸಿ ಮತ್ತೆ ಹೊಲ, ಗದ್ದೆಗಳನ್ನು ಮತ್ತೆ ರೆಡಿ ಮಾಡಲು ಸಮಯ ಕಡಿಮೆಯಾಯಿತು.

ನೀರಾವರಿ ಬೆಳೆ ಕಡಿಮೆ:

ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರೂ ಸಹ ಕೆರೆಕುಂಟೆಗಳಲ್ಲಿ ಹೆಚ್ಚು ನೀರು ಶೇಖರಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ  ಗ್ರಾಮಾಂತರ ಭಾಗದಲ್ಲಿ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿಲ್ಲ. ಇದರಿಂದಾಗಿ ರೈತರು ಹಿಂಗಾರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ಈಡೇರದ ಸಚಿವ ಆನಂದ್ ಸಿಂಗ್ ಆನೆ ಕಾರಿಡಾರ್ ಭರವಸೆ; ಕೋಲಾರ ರೈತ ಸಂಘದಿಂದ ವಿನೂತನ ಪ್ರತಿಭಟನೆಸ್ವಲ್ಪ ಪ್ರಮಾಣದ ಬೆಳೆ ನಾಶ:

ಇನ್ನೂ ಈ ವಿಚಾರದಲ್ಲಿ ರೈತ ರಾಜಶೇಖರ್ ಮಾತನಾಡಿಮುಂಗಾರು ಮಳೆ ಚೆನ್ನಾಗಿ ಬಿದ್ದ ಕಾರಣ, ನಿರೀಕ್ಷೆಗೂ ಮೀರಿ ಪಸಲು ಬಂದಿತ್ತು. ಅದರೆ ಕೈ ಸೇರುವ ವೇಳೆಯಲ್ಲಿ ಮಳೆ ಬಂದು ಸ್ವಲ್ಪ ಪ್ರಮಾಣದ ಬೆಳೆ ನಾಶ ಆಗಿದ್ದು, ಅದನ್ನು ಸರಿ ಪಡಿಸಿ ಮತ್ತೆ ಉಳುಮೆ ಮಾಡಲು ನಮಗೆ ಸಮಯ ಇಲ್ಲದೆ ಹಿಂಗಾರು ಬಿತ್ತನೆ ಮಾಡಲು ಸಾಧ್ಯ ಆಗಲಿಲ್ಲ.  ನಾವು ಪ್ರತಿ ವರ್ಷ ಪ್ರಮುಖವಾಗಿ ರಾಗಿ, ಜೋಳ, ಬೆಳೆಯುತ್ತಿದ್ದೆವು ಎಂದರು.

ನಿರೀಕ್ಷೆಯಂತೆ ಬಿತ್ತನೆ ಕಾರ್ಯ ನಡೆದಿಲ್ಲ:

ಇನ್ನೂ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ವಿನುತಾ ಮಾತನಾಡಿ ನಮ್ಮ ನೀರೀಕ್ಷೆಯಂತೆ ಈ ವರ್ಷ ಹಿಂಗಾರು ಬೆಳೆಯ ಬಿತ್ತನೆ ಕಾರ್ಯ ನಡೆದಿಲ್ಲ. ಕಟಾವು ಕೆಲವು ಕಾರ್ಯ ವಿಳಂಬ  ಆಗಿದ್ದರಿಂದ  ಬಿತ್ತನೆ ನಡೆದಿಲ್ಲ. ಬರೀ ನೀರಾವರಿ ನಂಬಿ ವ್ಯವಸಾಯ ಮಾಡುವವರು  ಹಿಂಗಾರು ಬೆಳೆಗಳಿಗೆ ಒಲವು ತೋರುತ್ತಿದ್ದಾರೆ. ಆದರೆ ಈ ಬಾರಿ ಮುಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಇಳುವರಿ ದೊರೆತಿದೆ ಎಂದರು.
Published by: MAshok Kumar
First published: January 20, 2021, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories